ರೌಡಿ ಗೌಡಪ್ಪ
ಗೌಡಪ್ಪ ಯಾಕೋ ಮನೆ ಮುಂದೆ ದರ್ಬೇಸಿ ತರಾ ಕುಂತಿದ್ದ. ಯಾಕಲಾ, ಥೂ ಯಾಕ್ರೀ ಅಂದೆ. ನೋಡಲಾ ಯಾವನೋ ರೌಡಿಯಂತೆ, ಬಂದು ಮಗನೇ ಎತ್ತಲಾ ಕಾಸು ಅಂದು ಹತ್ತು ಸಾವಿರ ರೂಪಾಯಿ ತಗೊಂಡು ಹೋದ ಕಲಾ ಅಂದ. ನೋಡಲಾ ನಾನು ರೌಡಿ ಆಯ್ತೀನಿ, ಯಾಕ್ರೀ ಇಂತಹ ಕೆಟ್ಟ ಯೋಸನೆ ಅಂದೆ. ನೋಡಲಾ ಬಂಡವಾಳ ಇಲ್ಲದ ದುಡಿಮೆ ಅಂದ್ರೆ ಇದೇ ಕಲಾ. ಅಂಗೇ ಸಾನೆ ಬೆಲೆ ಅಂದ. ಯಾಕೆ ಭಿಕ್ಸಾಟನೆ ಅಯ್ತಲ್ಲಾ ಅಂದೆ. ಏ ಥೂ ಅದರಿಂದ ನಮ್ಮ ಡಿಗಿನಿಟಿ ಡವನ್ ಆಯ್ತದೆ ಅಂದೋನು. ನೋಡಲಾ ನಾನು ಬೆಂಗಳೂರಿಗೆ ಹೊಂಟೀವ್ನಿ. ಯಾರನ್ನ ಭೇಟಿಯಾಗಬೇಕು ಹೇಳಲಾ ಅಂದ ಗೌಡಪ್ಪ. ನೋಡ್ರೀ ಜಯ ಕುಮಾರ್, ಕೊತ್ವಾಲ್ ಅಂದೆ. ಲೇ ಅವರೆಲ್ಲ ಸತ್ತು ಹೋಗವ್ರೆ ಅಂದ ಗೌಡಪ್ಪ. ಸರಿ ಬಚ್ಚನ್, ಕೊಟ್ರಿ, ಕೆಂಚ,ಮಚ್ಚು ಮುನಿಯ, ಕುಡುಗೋಲು ಕರಿಯ, ಸಲ್ಕೆ ಸೀನ, ಚಾಕಲೇಟ್ ತಿಮ್ಮ, ಬಾಂಬ್ ಭದ್ರ, ಸರಪಟಾಕಿ ಪಟ್ರಿ, ಅಗ್ನಿ ಶ್ರೀಧರ್ ಇವರನ್ನ ಭೇಟಿಯಾದ್ರೆ ಪ್ರಾಕ್ಟಿಕಲ್ ಹೇಳಿ ಕೊಡ್ತಾರೆ. ಅದೇ ರವಿ ಬೆಳಗೆರೆಯನ್ನು ಭೇಟಿಯಾದ್ರೆ ಥಿಯರಿ ಹೇಳಿ ಕೊಡ್ತಾರೆ ಅಂದೆ. ಲೇ ವಯ್ಯ ಹೇಳೋದು ಸುಳ್ಳಂತೆ, ಅಂಗೆ ಹೇಳಬೇಡ್ರಿ ಆಮ್ಯಾಕೆ ಬಾಟಮ್ ಐಟಮ್್ನಲ್ಲಿ ಬಂದು ಬಿಡ್ತೀರಾ ಅಂದೆ.
