ಲಂಕೆಯ ಸುಟ್ಟ ಹನುಮ

ಲಂಕೆಯ ಸುಟ್ಟ ಹನುಮ

ಕವನ

ಸೀತಾ ಮಾತೆಯನರಸುವ ಹೊಣೆಯನು

ಮಾರುತಿ ಹೊಂದಿದ ತರುವಾಯ

ಶರಧಿಯ ದಾಟುತ ಸೇರಿದ ಹನುಮನು

ಲಂಕೆಯ ರಾವಣನರಮನೆಯ

 

ದನುಜನ ಬಂಧನದಲ್ಲಿಹ ಮಾತೆಯ

ಕಂಡನು ಅಶೋಕ ವನದಲ್ಲಿ

ಮುದ್ರೆಯ ಉಂಗುರ ತೋರಿಸಿ ರಾಮನ

ನುಡಿಯನು ಅರುಹಿದ ಮಾತೆಯಲಿ

 

ಮರಗಳನೇರುತ ಹಣ್ಣನು ತಿಂದನು

ಉದರದ ಹಸಿವನು ಕಳೆವಂತೆ

ಲಂಕೆಯ ವನಗಳ ಕೆಡಿಸಿದ ರೋಷದಿ

ತನ್ನಯ ಮನಸಿಗೆ ಬಂದಂತೆ

 

ರಾವಣ ಕುವರನು ಬಂಧಿಸಿ ಹನುಮನ

ಬಾಲಕೆ ಬೆಂಕಿಯ ಹಚ್ಚಿದನು

ಬಾಲದ ಬೆಂಕಿಯ ಬಳಸುತ ಮಾರುತಿ

ಸುಟ್ಟನು ದನುಜರ ಲಂಕೆಯನು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್