ಲಾಲ್ ಬಾಗ್ ನ ಸೊಬಗು...

ಲಾಲ್ ಬಾಗ್ ನ ಸೊಬಗು...

ಬರಹ

ಚಿತ್ರಪಟಗಳನ್ನು ಹಾಕಹೋಗಿ ಕೊನೆಗೆ ಲೇಖನವನ್ನೇ ಬರೆಯುವಂತಾಯಿತು.. ಅದಕ್ಕೇ ಅವುಗಳನ್ನು ಲೇಖನದ ಅಡಿಯಲ್ಲಿ ಹಾಕುತ್ತಿದ್ದೇನೆ.. ಸಂಪದ ನಿರ್ವಾಹಕರ ಕ್ಷಮೆಯಿರಲಿ. ಅಳಿಸಿಹಾಕುವುದಿದ್ದರೆ ಚಿತ್ರಗಳ ಅಡಿಯಲ್ಲಿರುವ ಬರಹವನ್ನೇ ತೆಗೆದುಹಾಕಿ.

ನಾನು ಇತ್ತೀಚಿಗೆ ಲಾಲ್ ಬಾಗ್ ಗೆ ಹೋಗಿದ್ದಾಗ ತೆಗೆದ ಚಿತ್ರಗಳಿವು. ಎರಡು ಅಪರೂಪದ ಮರಗಳ ಪರಿಚಯವನ್ನು ಮಾಡುವ ಪ್ರಯತ್ನ ಮಾಡಿದ್ದೇನೆ. ಹೇಗೆಯೇ ಇತರ ಪ್ರಾಣಿ/ಪಕ್ಷಿಗಳ ಚಿತ್ರಗಳಿವೆ. ನಿಮ್ಮ ನಿಸಿಕೆಗಳನ್ನು ಬರೆಯಲು ಮರೆಯಬೇಡಿ.

ಮೊದಲೆನೆಯದಾಗಿ ಮುಚ್ಚಿಲು ಮರವನ್ನು ನೋಡೋಣ. ಮಲೆನಾಡಿನಲ್ಲಿ ಸಾಮಾನ್ಯವಾಗಿದ್ದ ಈ ಮರಗಳು ಈಗ ಕಾಣಸಿಗುವುದೇ ಅಪರೂಪ. ಒಳ್ಳೆಯ ಮೋಪಿನ (ಕೆತ್ತನೆಗೆ/ಫರ್ನಿಚರುಗಳಿಗೆ ಉಪಯುಕ್ತವಾದ) ಮರವಾಗಿದ್ದರಿಂದಲೇ ಇದಕ್ಕೆ ಈ ಗತಿ ಬಂದಿರಬಹುದು. ಈ ಮರದ ಹಣ್ಣುಗಳನ್ನು ಆನೆಗಳು ತಿಂದು ಅದರ ಲದ್ದಿಯಲ್ಲಿ ಬರುವ ಬೀಜಗಳು ಮಾತ್ರ ಹುಟ್ಟುತ್ತವೆ ಎಂದು ಎಲ್ಲೋ ಓದಿದ ನೆನಪು. ಇದು ಸರಿಯೋ ತಪ್ಪೋ ಗೊತ್ತಿಲ್ಲ.. (ಇಂಗ್ಲಿಷಿನಲ್ಲಿ ಇದಕ್ಕೆ ಹೆಸರು "Elephant Apple" ಎಂಬುದಾಗಿ. ಈ ಹೆಸರು ಇದೇ ಕಾರಣಕ್ಕೆ ಬಂದಿದ್ದಿರಬಹುದು ಎಂದು ನನ್ನ ಉಹೆ.) ಸರಿಯಾಗಿದ್ದರೆ ಈ ಮರದ ಅವನತಿಗೆ ಇದೂ ಒಂದು ಕಾರಣವಾಗಿರಬಹುದು.