ಸರಿ ಗೌಡಪ್ಪ ಬೆಳಗ್ಗೆನೆ ಬಟ್ಟೆಗಿಂತ ಹೆಚ್ಚಾಗಿ ಒಂದು ಎರಡು ಮಚ್ಚು, ಲಾಂಗ್,ಅಂಗೇ ಎರಡು ಕುಡಗೋಲು ತಗೊಂಡು ಪಾಟಿನ ಚೀಲದಲ್ಲಿ ಹಾಕ್ಕೊಂಡು ಹೊಂಟ. ಮಗಂದು ಇವೆಲ್ಲಾ ಇದ್ದಿದ್ದಕ್ಕೆ ಸಾನೇ ಭಾರ ಅನ್ನೋನು. ಮಗಂದು ಚೀಲ ಎಲ್ಲಾ ಹರಿದು, ಮಚ್ಚು ಹೊರಿಕ್ಕೆ ಕಾಣ್ತಾ ಇತ್ತು. ಗೌಡ ಕಬ್ಬಿಣ ವ್ಯಾಪಾರ ಮಾಡ್ತಾನೆ ಅನ್ನೋವು ಐಕ್ಳು. ಯಾಕ್ರೀ. ನಿನ್ನೆ ತಾನೇ ಎಲ್ಲಾ ಸಾನೆ ಹಿಡಿಸಿದ್ದೆ ಕಲಾ, ಅದಕ್ಕೆ ಚೂಪಾಗಿ ಐತೆ ಅಂದ. ಏ ಥೂ. ಇದೆಲ್ಲಾ ಎತ್ಕಂಡು ಹೋಗಕ್ಕೆ ಅಂತಾ ಹಮಾಲಿ ಮುಸ್ತಫಾನ್ನ ಕರಿಸಿದ್ದ. ಬಸ್ಸಲ್ಲಿ ಪಕ್ಕ ಕೂತಿದ್ದವರದು ಮೈ ಕುಯ್ದಿತ್ತಂತೆ. ಅಂಗಿತ್ತು ಮಚ್ಚು.
ಸರಿ ಒಂದು ತಿಂಗಳು ಆದ್ ಮ್ಯಾಕೆ ಹಳ್ಳಿಗೆ ಬಂದ. ಬಂದೋನೆ, ಲೇ ಮಗನೇ ನಿಂಗ ಒಂದು ಅರ್ಧ ಚಾ ಕೊಡಲಾ ಅಂದು ಕುಡಿದು. ಇನ್ ಮ್ಯಾಕೆ ಕಾಸು ಅಂದ್ರೆ ಅಷ್ಟೆ, ಒಂದು ಪಂಚ್, ಡಿಚ್ಚಿ, ಒಂದು ಮಾಂಜಾ, ನೀನು ಫಿನಿಷ್ ಲೇ ಅಂದ. ಪಾಪ ನಿಂಗ ಅಂಗಂದ್ರೆ ಏನ್ರೀ ಗೌಡ್ರೆ ಅಂದ್ರೆ ಸಾನೇ ಹೊಡೆದ. ಇದೆ ಕಲಾ ಅಂದ. ಸರಿ ನಿಮ್ಮ ಮುಖದ ಮ್ಯಾಕೆ ಸಾನೆ ಬ್ಲೇಡ್ ಗಾಯ ಆಗೈತಲ್ಲಾ ಯಾಕೆ. ಸೇವಿಂಗ್ ಹಳೇ ಬಿಲೇಡ್್ನಾಗೆ ಮಾಡಿಕಂಡರಾ ಅಂದ ಸುಬ್ಬ. ಲೇ ಇದಕ್ಕೆ ರೌಡಿ ಭಾಸೆಯಲ್ಲಿ ಕುರುಪು ಅಂತಾರೆ ಕಲಾ. ಈ ಡಿಗ್ರಿ ಆದೋರಿಗೆ ಸರ್ಟಿಫಿಕೇಟ್ ಕೊಡ್ತಾರಲ್ಲಾ ಅಂಗೇ ಇದು ರೌಡಿ ಪ್ರಸಸ್ತಿ ಅಂದ. ಮುಖ ಅನ್ನೋದು ಕಿತ್ತು ಹೋಗಿರೋ ಹಂಡೆ ತರಾ ಆಗಿತ್ತು.
