ಲಾಲಿ

ಲಾಲಿ

ಬರಹ

ಲಾಲಿ
ಮುದ್ದು ಕಂದ ನಿನಗೆ, ಅಂದ ಚೆಂದ ಮಾಡಿ,
ಮಂಗಳಾರತಿ ಎತ್ತಿ ಲಾಲಿ ಲಾಲಿ
ಹೆಸರಿಟ್ಟು ಕರೆದು, ತೊಟ್ಟಿಲ ತೂಗಿ
ಜೋಗುಳ ಹಾಡಿರೋ, ಲಾಲಿ ಲಾಲಿ
ಚಂದಿರ ಮುಖದವನೆ ,ಅಂದದ ಮೊಗದವನೆ,
ಸುಂದರಾಂಗನೇ ನಿನಗೆ ಲಾಲಿ ಲಾಲಿ.
ನಕ್ಕು ನಗಿಸುವ,ಅತ್ತು ಅಳಿಸುವ
ಮುದ್ದು ಕಂದ ನಿನಗೆ ಲಾಲಿ ಲಾಲಿ
ರಂಗು ರಂಗಿನ ಅಂಗಿ ಉಡಿಸಿ.
ಬಂಗಾರದ ಒಡವೆಯಾ ತೊಡಿಸಿ,
ಆರತಿ ಎತ್ತಿ,ಜೋಗುಳ ಹಾಡುವರೊ ಲಾಲಿ ಲಾಲಿ.
ಶಾಂತಾ. ಪಿ. ಕೊಲ್ಲೆ.