ರೋಧನೆ

ರೋಧನೆ

ಕವನ

ಮನಸ್ಸಿನಲ್ಲಿ ಯಾಕೋ ಮೋಡಕವಿದ ವಾತಾವರಣ,

ಆಯಿತು ನಮ್ಮವರ ಬಂಡವಾಳದ ಅನಾವರಣ..,

ಕಣ್ಣಂಚಿನಲ್ಲಿ ಕಣ್ಣೀರ ಧಾರೆ,

ಆದರೂ ಸಹಿಸಿಕೊಂಡೆ, ಅವರು ನನ್ನವರೆ.

 

ಹಗಲು-ಇರುಳು ಹೇಸರಗತ್ತೆಯಂತೆ ದುಡಿದೆ,

ಪಾಳು ಬಿದ್ದ ಮನೆಯನ್ನು ಅರಮನೆಯಂತೆ ಮಾಡಿದೆ..,

ನನ್ನ ಪರಿಶ್ರಮಕ್ಕೆ ಸಿಗಲಿಲ್ಲ ಸರಿಯಾದ ಬೆಲೆ,

ಆದರು ಕೈಬಿಡಲಿಲ್ಲ ನಾನು ಬೆಳೆದ ಬೆಳೆ.

 

ನಾನು ಹಣ ಕೇಳಿದರೆ,ನನಗೆ ಹಣದ ದುರಾಸೆ,

ಇನ್ನೊಬ್ಬ ಹಣ ಕೇಳಿದರೆ,ಅವನಿಗೆ ಹಣದ ಅವಶ್ಯಕತೆ..,

ಆಹಾ! ಮೆಚ್ಚಿದೆ ನಿಮ್ಮ ಮನದಾಸೆ,

ಯಾರಿಗೆ ಹೇಳಲಿ ನನ್ನ ಜೀವನದ ವ್ಯಥೆ.

 

ಇಷ್ಟು ದಿನದ ತಾಳ್ಮೆಯ ಜೀವನ ಸಾಕಾಗಿದೆ ನನಗೆ,

ಅರಿವಾಗುತ್ತಿಲ್ಲವೆ ನನ್ನ ಮನದ ಬಯಕೆಯು ತಮಗೆ..,

ದೇವರೇ! ನೀ ಸದಾ ನನ್ನ ಜೊತೆ ಇರುತ್ತಿಯ ಎಂಬ ಭಾವನೆ,

ಬೇಗನೆ ಬಂದು ಪರಿಹರಿಸು ಈ ನನ್ನ ಕಷ್ಟಗಳ ರೋಧನೆ.

 

-ಚೇತನಾ. ಸಿ. ಎಸ್, ತುಮಕೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್