ಹೌದು ಯಾರ ಹತ್ತಿರ ಹೋಗಿದ್ರಿ ಅಂದೆ. ಲೇ ಕಲಾಸಿ ಪಾಳ್ಯದಾಗೆ ಮುಸ್ತಫಾ ರೌಡಿ ಗ್ಯಾಂಗ್್ನಾಗೆ ಇದ್ದೆ ಕಲಾ. ಮೊದಲು ಒಂದು ವಾರ ಮಟನ್ ಅಂಗಡೀಲಿ ಬಿಟ್ಟಿದ್ರು ಕಲಾ. ಅಲ್ಲಿ ಕುರಿ ಕಡಿತಾ ಇದ್ದೆ. ಯಾಕ್ರೀ, ರಕ್ತ ಕಂಡರೆ ಮೂರ್ಚೆ ಹೋಗಬಾರದು ಅಂತಾ, ಆಮ್ಯಾಕೆ ದಿನಾ ರಾತ್ರಿ ನಾಯಿ ಹೊಡಿದಂಗೆ ಹೊಡೆಯೋರು. ಯಾಕೇಂದ್ರ ಗಟ್ಟಿಯಾಗಬೇಕು ಅಂತಾ,. ಅವಾಗ್ಲೆ ಕಲಾ ನನ್ನ ಬಲಗೈ ಮುರಿದಿದ್ದು, ಇನ್ನು ಸರಿ ಆಗಿಲ್ಲ ಅಂದ ಗೌಡಪ್ಪ. ಏ ಥೂ. ಒಟ್ಟು ಒಂದು ತಿಂಗಳು ಟ್ರೇನಿಂಗ್ ಕಲಾ. ಸದ್ಯ ನನ್ನನ್ನ ಭಯೋತ್ಪಾದಕ ಮಾಡ್ಲಿಲ್ಲ ಕಲಾ ಅಂದ.
ಮಗ ಗೌಡಪ್ಪ ಫುಲ್ ರೌಡಿ ಭಾಸೆನೇ ಮಾತಾಡೋನು. ನಾವೆಲ್ಲಾ ಅವನ ಹಿಂದೆ ಫಾಲೋಯರ್ಸ್.
ಸರಿ ಊರ್ನಾಗೆ ದುಡ್ಡು ಎತ್ತಕ್ಕೆ ಸುರು ಮಾಡಿದ್ವಿ. ಅಣ್ಣಾ ಅಂತಿದ್ದ ಹೆಣ್ಣು ಐಕ್ಳೆಲ್ಲಾ ಮುಂಡೇ ಮಕ್ಕಳಿಗೆ ಬೆಂಕಿ ಹಾಕ ಅನ್ನೋವು. ನೋಡ್ರಲಾ ಕಿಸ್ನ ನಮಗೆ ಸುಪಾರಿ ಕೊಟ್ಟವ್ನೆ. ಅವನ ಹಸಾ ಕೊಡಕ್ಕಿಲ್ಲಾ ಅಂತ ಸಾರಾಯಿ ರಂಗ ಹೇಳ್ತವ್ನಂತೆ. ಅವನ ಒಂದು ಕೈ ಕಾಲು ಸ್ಕ್ರಾಪ್ ಮಾಡೋದು. ಈಗ ನಮ್ಮ ಅಡ್ಡೆಯಲ್ಲಿ ಸೇರ್ಕಂಡು ಸ್ಕೆಚ್ ಹಾಕುವಾ ಬನ್ನಿ ಅಂದ. ಹೌದು ಸುಪಾರಿ ಎಷ್ಟಕ್ಕೆ ಅಂದ ಸುಬ್ಬ. ಎಲ್ಲಾರಿಗೂ ನಿಂಗನ ಅಂಗಡೀಲಿ ಅರ್ಧ ಚಾ ಕಲಾ ಅಂದ ಗೌಡಪ್ಪ. ಏ ಥೂ. ಸರಿ ಹೊಂಟ್ವಿ. ಅಟ್ಟೊತ್ತಿಗೆ ಕಿಸ್ನ ಬಂದು, ಈ ಡೀಲ್ ಕ್ಯಾನ್ಸಲ್ ಗೌಡ್ರೆ ಅಂದ. ಯಾಕಲಾ. ರಂಗ ಹಸಾ ತಂದು ಮನೆಗೆ ಬಂದು ಕೊಟ್ಟು ಹೋಗವ್ನೆ ಅಂದ. ನೋಡಲಾ ನನ್ನ ಕಂಡರೆ ಭಯ ಮಗಂಗೆ ಅಂದ ಗೌಡಪ್ಪ. ಇದೇ ಭಯ ಮೇಂಟೇನ್ ಮಾಡಕ್ಕೆ ಹೇಳಲಾ ಅಂದ ಗೌಡಪ್ಪ. ಭಯಾನೂ ಇಲ್ಲ ಏನೂ ಇಲ್ಲಾ. ರಾತ್ರಿ ಕುಡಿದು ಹಸಾ ಪಕ್ಕ ಮಲಗಿದ್ನಂತೆ. ಕಚ ಪಚ ಅಂತಾ ತುಳಿದೈತೆ. ಕೈ ಕಾಲು ಎಲ್ಡೂ ಹಾಳಾಗೈತೆ, ಆಸ್ಪತ್ರಾಗೆ ಅವ್ನೆ ಅಂದ ಕಿಸ್ನ. ಛೆ, ಮೊದಲನೆ ಡೀಲ್ ಫೇಲ್ ಅಂದ ಸೀನ.
