ಲಿಂಗ ಯಾಕೆ ನೋಡಬೇಕು...!

ಲಿಂಗ ಯಾಕೆ ನೋಡಬೇಕು...!

ಸೂಪರ್ ಸ್ಟಾರ್ ರಜನಿ ಅಭಿನಯದ ‘ಲಿಂಗ’ ಹುಟ್ಟಿಸಿರೋ ನಿರೀಕ್ಷೆ ಅಪಾರ. ಆದರೆ, ತೆರೆ ಮೇಲೆ ಅದೇ ಲಿಂಗನನ್ನ ಕಂಡಾಗ ಆಗೋ ಅನುಭವವೇ ಬೇರೆ. ರಜನಿ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಬಹುದು. ಸಾಮಾನ್ಯ ಪ್ರೇಕ್ಷಕನಿಗೆ ‘ಲಿಂಗ’ ಅಷ್ಟೇನೂ ಹಿಡಿಸೋ ಹಾಗೆ ಕಾಣೊದಿಲ್ಲ...

ಲಿಂಗ ನ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೂ ಚಿತ್ರವನ್ನ ಯಾಕೆ..ನೋಡಬೇಕು...? ಇಂತಹ ಒಂದು ಪ್ರಶ್ನೆ ಬರುತ್ತದೆ. ನಿಜ, ಲಿಂಗ ಚಿತ್ರದಲ್ಲಿ ನಿರ್ಮಾಪಕರು ಬೇಜಾನ್ ದುಡ್ಡು ಖರ್ಚು ಮಾಡಿದ್ದಾರೆ. ಪ್ರತಿ ಫ್ರೇಮ್​ ನಲ್ಲೂ ಆ ಶ್ರೀಮಂತಿಕೆ ಕಂಡು ಬರುತ್ತದೆ. ಇದಕ್ಕಾದರೂ ನೋಡಬೇಕು.ರಜನಿ ಅಭಿಮಾನಿ ನೀವೂ ಆಗಿದ್ದರೇ, ಕಂಡಿತ  ಲಿಂಗ ನಿಮ್ಮನ್ನ ಆವರಿಸಿಕೊಳ್ಳೋದು ಗ್ಯಾರಂಟಿ..ಇನ್ನೂ ಏನಿದೆ...ಮುಂದಿದೆ ನೀವೇ ಓದಿ...

ರಜನಿ ಹೇಗೆ..?
ರಜನಿ ಸೂಪರ್ ಬಿಡಿ. ಅಭಿನಯ ಸೂಪರ್. ಸ್ಟೈಲ್ ಸಖತ್. ರಜನಿ ಸ್ಟೈಲ್ ಕಂಡ ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ....

ಲಿಂಗನ ಹಾಡು;
ಲಿಂಗ ಚಿತ್ರದಲ್ಲಿರೋ ಹಾಡುಗಳಲ್ಲಿ ಧಮ್ ಇಲ್ಲ ಅನಿಸುತ್ತದೆ. ಮನಸ್ಸಿನಲ್ಲಿ ಉಳಿಯೋ ಟ್ಯೂನ್ ಕೂಡ ಇಲ್ಲ ಅನಿಸಿಬಿಡುತ್ತದೆ. ಅದ್ಯಾಕೋ ರೆಹಮಾನ್ ಚಿತ್ರಕ್ಕೆ ಸಂಗೀತ ಮಾಡೋದರಲ್ಲಿ ಬೇಸರಿಸಿದ್ದಾರೇಯೇ..? ಎಂಬ ಅನುಮಾನ ಬರುತ್ತದೆ...

ಡೈಲಾಗ್ ಹೇಗೆ...?
ರಜನಿ ಚಿತ್ರದಲ್ಲಿ ಡೈಲಾಗ್ ಇರುತ್ತವೆ. ಇವುಗಳನ್ನ ಕೇಳಿದ ಪ್ರೇಕ್ಷಕ ಸಿಳ್ಳೆ ಹೊಡೀತಾನೆ. ಕೇಕೆ ಹಾಕ್ತಾನೆ. ಲಿಂಗದಲ್ಲೂ ಅಂತಹ ಸಂದರ್ಭಗಳು ಬರುತ್ತವೆ. ಆದರೆ, ಹೆಚ್ಚೇನೂ ಅಲ್ಲ ಎಂಬೋದು ಅಷ್ಟೇ ಸತ್ಯ.

ಕಥೆ..ಏನೂ..?
ಲಿಂಗ ಕತೆ ಹೇಳಿದರೆ ಮುಗಿತೂ. ಎಲ್ಲವೂ ಹೇಳಿದಂತೆ, ಹಾಗೆ ಆರಂಭದಿಂದಲೂ ಕತೆಯನ್ನ ರಹಸ್ಯವಾಗಿಯೇ ಇಡಲಾಗಿತ್ತು. ತೆರೆ ಮೇಲೆ ಅದೇ ಕಥೆಯನ್ನ ನೋಡಿದಾಗ, ಅಂತಹ ಮಹಾನ್ ಥ್ರಿಲ್ ಏನೂ ಆಗೋದಿಲ್ಲ. ಲಿಂಗೇಶ್ವರ್ ಎಂಬ ರಾಜ್ ಇರುತ್ತಾನೆ. ಜನರ ಒಳಿತಿಗಾಗಿಯೇ ಡ್ಯಾಮ್ ಕಟ್ಟಲು ಮುಂದಾಗುತ್ತಾನೆ...ಮುಂದೇನಾಗುತ್ತದೆ ಎಂಬೋದು ಕತೆ. ಕತೆಯಲ್ಲಿ ಇಬ್ಬರು ರಜನಿಗಳು ಬರೋದೇ ‘ಲಿಂಗ’ ದರುಶನದ ಡಬಲ್ ವಿಶೇಷ....

