"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"

ಬರಹ

ನನ್ನ ಮತ್ತು ನನ್ನ ಮನೆಯವಳ ಮೊದಲ ಯುಧ್ಧದ ಹಿನ್ನೋಟ ನಿಮಗೆ ಕೊಡುತ್ತೇನೆ.
ನಾನು ಒಬ್ಬ ಡೆವಲಪರ್ ಮತ್ತು ಮನೆಯವಳು ಬಂದು ಟೆಸ್ಟರ್, ಕೆಲವರಿಗೆ ಈಗಾಗಲೆ ವಿಷಯ ಆಳವ್ಯಾಪ್ತಿಗಳು ಅರ್ಥವಾಗಿರಬಹುದು. ಏನಾದರೂ ವರ್ಕ್ ಆದರೆ ಸಾಕು ಇಂದಿಗೆ ಮನೆಗೆ ಹೋಗಬಹುದು ಎನ್ನುವ ನಾನೆಲ್ಲಿ, ಕೊನೆಯ ಬಗ್ ಹೋಗುವವರೆಗೂ ನಿಮ್ಮ ರಿಲೀಸ್ ವರ್ಕೇ ಆಗ್ತಾ ಇಲ್ಲ ಅನ್ನುವ ಅವಳಿಗೂ ಎಂಥ ಜೋಡಿ.., ಆಹಾ ಎನು ಅಂಥ ಹೇಳಲಿ ಓದುಗ ಮಹಾಶಯ...
ಮೊದಲ ದಿನ ಮನೆಯವಳು ನನಗಿಂತ ಮುಂಚೆ ಮನೆ ತಲುಪಿ..."ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" ಅಂದಳು..
ಮೇಲು ನೋಟಕ್ಕೆ ಅತ್ಯಂತ ಸಾಧಾರಣ ಪ್ರಶ್ನೆ "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" ಅದರಲ್ಲೇನಿದೆ ಅಂಥ ಇನ್ನು "ಒಂದು ಹತ್ತು ನಿಮಿಷ ಚಿನ್ನ" ಅಂದು ಬಿಟ್ಟೆ.......
ಆರು ವಾರಗಳಿಂದ ಟೆಸ್ಟರ್ ಗೆ ಕಾಣದಂತೆ ಬಚ್ಚಿಟ್ಟಿದ್ದ ಬಗ್ ಗಳೆಲ್ಲ ಅಂದೇ ಹೊರಗೆ ಬರಬೇಕೇ?
ನಾನೂ ಟೆಸ್ಟರ್ ನೆ ಮದುವೆ ಆಗಿದೀನಿ ನಾನೂ ನೀನೂ ಬಂಧು ಬಾಂಧವರ ಥರಹ ಇವತ್ತು ಓಂದು ದಿನ ಬಿಟ್ಟು ಬಿಡೋ ಅನ್ನೊ ಮನಸು, ಆದರೆ ವೃತ್ತಿ ಧರ್ಮ ಒಪ್ಪಲಿಲ್ಲ...ಸರಿ ಅಂಥ ಎಲ್ಲವನ್ನೂ ಸರಿ ಮಾಡುತ್ತಾ ಕೂತೆ, ಮತ್ತೆ ಮನೆಯವಳಿಂದ ಫೋನ್ ಬಂತು ಮತ್ತದೇ ಪ್ರಶ್ನೆ "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
ಹಾಳು ನಾಲಿಗೆ ಮತ್ತೆ ಅದೇ ಉತ್ತರ ಕೊಟ್ಟು ಬಿಟ್ಟಿತು......"ಒಂದು ಹತ್ತು ನಿಮಿಷ ಚಿನ್ನ"
ಮನೇಲಿ ಒಬ್ಬಳೇ ಕಾಯ್ತಾ ಇರ್ತಾಳೆ ಛೇ.... ಅಂತ ಅನ್ನಿಸಿತಾದರೂ..ಇನ್ನೇನು ಹೋಗಿ ಬಿಡ್ತಿನಿ ಅಂದುಕೊಂಡು ಯೋಚನೆ ಕೂಡ ಮಾಡದೆ..ನಾನು ನನ್ನ ಹೆಂಡತಿಗೆ ಸುಳ್ಳು ಹೇಳಿದ್ದೆ.(ಹೇಳಿದ ಟೈಮ್ ಗೆ ಮನೆಗೆ ಹೋಗದೆ ಇದ್ದರೆ ಅದು ಮೋಸ ಅನ್ನಿಸಿಕೋಬಹುದು, ದ್ರೋಹ ಅನ್ನಿಸಿಕೋಬಹುದು ಅಥವಾ ಒಂದು ಸಣ್ಣ ಯುಧ್ಧಕ್ಕೆ ಮುನ್ನುಡಿಯಾಗಬಹುದು...ಏನೂ ಆಗದೆ ಅಂತೂ ಇರೋದಿಲ್ಲ)
ನನ್ನ ವಿಷಯದಲ್ಲೂ ಅದೇ ಅಯ್ತು, ಅದು ಜೀವನದ ಮೊದಲ ಯುಧ್ಧಕ್ಕೆ ನಾಂದಿಯಾಯಿತು. ನನ್ನ ಹತ್ತು ನಿಮಿಷದ ಮಾತು ಕಟ್ಟಿಕೊಂಡು ಮನೆಯವಳು ಅಡುಗೆ ಬಿಸಿ ಮಾಡಿದಾಳೆ, ಆರಿ ಹೋಗಿದೆ ಮತ್ತೆ ಬಿಸಿ ಮಾಡಿದಾಳೆ ಮತ್ತೆ ಆರಿ ಹೋಗಿದೆ..ಮೂರನೆಯ ಬಾರಿಗೆ...ಇದೇ ಕೊನೆಯ ಕಾಲ್ ಎನ್ನುವ ನಿರ್ಧಾರ ಮಾಡಿಕೊಂಡು ಮತ್ತೆ ಫೋನ್ ಮತ್ತು ಮತ್ತದೇ ಉತ್ತರ ದೊರಕಿದೆ....ನಾಲ್ಕು ದಿನ ಇದು ಮುಂದಿವರೀತು......