ಸರಿ ಮುಂದೆ ಹೊಂಟ್ವಿ. ಎದುರುಗಡೆ ರಾಜಮ್ಮನ ತಮ್ಮ ಬಸವ ಸಿಕ್ಕ. ಯಾಕಲಾ ಗುರಾಯಿಸ್ತೀಯಾ ಅಂದ. ಯಾಕಲೇ ಗೌಡ ಕಡಿತತಾ ಅಂದ ಬಸವ. ಲೇ ಇವನನ್ನ ಎತ್ತು ಬಿಡ್ತೀನಿ ಅಂತಾ ಹಿಂದಿಂದ ಲಾಂಗ್ ತೆಗೆದ. ಲಾಂಗ್ ಕೆಂಪಗೆ ಆಗಿತ್ತು. ಗೌಡ ಲಾಂಗ್ ತೆಗೆದೋನು ಸೆಟ್ಕಂಡ್ ನಿಂತಿದ್ದ. ಮಗಂದು ಲಾಂಗ್ ತೆಗೆಯೋ ಬೇಕಾದ್ರೆ ಬೆನ್ನು ಅಂಗೇ ಸಲ್ಟು ಗೀರ್ಕಂಡು ಬಂದಿತ್ತು. ಒಳಗಿನ ಉಡುಪು ಹರಿದೈತೆ ಅಂದ ಗೌಡಪ್ಪ. ಮಗಂದು ಲಾಂಗ್ ಅನ್ನೋದು 5ಅಡಿ ಇತ್ತು. ಇಷ್ಟೊತ್ತನಕ ಎಲ್ಲಿ ಮಡಿಕಂಡಿದ್ರಿ ಅಂದ ಸುಬ್ಬ. ಹಿಂದೆ ಕಲಾ ಅಂದ, ಅರಿಸಿನ ಹಚ್ಚಿದ್ವಿ. ಲೇ ತುಕ್ಕು ಹಿಡಿದೈತೆ ಸುಗರ್ ಬೇರೆ 700ಪಾಯಿಂಟ್ ಆಗೈತೆ, ಗ್ಯಾಂಗ್ರೀನ್ ಆಯ್ತದೆ ಅಂತಾ ಟಿಟಾನೆಸ್ ಇಂಜೆಕ್ಸ್ ಕೊಡಿಸ್ಕಂಡು ಬಂದ. ಏ ಥೂ.