 

 

ಇನ್ನೊಂದು ಅಪರೂಪದ ಮರದ ಚಿತ್ರಗಳು ಇಲ್ಲಿವೆ ನೋಡಿ.. ಈ ಮರವನ್ನು ನಮ್ಮ ಕಡೆ ಪಿಲಿಗುರು/ಪಿಲಿಂಗುರ/ಪಿಲಿಗುರ ಎಂದು ಕರೆಯುತ್ತಾರೆ. ತುಳುವಿನಲ್ಲಿ ಇದಕ್ಕೆ 'ಹುಲಿ ಉಗುರು' ಎಂಬ ಅರ್ಥ ಬರುತ್ತದೆ. ಈ ಹೆಸರು ಯಾಕೆ ಎಂದು ನನಗೆ ಇನ್ನೂ ಅರ್ಥವಾಗಿಲ್ಲ. ಪ್ರಖ್ಯಾತ ಎಬೋನಿ ಮರದ ಜಾತಿಗೆ ಸೇರಿದ್ದು ಎಂದು ಲಾಲ್ ಬಾಗಿನಲ್ಲಿ ಇದರ ಸಸ್ಯಶಸ್ತ್ರಿಯ ಹೆಸರು ನೋಡಿ, ಗೂಗುಲಿಸಿದ ಮೇಲೆ ತಿಳಿಯಿತು. ಅದರೂ ಈ ಮರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದ್ದಂತಿಲ್ಲ. ಊರಿನಲ್ಲಿ ನಮ್ಮ ಸೊಪ್ಪಿನ ಬೆಟ್ಟದಲ್ಲಿ ಈ ಜಾತಿಯ ಮರದ ಗಿಡಗಳು ಪ್ರಾಕೃತಿಕವಾಗಿ ಹುಟ್ಟಿದ್ದು, ಇದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಅದೃಷ್ಟವಶಾತ್ ಈ ಬಾರಿ ಲಾಲ್ ಬಾಗಿನಲ್ಲಿ ಅದೇ ಮರ ಕಣ್ಣಿಗೆ ಬಿದ್ದಿತ್ತು! 


ಇನ್ನು ವಿಶಾಲವಾಗಿ ಬೆಳೆದು ಕಣ್ಣು ತಂಪು ಮಾಡುವ ಸಾಗುವಾನಿ ಮರಗಳ ಚಿತ್ರಗಳು :

 

ಅಳಿಲು ಮರದ ಮೇಲೆ ಕುಳಿತು ನಿದ್ದೆ ಮಾಡುವುದನ್ನು (ಹಗಲು ಕನಸು ಕಾಣುವುದನ್ನು??) ನೋಡಿದ್ದೀರಾ? ನಾನು ಪ್ರಥಮ ಬಾರಿಗೆ ನೋಡಿದೆ ಲಾಲ್ ಬಾಗಿನಲ್ಲಿ! ನೀವೂ ನೋಡಿ :) : 

 

ಯಾವುದೊ ಕಂಡು ಕೇಳರಿಯದ ಹಣ್ಣು... 

 

ಆಲದ ಜಾತಿಗೆ ಸೇರಿದ ಕೆಲವು ಮರಗಳು (ಎರಡನೆಯದ್ದು ಕೃಷ್ಣ ಅಲ ಅಂತೆ. ನಾನು ಮೊದಲ ಬಾರಿಗೆ ಕೇಳಿದ್ದು/ನೋಡಿದ್ದು) : 

 

ಶಾಂತಿ ಮರ (ಆಯುರ್ವೇದದ 'ತ್ರಿಫಲ' ಗಳಲ್ಲಿ ಒಂದು) : 

 

 

ಅಳಿದುಳಿದ ಜೇನು ತಿನ್ನುತ್ತಿರುವ ಅಳಿಲು : 

 

ಚೀವ್ ಚೀವ್ ಅಳಿಲೆ.. 

 

ಕಾಡು ಹೂವು :

 

ಬಸವನ ಪಾದ ಮರ : 

 

ಗೊರವಂಕ : 

 

ಚಿಟ್ಟೆಗಳ ಲೋಕ : 

 

ಮಂಗನ ಭಂಗಿಗಳು : 

 

ಹೊಳೆ ದಾಸವಾಳ ಮರದ ಕಾಯಿಗಳು : 

 

ಇನ್ನು ಕೊನೆಯದಾಗಿ ನಮ್ಮ ಬೆಂಗಳೂರಿನ ಲಾಲ್ ಬಾಗಿನಲ್ಲಿ ಇಷ್ಟೆಲ್ಲಾ ಇದೆಯಲ್ಲಾ ಭೇಷ್ ಅಂತ ಕುಣಿದಾಡಬೇಡಿ.. ಯಾಕೆಂದರೆ (ವೆಸ್ಟ್ ಗೆಟ್ ಹತ್ರ ಇರೋ ಬಾವಿ ಇದು :) ) :