ಮುಂದಕ್ಕೆ ಮನೇಲಿ ಎನಾಯ್ತು? ಅಂದಿನಿಂದ ನನ್ನ ಹೆಂಡತಿ ನನ್ನ ಮಾತು ನಂಬೋದಿಲ್ಲ..ಎರಡು ದಿನ ಮುಂಚೆ ಮನೆಗೆ ಹೋಗಿದ್ದಕ್ಕೆ ನನ್ನ ಮುಟ್ಟಿ ನೋಡಿ..."ಒಹ್ ಇದು ಕನಸು ಅಲ್ವಾ?" ಅಂಥ ಹೇಳಿದಾಳೆ."ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" ಅನ್ನೋ ಸಿಂಪಲ್ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳೋಕೆ ಆಗದಿರೋ ನೀವು ಡೆಡ್ ಲೈನ್ ಎಷ್ಟು ಚೆಂದಗೆ ಸೆಟ್ ಮಾಡಿಕೋತೀರಿ ಅನ್ನೊದು ಗೊತ್ತಾಗುತ್ತೆ ಅಂದಿದಾಳೆ, ದಿನಾ ಮನೆಗೆ ಬರೋದೆ ಹೀಗೆ ಇನ್ನು ಜೀವನ ಹೇಗೆ ಪ್ಲಾನ್ ಮಾಡ್ತೀರೋ ಅಂದಿದಾಳೆ....ಸಾಕಾಗೊಯ್ತು ಸ್ವಾಮಿ ಒಂದು ಪ್ರಶ್ನೆ ಈ ಪರಿ ಕಾಡುತ್ತಾ? ಅದು ಈ ಪರಿ ಬೆಳೆಯಬಹುದಾ? ಹೀಗೆ ನನ್ನನ್ನು ಅಸಹಾಯಕನನ್ನಾಗಿಸಬಹುದಾ? ಈ ಎಲ್ಲದರ ನಡುವೆ ನಮ್ಮ ನಿಮ್ಮೆಲ್ಲರನ್ನು ಕಾಡುವ ಪ್ರಶ್ನೆ
"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"