ಊರ್ನಾಗೆಲ್ಲಾ ನಮ್ಮದೇ ಮಾತು. ನೋಡಲಾ ಗೌಡಪ್ಪನ ಗ್ಯಾಂಗು ಅನ್ನೋರು. ಮಗಾ ಓಂ ಪಿಚ್ಚರ್ ಸಿವರಾಜ್ ಕುಮಾರ್ ಅಂದ್ಕಂಡಿದ್ದ. ಲೇ ಎಲ್ರಲಾ ಮಾಮೂಲಿ ಅನ್ನೋನು. ನಿಂಗನ ಅಂಗಡೀಲಿ ಚಾ ಫ್ರೀ. ಇಸ್ಕೂಲಲ್ಲಿ ಮಧ್ಯಾಹ್ನ ಬಿಸಿಯೂಟ ಫ್ರೀ. ಅಂಗೇ ಕುಲುಮೆಯಲ್ಲಿ ಮಚ್ಚು ಮಸಿಯದಿಕ್ಕೆ ಫ್ರೀ, ಟೆಂಟ್ನಾಗೆ ತಮಿಳು ಪಿಚ್ಚರ್್ಗೆ ಫ್ರೀ. ಕನ್ನಡ ಪಿಚ್ಚರಿಗೆ ನಾವೇ ಕಾಸು ಕೊಟ್ಟು ಹೋಯ್ತಾ ಇದ್ವಿ. ಕನ್ನಡ ಲಾಸ್್ಲ್ಲಿದೆ ಅಂತ. ರಾಜಮ್ಮನ ಅಂಗಡೀಲಿ ಬೀಡಿ ಅಂಗೇ ಬೆಂಕಿ ಪಟ್ಟಣ ಫ್ರೀ. ಒಂದು ದಿನಾ ಗೌಡನ ಹೆಂಡರು ಬಸಮ್ಮ, ಗೌಡಪ್ಪಂಗೆ ಸಾನೇ ಉಗಿತಾ ಇದ್ಲು. ಗೌಡಪ್ಪ ಹೊರಕ್ಕೆ ಬಂದೋನೆ. ಲೇ ನಾನು ಮೆಂಟಲ್ ಆಗಿದೀನಿ. ಇವತ್ತು ಕಿಸ್ನನ್ನ ಎತ್ತಬೇಕು. ರಕ್ತ ನೋಡದೆ ಸಾನೇ ದಿನಾ ಆಗೈತೆ ಅಂದು ಮಚ್ಚನ್ನ ನಾಲಿಗೆ ಮೇಲೆ ಉಜ್ಜಿದ. ನಾಲಿಗೆ ಅನ್ನೋದು ಸೀಳಿ ಹೈವೇಗೇ ಡಿವಡೈರ್ ಹಾಕದಂಗೆ ಆಗಿತ್ತು. ಕಿಸ್ನ ಅಲ್್ಕಾಟಿ ಕಲಾ , ಅಂದ್ರೆ. ಚಾಡಿ ಹೇಳೋನು ಅಂತಾ ಅಂದ. ಕಿಸ್ನಂಗೆ ಹೊಡಿಬೇಕಾ, ಬರೇ ಮಚ್ಚು ತೋರಿಸಿದರೆ ಎದೆ ಹೊಡಕಂಡು ಸತ್ತು ಹೋಯ್ತಾನೆ ಅಂದ ಸುಬ್ಬ. ಆಮ್ಯಾಕೆ ನೀವು ಹೆಂಗೆ ಬೇಕೋ ಅಂಗೆ ಕಡೀರಿ ಅಂದ ಸೀನ. ಲೇ ನಾನೇನು ಪೋಸ್ಟ್ ಮಾರ್ಟಮ್ ಮಾಡೋ ಡಾಕಟರು ಅಂದ್ಕೊಡ್ಯೇನ್ಲಾ ಅಂದ ಗೌಡಪ್ಪ.
ಸರಿ ನಮ್ಮ ಗ್ಯಾಂಗಲ್ಲಿ 6ಜನಾ ಇದ್ದೋರು ಮೂರು ಜನಕ್ಕೆ ಬಂದ್ವಿ, ಯಾಕೇ ಅಂದ್ರೆ ನಿಂಗನ ಅಂಗಡೀಲಿ 4ರಾಗೆ 8ಚಾ ಕೊಟ್ಟರೆ. ಅದ್ರಾಗೆ ಗೌಡಪ್ಪ ಮೂರು ಅರ್ಧ ಚಾ ಕುಡಿಯೋನು, ಬೇಜಾರಾಗಿ ಕೆಲವರು ನಮ್ಮ ಗ್ಯಾಂಗಿಂದ ದೂರ ಹೋಗಿದ್ರು. ಒಂದು ದಿನಾ ಹಿಂಗೆ ಸಿದ್ದೇಸನ ಗುಡಿತಾವ ರಾಜಮ್ಮನ ಗಂಡಂಗೆ ಸ್ಕೀಮ್ ಹಾಕ್ತಾ ಇದ್ವಿ. ಅಟ್ಟೊತ್ತಿಗೆ ಜೀಪ್ನಾಗೆ ಪೊಲೀಸರು ಬಂದು. ಲೇ ಗೌಡ ನೀನು ಹಿಂಗೆ ಮಾಡ್ತಾ ಇರು, ನಿನ್ನನ್ನ ಎನ್್ಕೌಂಟರ್ ಮಾಡಿ ಬಿಸಾಕ್ತೀವಿ ಅಂದ ದಫೆದಾರ್. ನೋಡಲಾ ನನ್ನ ರೌಡಿಸಂಗೆ ಹೆದರಿ ಪೊಲೀಸ್ನೋರು ಬಿರುದು ಕೊಡ್ತಾವ್ರೆ ಅಂದ.
