*ಲವಣಿ*

*ಲವಣಿ*

ಕವನ

ಲವಣಿಯ ಮೊಗದಲಿ

ದವನವು ಸೂಸುತ

ಪವನದ ಸೋಕಲಿ ಮಿಂಚಿಹಳು

ಅವನಿಯ ಮಡಿಲಲಿ

ರವಣದ ಕೂಗದು

ಚವರಿಯ ಬೀಸುತ ಲಿಂಗನಿಗೆ||

 

ಮಂದಿರ ಚೆಲುವೆಯ

ಸುಂದರ ಕರದಲಿ

ಚಂದದ ಸಲಿಲದ ಸಿಂಚನವು

ಅಂದದ ಸೊಬಗಲಿ

ಮಂದಿರ ಲಿಂಗನ

ಗಂಧದ ಭಸ್ಮವ ಲೇಪಿಸುತ

 

ಪರಶಿವ ಮೂರ್ತಿಗೆ

ಧರೆಯಲಿ ನಡೆದಿದೆ

ತರತರ ಪುಷ್ಪದ ವೈಭವವು|

ತೆರೆಮರೆ ಕಾಣದೆ

ಪರದೆಯ ತೆರೆಯುತ

ಸುರಿದಿದೆ ನಿತ್ಯವು ಹಾಲ್ಬೆಳಕು||

 

ಲಸಿತೆಯ ಮನವದು

ಖುಷಿಯಲಿ ನಲಿದಿದೆ

ಯಶದಲಿ ಲಿಂಗದ ಸಾಂಗತ್ಯ

ಹೊಸತನ ಮೂಡಿದೆ

ಹಸಿರಿನ ಚಿಗುರದು

ಶಶಿಯನು ಹೊತ್ತಿಹ ಸೋಮೇಶ||

 

ಮಹಿಳೆಯ ಛಲದಲಿ

ಸಹನೆಯು ಬೆರೆತಿದೆ

ಲಹರಿಯು ಕಂಪಲಿ ಮಿಂಚುತಿದೆ

ಗಹನದ ಹಾದಿಲಿ

ವಹಣಿಯ ರಾಗಿಣಿ

ಮಹಿಯಲಿ ಶಿವನನು ಪೂಜಿಪಳು||

 

ಉಸಿರಿನ ಬೆರೆಯುತ

ಹೆಸರನು ಗಳಿಸುತ

ಕುಸುಮದ ಸೇಚನ ರಂಜಿಸುತ

ಪಸದನ ಗೈಯುತ

ನಿಶಿತದಿ ದೇವನ

ಬವಸೆಯು ತೀರಲು ಬೇಡುತಲಿ||

 

-*ಅಭಿಜ್ಞಾ ಪಿ ಎಮ್ ಗೌಡ* 

 

ಚಿತ್ರ್