ಲಂಕೇಶರ ಮಗನ ಪ್ರಚಾರ...
ಬರಹ
ವಿದೇಶದಿಂದ ಡಾನ್ಸ್ ಸ್ಕೂಲ್ ಹುಡುಗಿಯರನ್ನ ಈ ಹಾಡಿಗಾಗಿ ಕರೆಸಿದ್ದಾರೆ. ಮುಂಬೈನ ಮಾಡೆಲ್ ಗಳ ಸಾಥ್ ಸಹ ಇದೆ. ಬೆಂಗಳೂರಿನ ಇಬ್ಬರು ಹುಡುಗಿಯರ ಜೋಡಿ ಇಲ್ಲಿ ಕೆಂಪಾದವೋ ಎಲ್ಲಾ ಕೆಂಪಾದವೋ ಥರವೇ ಇದೆ. ಈ ಒಂದು ಗೀತೆಗಾಗಿ ಸಿದ್ಧವಾದ ಸೆಟ್ ನಿಜಕ್ಕೂ ಚೆಂದ. ಬಾಲಿವುಡ್ ನ "ವೆಲ್ ಕಮ್" ಚಿತ್ರದ ಹಾಡೊಂದರ ಸೆಟ್ ನೆನಪಿಗೆ ಬರುತ್ತದೆ. ಆದ್ರೆ, ಇದು ಕನ್ನಡದ ಮಟ್ಟಿಗೆ ಹೊಸತು ಅಂತಲೇಹೇಳಬಹುದು.
ಪ್ರಚಾರಕ್ಕಾಗಿ ರೆಡಿಯಾದ "ವಾಟ್ಸ್ ಅಪ್" ಪಲ್ಲವಿಯ ಈ ಹಾಡು ಸ್ಯಾಂಡಲ್ ವುಡ್ ಲೆಕ್ಕಕ್ಕೆ ವಿನೂತನ. ಹಿಂದೆ ಯಾವುದೇ ನಿರ್ದೇಶಕ ಚಿತ್ರದ ಪಚಾರಕ್ಕಾಗಿ ನೃತ್ಯ ಮಾಡಿದ್ದಿಲ್ಲ. ಸಖತ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡದ್ದೂ ಇಲ್ಲ. ಇಂದ್ರಜಿತ್ ಇಂತಹ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಸಂತೋಷ್ ಪಾತಾಜೆ ಈ ಒಂದೇ ಒಂದು ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಮುರಳಿ ಕೋರಿಯೋಗ್ರಾಫಿ ಇದಕ್ಕಿದೆ....
ವಿಶೇಷವೆಂದ್ರೆ, ಹುಡುಗ-ಹುಡುಗಿ ಪ್ರಚಾರಕ್ಕೆ ಇಂದ್ರಜಿತ್ ಇನ್ನೊಂದು ತಂತ್ರ ಬಳಸುತ್ತಿದ್ದಾರೆ. ಚಿತ್ರದಲ್ಲಿ ಧರಿಸಿದ ನಟ-ನಟಿಯರ
ಆ ಎಲ್ಲ ಕಾಸ್ಟ್ಯೂಮ್ ಗಳನ್ನ ಧರಿಸಿ ಅದೇ ತಾರೆಯರೂ ರಾಂಪ್ ವಾಕ್ ಕೂಡ ಮಾಡಲಿದ್ದಾರೆ. ಚಿತ್ರದ ಗೀತೆಗಳಿಗೂ ಇವರ ಕುಣಿತವಿದೆ. ಆದ್ರೆ, ಇವರ ಕುಣಿತದಿಂದ ಇಂಡಸ್ಟ್ರೀಲಿ ಸುದ್ದಿಯಂತು ಆಗುತ್ತದೆ. ಆದರೂ, ಚಿತ್ರ ಪ್ರೇಮಿಗಳು ಪ್ರಚಾರದ ಗಿಮಿಕ್ ಗಳಿಗೆ ಮನಸೋಲುವುದಿಲ್ಲ ಅಂತ ಗೊತ್ತೇಯಿದೆ. ಅದಾಗ್ಯೂ ನಿರ್ಮಾಪಕ ಸಂದೇಶ ನಾಗರಾಜ್ ಅಂಡ್ ಮಿಸ್ಟರ್ ಇಂದ್ರಜತ್ "ಹುಡುಗ-ಹುಡುಗಿ" ರೀಚ್ ಮಾಡಲು ಹೊಸ..ಹೊಸ ಸರ್ಕಸ್ ಮಾಡ್ತಾಯಿದ್ದಾರೆ....
- ರೇವನ್ ಪಿ. ಜೇವೂರ್