ರೋಟಿ ಕಪಡಾ ಔರ್ ಈಗ ಮೊಬೈಲ್

ರೋಟಿ ಕಪಡಾ ಔರ್ ಈಗ ಮೊಬೈಲ್

‘ಹರ್ ಹಾತ್ ಮೆ ಫೋನ್' ಯೋಜನೆಯಡಿ ಬಡತನ ರೇಖೆಯ ಕೆಳಗಿರುವವರಿಗೆ - ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಆಮ್ ಜನತಾಗೆ - ಕೇಂದ್ರ ಸರ್ಕಾರ ಮೊಬೈಲ್ ಫೋನ್ ಕೊಡಲಿದೆ ಎಂಬ ಸುದ್ದಿ ಕೇಳಿ...
ಸೋನಿಯಾ ಗಾಂಧಿ ಅವರನ್ನು ವಿಚಾರಿಸಿದಾಗ ಬಂದ ಪ್ರತಿಕ್ರಿಯೆ : ಖಾನಾ ಇಲ್ಲದಿದ್ದರೆ ಏನಂತೆ, ಟಾಕ್ ಟೈಂ ಸಿಗುತ್ತಲ್ಲ.
‘ವಾಟ್ ಅನ್ ಐಡಿಯಾ ಸರ್ ಜಿ' ಎಂದು ಉದ್ಗರಿಸಿದ್ದು ಯಾರೆಂದು ಗೊತ್ತೇ ಇದೆ. ಅಭಿಷೇಕ್ ಬಚ್ಚನ್ , ಐಶ್ವರ್ಯ ರೈ ಅವರ ಪತಿ.
‘ನನ್ನ ಬಳಿ ಈಗಾಗಲೇ ಒಂದು ಆಂಡ್ರಾಯ್ಡ್ ಫೋನ್ ಇದೆ. ಐ ಫೋನ್ ಅಥವಾ ಐಪ್ಯಾಡ್ ಕೊಟ್ಟರೆ ಚಲೋ ಇರತ್ರಿ' ಎಂದಿದ್ದು ಬಿಪಿಎಲ್ ಕಾರ್ಡ್ ಹೊಂದಿರುವ ಬಸಪ್ಪ ಗುಳೇದಗುಡ್ಡ. ಅವರವರ ಚಿಂತಿ ಅವರವರಿಗೆ. ಒಂದು ಚಲೋ ರಿಂಗ್ ಟೋನ್ ಗೂ ವ್ಯವಸ್ಥೆ ಆಗಬೇಕು ಎಂದು ಬಾಳಪ್ಪ ಕದ್ರಗುಪ್ಪ ಹೇಳಿದರು.
‘ ಐಡಿಯಾ ಅಷ್ಷಾ ಹೈ. ರೇಷನ್ ಅಂಗಡೀಲಿ ಕರೆನ್ಸಿ ಕೊಡುವ ವವ್ಯಸ್ಥೆ ಸಹ ಆಗಬೇಕು' ಎಂದಿದ್ದು ಭಟ್ಕಳದ ಇರ್ಫಾನ್ . ಇವರ ಬಳಿ ಸಹ ಬಿಪಿಎಲ್ ಕಾರ್ಡ್ ಇದೆ .
‘ರಾಯಲ್ ಐಡಿಯಾ ಆಗಿದ್ದರೆ ಒಂದು ಅದ್ಭುತ ಯೋಜನೆ' ಎಂದರು ಮಣಿ ಶಂಕರ್ ಅಯ್ಯರ್.
‘ ನಮ್ಮ ಮುಂದಿನ ಯೋಜನೆ ರಾಹುಲ್ ಗಾಂಧಿ ಪಿಜ್ಜಾ ಯೋಜನೆ. ಇದರಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಸರ್ಕಾರಿ ಮೊಬೈಲ್ ಗಳನ್ನು ಬಳಸಿ ಪಿಜ್ಜಾ ತರಿಸಲು ಆರ್ಡರ್ ಕೊಡಬಹುದು ' ಎಂದರು ದಿಗ್ವಿಜಯ ಸಿಂಗ್ .
‘ ಇ ದು ಬಡತನ ನಿರ್ಮೂಲನೆಯತ್ತ ಒಂದು ದಿಟ್ಟ ಹೆಜ್ಜೆ. ಏಕೆಂದರೆ ಈ ' ಹರ್ ಹಾತ್ ಮೆ ಫೋನ್ ' ಯೋಜನೆಯ ಫೋನ್ ಬಳಸಿ ಪಿಜ್ಜಾ ತರಿಸಲು ಆರ್ಡರ್ ಕೊಡಬಹುದು ' ಎಂದರು ದಿಗ್ವಿಜಯ ಸಿಂಗ್ .
‘ ಇದು ಬಡತನ ನಿರ್ಮೂಲನೆಯತ್ತ ಒಂದು ದಿಟ್ಟ ಹೆಜ್ಜೆ . ಏಕೆಂದರೆ ಈ 'ಹರ್ ಹಾತ್ ಮೆ ಫೋನ್' ಯೋಜನೆಯ ಫೋನ್ ಬಳಸಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಮಂತರಾಗಲು ಸಾಧ್ಯ ' ಎಂದು ಕೆಪಿಸಿಸಿ ಒಂದು ಹೇಳಿಕೆಯಲ್ಲಿ ಬೀಗಿತು .
‘ ಈ ಯೋಜನೆಯಡಿ ಆಗಲಿರುವ ಹಗರಣದ ಬಗ್ಗೆ ದಾಖಲೆಗಳು ಈಗಾಗಲೆ ನನ್ನ ಬಳಿ ಇದೆ. ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗ ಪಡಿಸಲಿದ್ದೇನೆ ' ಎಂದರು ಕುಮಾರಸ್ವಾಮಿ .
