ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?

ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?

ಬರಹ

"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ. 

ವಿಂಡೋಸ್ ಇನ್ಸ್ಟಾಲ್ ಮಾಡಿದ್ರಿಂದನೋ ಅಥವಾ ಇನ್ಯಾವ್ದಾದ್ರು ಕಾರಣದಿಂದ ಲಿನಕ್ಸ್ ಗೆ  ಬೂಟ್ ಆಗಲು ತೊಂದರೆ ಇದ್ರೆ GRUB ನ recover ಮಾಡ್ಬೇಕು. ಇದನ್ನು ತುಂಬಾ ತರಹದಲ್ಲಿ ಸರಿ ಮಾಡಬಹುದು, ನನಗೆ ಗೊತ್ತಿರೋ ಎರಡು ವಿಧಾನದಲ್ಲಿ ವಿವರಿಸುವ  ಪ್ರಯತ್ನ ಮಾಡಿದ್ದೇನೆ.

ಒಂದು : ಲಿನಕ್ಸ್ ನ  ಯಾವುದಾದರೂ LIVE ಸಿಡಿ ಉಪಯೋಗಿಸಿ GRUB ರಿಕವರ್.
೧) ಲಿನಕ್ಸ್ ನ ಯಾವುದಾದರೂ LIVE ಸಿಡಿ ಉಪಯೋಗಿಸಿ ಲಾಗಿನ್ ಆಗಿ.
೨) Alt + F2 ಒತ್ತಿದರೆ  "Run Application" ಅಂತ ಒಂದು ವಿಂಡೋ ಓಪನ್ ಆಗುತ್ತೆ, ಅದ್ರಲ್ಲಿ   "gnome-terminal" ಅಂತ  ಬರೆದು "Run" ಅಂತ  ಕೊಡಿ.
೩) ಉಬಂಟು LIVE ಸಿಡಿ  ಬಳಸಿದ್ದಾದರೆ  sudo grub ಅಂತ  ಬರೆದು Enter ಬಟನ್  ಒತ್ತಿ, ಫೆಡೋರಾ ಬಳಸಿದ್ದರೆ   su ಅಂತ ಬರೆದು Enter ಬಟನ್ ಒತ್ತಿ  ಆಮೇಲೆ /sbin/grub ಅಂತ  ಬರೆಯಿರಿ. ಈಗ  grub> ಅಂತ  ಬರುತ್ತೆ.
೪) ಈಗ    find /boot/grub/stage1 ಅಂತ  ಬರೆದು "Enter" ಒತ್ತಿದಾಗ ಕಂಪ್ಯೂಟರಿನಲ್ಲಿದ್ದ ಎಲ್ಲಾ ಲಿನಕ್ಸ್ ರೂಟ್ ಪಾರ್ಟಿಷನ್ ತೋರಿಸುತ್ತೆ.
ನನ್ನ ಕಂಪ್ಯೂಟರ್ ನ  6ನೇ ಪಾರ್ಟಿಷನ್ ಅಲ್ಲಿ ಉಬಂಟು ಹಾಗೂ  7ನೇ ಪಾರ್ಟಿಷನ್ ಅಲ್ಲಿ ಫೆಡೋರಾ ಇನ್ಸ್ಟಾಲ್ ಮಾಡಿದ್ದೇನೆ, ಹಾಗಾಗಿ ಮೇಲೆ ಬರೆದ  ಸ್ಕ್ರಿಪ್ಟ್  ರನ್ ಮಾಡಿದಾಗ   (hd0,5) ಮತ್ತು (hd0,6) ಅಂತ ತೋರಿಸುತ್ತೆ.
೫) ಈಗ ಯಾವ ಲಿನಕ್ಸ್ ಅನ್ನು ರಿಕವರ್ ಮಾಡಬೇಕೋ ಅದನ್ನು  ಕೆಳಗೆ ತೋರಿಸಿದಂತೆ ಬರೆದು ರನ್ ಮಾಡಿ.
root (hd0, 5)
೬) ಇದಾದ ನಂತರ  setup (hd0) ಅಂತ ಬರೆದು ರನ್ ಮಾಡಿ. ಅಲ್ಲಿಗೆ GRUB ರಿಕವರ್ ಮಾಡಿ ಮುಗೀತು, quit ಅಂತ ಬರೆದು  ಟರ್ಮಿನಲ್ ಕ್ಲೋಸ್ ಮಾಡಿ , ಕಂಪ್ಯೂಟರ್ ರಿಸ್ಟಾರ್ಟ್ ಮಾಡಿ GRUB ಮೆನು ಬರುತ್ತೆ.