ಕಥೆಯಲ್ಲಿ ಒಂದು ಸತ್ಯ ಇದೆ...!
ಹೌದು..! ಉತ್ತಮ ಕಟ್ಟವನ್ನ ಕಂಡಾಗ ಇದು ಬ್ರಿಟೀಷ್ ರು ಕಟ್ಟಿದ್ದು ಅಂತಿವಿ. ಇದು ಬ್ರಿಟೀಷರ ಕಾಲದ್ದು ಅಂತ ಅದರ ಕಾಲಮಾನವನ್ನೂ ನೋಡಿಯೇ ಹೇಳಿಬಿಡುತ್ತವೇ. ಆದರೆ, ನಿಜವಾಗಲೂ ಆ ಕಟ್ಟಡವನ್ನ ಕಟ್ಟಿದವರು ಯಾರು...? ಬಿಟೀಷರೇ...? ಅಥವಾ ನಮ್ಮ ರಾಜಮಹಾರಾಜರೇ. ಇಂತಹ ಒಂದು ವಿಚಾರಕ್ಕೆ ಸಂಬಂಧಿಸಿದಂತೆ, ಲಿಂಗ ದಲ್ಲಿ ಬೆಳಕು ಚೆಲ್ಲಲಾಗಿದೆ...

ನಾಯಕಿಯರ ಚೆಲುವು...!
ಅನುಷ್ಕಾ ಶೆಟ್ಟಿ ಹೊಸ ಯುಗದಲ್ಲಿ ಬರ್ತಾರೆ. ಸೋನಾಕ್ಷಿ ಸಿನ್ಹಾ ಹಳೇ ಯುಗದಲ್ಲಿ ಕಾಣಿಸಿಕೊಳ್ತಾರೆ.ಬರೋದು ಬಂದರೂ, ಎಲ್ಲೂ ಈ ನಟಿಯರು ಬೇಸರ ಮೂಡಿಸೋದಿಲ್ಲ. ಚೆಂದಗೆ-ನೀಟಗೆ ಕಾಣಿಸುತ್ತಾರೆ. ರಿಚ್ ಸಾಂಗ್ ಗಳಲ್ಲಿ ರಜನಿ ಜೊತೆಗೆ ಕಾಣಿಸಿಕೊಂಡು ಸೂಪರ್ ಅನಿಸುತ್ತಾರೆ. ಆದರೆ, ಇಡೀ ಚಿತ್ರದಲ್ಲಿ ಬರೋ ಇವರ ಕ್ಯಾರೆಕ್ಟರ್ ಅಷ್ಟೇನೂ ಸೂಪರ್ ಡ್ಯೂಪರ್ ಆಗಿವೇ ಅಂತ ಹೇಳೋಕೆ ಆಗೋದಿಲ್ಲ ಬಿಡಿ...

ಕ್ಲೈಮ್ಯಾಕ್ಸ್ ತುಂಬಾ ಪ್ರ್ಯಾಕ್ಟಿಕಲ್;
ರಜನಿ ಚಿತ್ರದಲ್ಲಿ ಎಲ್ಲವೂ ಅಸಾಮಾನ್ಯವಾಗಿಯೇ ಇರುತ್ತವೆ. ಅವುಗಳನ್ನ ಹೋಲಿಕೆ ಮಾಡಿದರೇ, ಪ್ರಾಕ್ಟಿಕಲ್ ಗೆ ಹತ್ತಿರೋ ಅನಿಸೋದಿಲ್ಲ. ಆದರೂ, ರಜನಿ ಇಷ್ಟವಾಗೂತ್ತಾರೆ. ಆದರೆ, ಲಿಂಗ ಚಿತ್ರದ ಕ್ಲೈಮ್ಯಾಕ್ಸ್ ಕೊಂಚ ಪ್ರಾಕ್ಟಿಕ್ ಅಂತ ಹೇಳಬಹುದು. ಇದನ್ನ ಥಿಯೇಟರ್​ ನಲ್ಲಿ ಹೋಗಿ ನೋಡಿದರೆ, ಒಂದಷ್ಟು ಥ್ರಿಲ್ ಆಗುತ್ತದೆ. ಇನ್ನುಳಿದಂತೆ, ರವಿಕುಮಾರ್ ಗಟ್ಟಿ ಕತೆಯನ್ನ ಆಯ್ಕೆ ಮಾಡಬೇಕಿತ್ತು ಅನಿಸುತ್ತದೆ. ಸೂಪರ್ ಸ್ಟಾರ್ ಗೆ ಸೂಪರ್ ಕತೆ ಇದಿದ್ದರೇ, ಇನ್ನೂ ಸೂಪರ್ ಆಗಿರುತ್ತಿತ್ತು ಅನಿಸುತ್ತದೆ...

ರೇವನ್ ಪಿ.ಜೇವೂರ್,