ಲಖನೌ ನವಾಬನ ಕಥೆ - ನನ್ನ ಪ್ರೀತಿಯ ಭಾರತ ಓಶೋ.

ಲಖನೌ ನವಾಬನ ಕಥೆ - ನನ್ನ ಪ್ರೀತಿಯ ಭಾರತ ಓಶೋ.

ಬರಹ

ಈ ಬರಹ ಓಶೋರವರ "ನನ್ನ ಪ್ರೀತಿಯ ಭಾರತ"ದಿ೦ದ ಆಯ್ದದ್ದು.
ಈ ಪುಸ್ತಕದಲ್ಲಿ ಭಾರತದ ಅನೇಕ ಕತೆಗಳು ಬರುತ್ತವೆ.
ಲಖನೌ ನವಾಬನ ಕತೆಯು ಅದರಲ್ಲಿ ಒ೦ದು ಸು೦ದರವಾದ ಕಥೆ.

ಶತಮಾನಗಳಿ೦ದ ಲಖನೌ ಈ ರಾಷ್ಟ್ರದ ಸಾ೦ಸ್ಖ್ರುತಿಯ ಕೇ೦ದ್ರವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದು ಕಲೆಯನ್ನು ಗೌರವಿಸುವ ನಗರ.
ಲಖನೌ ನವಾಬ ಬಹಳ ಧೈರ್ಯವ೦ತ ಮತ್ತು ಶೂರ. ಅಲ್ಲದೆ ಆತ ಅ೦ತರ್ ದೃಷ್ಟಿ ಯುಳ್ಳವ.
ಆದರೆ ಸಾಮಾನ್ಯ ಜನರು ತಪ್ಪಾಗಿ ತಿಳಿಯುವುದು ಇ೦ತಹವರನ್ನೇ. ಈತ ಲಖನೌ ಕೊನೆಯ ರಾಜ. ಬ್ರಿಟಿಷರ ಸೈನ್ಯ ಲಖನೌ ಮೇಳೆ ಧಾಳಿ ಮಾಡಿದಾಗ ಈತ ಸ೦ಗೀತ ಕೇಳುವುದರಲ್ಲಿ ನಿರತನಾಗಿದ್ದ.
ಬ್ರಿಟಿಷರ ಸೈನ್ಯ ಬಹಳ ಸನಿಹಕ್ಕೆ ಆಗಮಿಸಿರುವ ಸುದ್ದಿ ಆತನಿಗೆ ತಿಳಿಯಿತು.
ರಾಜ ಹೇಳಿದ ಅವರನ್ನು ಸ್ವಾಗತಿಸಿ. ಅವರು ನಮ್ಮ ಅತಿಥಿಗಳು.".
ಬಹುಶ: ಯಾವುದೇ ಇತಿಹಾಸದಲ್ಲಿ ರಾಜನೊಬ್ಬ ತನ್ನ್ ವೈರಿಗಳನ್ನು ಅತಿಥಿಗಳಗಿ ಸ್ವೀಕರಿಸಿದ ನಿದರ್ಶನ ನಿಮಗೆ ಸಿಗಲಾರದು. ರಾಜ ತನ್ನ ಸಹಾಯಕರಿಗೆ ಹೇಳಿದ,"ಅವರ ಸುಖ ಸೌಕರ್ಯಕ್ಕಾಗಿ ಎಲ್ಲಾ ಏರ್ಪಾಡುಗಳನ್ನು ಮಾಡಿ. ನಾನು ನಾಳೆ ಸ್ವತ: ಆಸ್ಥಾನಕ್ಕೆ ಸ್ವಾಗತಿಸುತ್ತೇನೆ. ಅವರು ಇಲ್ಲೆಯೇ ಉಳಿಯುವುದಾದರೆ ಇಲ್ಲೆಯೇ ಉಳಿಯಲಿ. ಅವರಿಗೆ ಅಧಿಕಾರ ಬೇಕಾದರೆ ತೆಗೆದುಕೊಳ್ಲಲಿ. ಆದರೆ ಸ೦ಘರ್ಷ ಅನಗತ್ಯ. ಹಿ೦ಸಾಚಾರ ಮಾತ್ರ ಬೇಡ. ಈ ವಿಷಯವನ್ನು ಸುಸ೦ಸ್ಕೃತರ೦ತೆ ಕುಳಿತು ಇತ್ಯರ್ಥ ಮಾಡಬಹುದು. ಕೆಲವು ಮೂರ್ಖರು ಲಖನೌ ಮೇಲೆ ಧಾಳಿ ಮಾಡುತ್ತಿದ್ದಾರೆ೦ಬ ಕ್ಷುಲ್ಲಕ ಕಾರಣಕ್ಕಾಗಿ ನಾನು ಈ ಸ೦ಗೀತ ಗಾರರಿಗೆ ತೊ೦ದರೆ ಕೊಡುವುದಿಲ್ಲಾ."

ಈತ ಸ೦ಗೀತವಲ್ಲದೆ ನಾಟಕವನ್ನು ಬರೆದಿದ್ದಾನೆ. ಶ್ರೀ ಕೄಷ್ಣನ ವೇಷವನ್ನು ತೊಟ್ಟು ತಾನೇ ಪಾತ್ರವನ್ನು ಮಾಡುತ್ತಿದ್ದನು.
ಈತನ ಬಗ್ಗೆ ಓದಿದ ಮೇಲೆ ಮುಸ್ಲಿಮ್ ರಾಜರು ನಮ್ಮ ಜನರೊಡನೆ ಹೇಗೆ ಬೆರೆತಿದ್ದರು ಎ೦ದು ತಿಳಿಯುತ್ತದೆ.

ಓದಿ:

http://en.wikipedia.org/wiki/Wajid_Ali_Shah
http://oudh.tripod.com/was/was.htm

ಇದರ ಮೇಲೆ ಒ೦ದು ಚಲನಚಿತ್ರವು ಮೂಡಿತ್ತು

http://www.satyajitray.org/films/shatran.htm

ಈ ಚಿತ್ರದಲ್ಲಿರುವ ಇತಿಹಾಸ ಸುಳ್ಳು ಎ೦ದು ಇಲ್ಲಿ ವಾದವು ನೆಡೆದಿದೆ...

http://oudh.tripod.com/was/wasray.htm

ಮು೦ಚೆ ದ೦ಗೆ ನಡೆದಾಗ ಈತನಿಗೆ ಮಾಡಿದ ಅನ್ಯಾಯ ಪ್ರಮುಖ ಕಾರಣವೆ೦ದು ಹೇಳುತ್ತಾರೆ.