ಲವ್ ಡ್ರಾಪ್ಸ್....ಶಾಯಿರಿಗಳು

ಲವ್ ಡ್ರಾಪ್ಸ್....ಶಾಯಿರಿಗಳು

ಕವನ

ಪ್ರೀತಿ ಮಾಡೋರಿಗೆ ನಿದ್ದೀನ

ಬರೂದಿಲ್ಲಂತ ಬಾಳ ಮಂದಿ ಹೇಳ್ತಾರ!!

ದಯವಿಟ್ಟು, 

ನನ್ನೂ ಯಾರರ ಪ್ರೀತಿ ಮಾಡ್ರಿ

ಯಾಕಂದ್ರ ನನಗ ಬಾಳ ನಿದ್ದಿ ಬರತೈತಿ!

                    *****

ಜೊತೆ - ಜೊತೆಯಾಗಿರುವಾಗಲೇ 

ದಿನಗಳು ಕಳೆದು ಹೋಗುತ್ತವೆ

ಅಗಲಿದ ಮೇಲೆ ಯಾರು 

ಯಾರಿಗೆ ನೆನಪಾಗುತ್ತಾರೆ ಗೆಳೆಯ?

ಜೊತೆಯಾಗಿರುವ ಈ ಕ್ಷಣಗಳನ್ನು 

ಅನುಭವಿಸೋಣ ಗೆಳೆಯ

ಯಾರಿಗೆ ಗೊತ್ತು ನಾಳೆ ನಾವು 

ಬದುಕಿ ಇರ್ತೀವೋ ಇಲ್ಲವೊ!!

             *****

ಮೊದಲ ಬಾರಿಗೆ ಅವಳು 

ನನ್ನ ವಾರೆಗಣ್ಣಿನಿಂದ ನೋಡಿದಾಗ 

ನಾನು ಪ್ರೀತಿಯಿಂದ ಮದೋನ್ಮತ್ತನಾಗಿದ್ದೆ!

ನಂತರ  ಅವಳ ಕಣ್ಣೇ ವಾರೆಗಣ್ಣು 

ಎಂದು ತಿಳಿದಾಗ ಕ್ಷಣಕಾಲ                               

ಭಯದಿಂದ ಮೂರ್ಚೆ ಹೋಗಿದ್ದೆ!

                ******

ಆ ಸೃಷ್ಟಿಕರ್ತನು ನಿನ್ನ

ಯಾವುದೋ ಕಾರಣಕ್ಕೆ ಬಲು 

ಅಂದವಾಗಿ ಸೃಷ್ಟಿಸಿರಬಹುದು!

ನಿನ್ನನ್ನು ಈ ಭೂಮಿಗೆ ತಂದು 

ಬಿಡುವಾಗ ಅವನಿಗೂ ಅಗಲಿಕೆಯ 

ನೋವು ಕಾಡಿರಬಹುದು!!

                ******

ಸೂರ್ಯಾ ಬರಲಿಲ್ಲ ಅಂದ್ರ

ಬೆಳಕ ಹರೀಯೂದಿಲ್ಲ!

ಚಂದ್ರ ಬರಲಿಲ್ಲ ಅಂದ್ರ

ಕತ್ತಲಾನ ಆಗೂದಿಲ್ಲ!

ಮೋಡ ಕಟ್ಟಲಿಲ್ಲ‌ ಅಂದ್ರ

ಮಳೀನ ಬರೂದಿಲ್ಲ!

ನಿನ್ನ ನೆನಪು ಇರಲಿಲ್ಲ ಅಂದ್ರ

ನನ್ನ ದಿನಾನ ಶುರು ಆಗೂದಿಲ್ಲ!!

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

 

ಚಿತ್ರ್