ಅದು ಬಿದುರು ಅಲ್ಲಾ. ನಿಮ್ಮನ್ನ ಯಾರೂ ಇಲ್ದೇ ಇರೋ ಜಾಗಕ್ಕೆ ಕರ್ಕಂಡು ಹೋಗಿ ಬಂದೂಕಲ್ಲಿ ಸುಟ್ಟು ಹಾಕಿ ನಿಮ್ಮ ಮನೆ ಮುಂದೆ ಹೊಗೆ, ರೇಸನ್ ಕಾರ್ಡ್್ನಲ್ಲಿ ಹೆಸರು ಕ್ಯಾನ್ಸಲ್ ಆಯ್ತದೆ ಅಂತಾ ಅಂದ್ರು ಅಂದ ಸುಬ್ಬ. ಅಂಗೇನಲಾ. ಲೇ ನನ್ನ ನಂಬಿಕಂಡಿರೋ ಹೆಂಡರು ವಿಧವೆ ಆಯ್ತಾರೆ ಬೇಡ ಕಲಾ ಅಂದ. ಮತ್ತೆ ಮಚ್ಚು, ಲಾಂಗ್ ಅಂದ ಕಿಸ್ನ. ಇದನ್ನ ಗುಜರಿ ಸಾಬಿಗೆ ಹಾಕಿ ಸಾರಾಯಿ ಕುಡಿಯಲಾ ಅಂದ. ಈಗ ದಿನಾ ಮಂಡ್ಯಕ್ಕೆ ಹೋಯ್ತಾನೆ. ಯಾಕ್ರೀ , ಲೇ ಮುಖದಾಗೆ ಬಿಲೇಡ್ ಗುರುತು ಐತೆ. ಅದಕ್ಕೆ ಸ್ಕಿನ್ ಡಾಕಟರು ತಾವ ಹೋಯ್ತೀನಿ ಅಂತಾನೆ . ಎಲ್ಲಿ ಮತ್ತೆ ಕಲಾಸಿಪಾಳ್ಯದ ರೌಡಿಗಳು ಎತ್ತಾಕಂಡು ಹೋಯ್ತಾರೆ ಅಂತ ಭಯ, ಮಗಾ ಸಿಮ್ ಚೇಂಜ್ ಮಾಡವ್ನೆ. ಅಂಗೇ ರಾತ್ರಿ ಮನೆ ಒಳಿಕ್ಕೆ ಮಕ್ಕೊತಾನೆ. ಏ ಥೂ. ರೌಡಿಸಂಗೆ ಅವಮಾನ ಅಂತಾನೆ ಕಿಸ್ನ.
Comments
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by sm.sathyacharana
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by komal kumar1231
ಉ: ರೌಡಿ ಗೌಡಪ್ಪ
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by ಗಣೇಶ
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by sm.sathyacharana
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by ಗಣೇಶ
ಉ: ರೌಡಿ ಗೌಡಪ್ಪ
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by kavinagaraj
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by komal kumar1231
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by sm.sathyacharana
ಉ: ರೌಡಿ ಗೌಡಪ್ಪ
In reply to ಉ: ರೌಡಿ ಗೌಡಪ್ಪ by ಗಣೇಶ
ಉ: ರೌಡಿ ಗೌಡಪ್ಪ