‘ ಇಂತಹ ಬ್ಲಾಕ್ ಮೇಲ್ ಗಳಿಗೆ ನಮ್ಮ ಪಕ್ಷ ಹೆದರುವುದಿಲ್ಲ ಎಂದು ಹೇಳಿ ಎಂದು ಮೇಡಂ ನಮಗೆ ತಾಕೀತು ಮಾಡಿದ್ದಾರೆ. ಅದರಿಂದ ಹೇಳುತ್ತಿದ್ದೇನೆ ' ಎಂದರು ಡಿ.ಕೆ. ಶಿವಕುಮಾರ್.
‘ನಾವೇ ಇದನ್ನು ಮಾಡಬೇಕೆಂದಿದ್ದವು . ಆದರೆ ಆಗಲಿಲ್ಲ. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದರೆ ಮಾಡುತ್ತೇವೆ. ಆದರೆ ಈ ಕಾಂಗ್ರೆಸ್ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಲಿದೆ ' ಎಂದಿತು ಭಾಜಪ.
‘ ಇದು ಅಗತ್ಯವಿತ್ತೆ? ನೋಡಿ, ನನ್ನ ಬಳಿ ಮೊಬೈಲ್ ಫೋನೇ ಇಲ್ಲ . ಈ ಯೋಜನೆಯನ್ನು ಪ್ರತಿಭಟಿಸಿ ನಾನು ಉಪವಾಸ ಮಾಡಲಿದ್ದೇನೆ . ಈ ಫಾಸ್ಟ್ ನಿರ್ದಿಷ್ಟವೋ ಅನಿರ್ದಿಷ್ಟವೋ ಎಂಬುದನ್ನು ಎಸ್ ಎಂ ಎಸ್ ಮೂಲಕ ಜನ ಕೇಜ್ರಿವಾಲ್ ಅವರಿಗೆ ತಿಳಿಸಲಿ' ಎಂದರು ಭಾರತದ ಫಾ(ಸ್ಪೆ) ಸ್ಟ್ ಮ್ಯಾನ್ ಅಣ್ಣಾ ಹಜಾರೆ. ಬಾಬಾ ರಾಮದೇವ್ ಅವರ 3 ದಿನಗಳ ಪ್ರತಿಭಟನಾ ಉಪವಾಸ ಈಗಾಗಲೇ ಆರಂಭವಾಗಿದೆ.
ಈ ಮೊಬೈಲ್ ಗಳ ರಿಪೇರಿಗೆಂದೇ ಸರ್ಕಾರ ಒಂದು ವಿಶೇಷ ಇಲಾಖೆ ಆರಂಭಿಸಬೇಕು. ಅದಕ್ಕೆ ಬೇಕಾದ ಸಿಬ್ಬಂದಿ ನೇಮಕದಲ್ಲಿ ಮೀಸಲಾತಿ, ಒಳಮೀಸಲಾತಿ ಇರಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲು ಸಿದ್ಧರಿರುವವರೆಲ್ಲ ಮಿಸ್ಡ್ ಕಾಲ್ ಮೂಲಕ ತಿಳಿಸಲಿ ಎಂದು ಅಖಿಲ ಕರ್ನಾಟಕ ಮೊಬೈಲ್ ಚಳವಳಿ ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.
ಈ ಮೊಬೈಲ್ ಗಳ ಮೂಲಕ ತಮ್ಮ ಸುತ್ತಮುತ್ತಲಿನ 'ಸುಂದರ' ಪರಿಸರದ ಚಿತ್ರಗಳನ್ನು ನನಗೆ ಕಳಿಸಬಹುದು ಎಂದು 'ಸ್ಲಮ್ ಡಾಗ್ ಮಿಲಿಯನೇರ್ 2’ ಚಿತ್ರ ತೆಗೆಯಲಿರುವ ಡ್ಯಾನಿ ಬಾಯ್ಲ್ ಪ್ರಕಟನೆ ನೀಡಿದ್ದಾರೆ .
ಈ 7000 ಕೋಟಿ ರೂ. ಯೋಜನೆಯ ಕಂಟ್ರಾಕ್ಟ್ ಹಿಡಿಯಲು ಈಗಾಗಲೇ ಏಜೆಂಟರು ಸೂಟ್ ಕೇಸ್ ಸಮೇತ ಸೆಕ್ರಟೇರಿಯಟ್ ಬಳಿ ಸುತ್ತಾಡುತ್ತಿರುತ್ತಾರೆ ಎಂದು ಗುಪ್ತಚರ ವರದಿಗಳು ಹೇಳಿವೆ .
ಈ ಯೋಜನೆಗೆ ತಮ್ಮ ಪ್ರತಿಭಟನೆಯನ್ನು ವಿನೂತನವಾಗಿ ಸೂಚಿಸಲು ವಾಟಾಳ್ ನಾಗರಾಜ್ ಐಡಿಯಾಗಳಿಗಾಗಿ ಸಲಹೆ ಕೇಳಿದ್ದಾರೆ. ಅವರಿಗೆ ಫೋನ್ ಮಾಡಿ ತಿಳಿಸಬಹುದು.
‘ದಿ ಅನ್ ರಿಯಲ್ ಟೈಂಸ್ ' ನ ಲೇಖನ ಆಧರಿಸಿ ಬರೆದಿದ್ದು .
 

(ಚಿತ್ರಕೃಪೆ : ಗೂಗಲ್ )