ಉಬಂಟು ಲೈವ್ GRUB ರಿಕವರಿ

ಫೆಡೋರಾ ಲೈವ್ GRUB ರಿಕವರಿ

ಎರಡು : ಲಿನಕ್ಸ್ ನ ಇನ್ಸ್ಟಾಲೇಬಲ್ ಸಿಡಿ ಉಪಯೋಗಿಸಿ GRUB ರಿಕವರ್.
ಈ ವಿಧಾನದಲ್ಲಿ ಲಾಗಿನ್ ಆಗೋದು ಬೇಡ, ಪ್ರಾರಂಭದಲ್ಲೇ "Rescue Installed System" ಅಂತ ಕೇಳುತ್ತೆ. ಅದನ್ನ ಸೆಲೆಕ್ಟ್ ಮಾಡಿದಾಗ  ರೂಟ್ ಶೆಲ್ ಗೆ ಕಂಟ್ರೋಲ್ ಸಿಗುತ್ತೆ(ರೂಟ್ ಶೆಲ್ ಅಂದ್ರೆ ರೂಟ್  ಅಥವಾ ಅಡ್ಮಿನ್ permission ಇರುವ ಟರ್ಮಿನಲ್ ಅಂತ). ಈಗ grub ಅಂತ  ಬರೆದು "Enter" ಒತ್ತಿ, ಆಗ grub> ಅಂತ  ಬರುತ್ತೆ. ಮೇಲೆ ತಿಳಿಸಿದ, ಮತ್ತು ನೇ steps ನಿಂದ GRUB ರಿಕವರ್ ಮಾಡಬಹುದು.
--------------
ಲಿನಕ್ಸ್ ಇನ್ಸ್ಟಾಲೇಬಲ್ ಸಿಡಿಯಿಂದ GRUB ರಿಕವರಿ

ವಿಂಡೋಸ್ ನಿಂದ ಲಿನಕ್ಸ್ ಪಾರ್ಟಿಷನ್ ಡಿಲೀಟ್ ಮಾಡಿದ್ದರೆ GRUB ಕೂಡ ಡಿಲೀಟ್ ಆಗಿರೋದ್ರಿಂದ ಲಿನಕ್ಸ್ ಗೆ ಲಾಗಿನ್ ಆಗೋದು ಸಾದ್ಯ ಆಗಲ್ಲ, ಹಾಗೇ ಡಿಲೀಟ್ ಮಾಡಿದಾಗ ವಿಂಡೋಸ್ ಪಾರ್ಟಿಷನ್ Active ಆಗಿರೋಲ್ಲ ಹಾಗಾಗಿ ವಿಂಡೋಸ್ ಗೂ ಕೂಡ ಲಾಗಿನ್ ಆಗಕ್ಕಾಗಲ್ಲ.
ಲಿನಕ್ಸ್ ಅನ್ನು ಡಿಲೀಟ್ ಮಾಡಿರೋದ್ರಿಂದ GRUB ರಿಕವರ್ ಮಾಡೋ ವಿಧಾನ ಇಲ್ಲಿ  ಪ್ರಯೋಜ್ನಕ್ಕೆ  ಬರೋದಿಲ್ಲ. ಅದಕ್ಕೆ  ವಿಂಡೋಸ್ ನ ಬೂಟ್ ಲೋಡರ್ ಅನ್ನು ಸರಿ ಪಡಿಸ್ಬೇಕು.

ವಿಂಡೋಸ್ ಬೂಟ್ ಲೋಡರ್ ರಿಕವರಿ ಮೆನು
ವಿಂಡೋಸ್ ಬೂಟ್ ಲೋಡರ್ ಸರಿ ಮಾಡಲು XP ಸಿಡಿ  ಹಾಕಿದಾಗ ಬಂದ ಮೆನುವಿನಲ್ಲಿ  R ಒತ್ತಿದರೆ Recover ಅಂತ  ಬರೆದಿರುತ್ತೆ  ಅದನ್ನು  ಆಯ್ಕೆ ಮಾಡಿ.ಈಗಾಗಲೇ ಇನ್ಸ್ಟಾಲ್ ಆಗಿರೋ ಯಾವ ವಿಂಡೋಸ್ ಗೆ ಲಾಗಿನ್ ಆಗ್ಲಿ ಅಂತ ಕೇಳುತ್ತೆ.
ನನ್ನ ಕಂಪ್ಯೂಟರ್ ನಲ್ಲಿ ಒಂದೇ ವಿಂಡೋಸ್ ಇದ್ದಿದ್ರಿಂದ ಒಂದೇ ಮೆನು ತೋರಿಸ್ತು. ಯಾವ ವಿಂಡೋಸ್ ಬೇಕೋ ಅದನ್ನೇ ಸೆಲೆಕ್ಟ್ ಮಾಡಿ. ಅಡ್ಮಿನಿಸ್ಟ್ರೇಟರ್ ಗುಪ್ತಪದ ಕೇಳುತ್ತೆ, ಇದ್ದರೆ  ಬರೆಯಿರಿ  ಇಲ್ಲದಿದ್ದರೆ ಹಾಗೇ "Enter" ಒತ್ತಿ.
ಈಗ  fixmbr ಅಂತ  ರನ್ ಮಾಡಿ, ಬೂಟ್ ಲೋಡರ್ ರಿಕವರ್ ಆಗುತ್ತೆ. 

ವಿಂಡೋಸ್ fixMBR