ಲೂಲು ಟ್ರಾವೆಲ್ಸ್

ಲೂಲು ಟ್ರಾವೆಲ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಸಾದ್ ಶೆಣೈ ಕಾರ್ಕಳ
ಪ್ರಕಾಶಕರು
ಬಿಳಿಕಲ್ಲು ಪ್ರಕಾಶನ ಬೋರ್ಗಲ್‌ಗುಡ್ಡೆ, ನಿಟ್ಟೆ ಅಂಚೆ, ಕಾರ್ಕಳ ೫೭೪ ೧೧೦
ಪುಸ್ತಕದ ಬೆಲೆ
೧೦೦.೦೦

ಪ್ರಸಾದ್ ಶೆಣೈ ಕಾರ್ಕಳ ಇವರ ಚೊಚ್ಚಲ ಕಥಾ ಸಂಕಲನವು ಬಹಳಷ್ಟು ವಿಷಯಗಳಿಂದ ಗಮನ ಸೆಳೆಯುತ್ತದೆ. ೨೦೧೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಥಾ ಸಂಕಲನದ ಮುಖಪುಟ ಮತ್ತು ಆಕಾರ ಗಮನಿಸುವಾಗ ಅತ್ಯಂತ ಆತ್ಮೀಯತೆ ಕಂಡು ಬರುತ್ತದೆ. ೧೭ ಎಕ್ಸ್‌ಪ್ರೆಸ್ ಕತೆಗಳನ್ನು ಹೊಂದಿರುವ ಈ ಪುಸ್ತಕಕ್ಕೆ ಕಥೆಗಾರ ಅಬ್ದುಲ್ ರಶೀದ್ ಇವರು ಮುನ್ನುಡಿ ಬರೆದಿದ್ದಾರೆ. ಪ್ರಸಾದ್ ಶೆಣೈ ಇವರು ತಾವು ಹುಟ್ಟಿ ಬೆಳೆದ ಪರಿಸರ, ಊರು ಇದರ ತುಂಬೆಲ್ಲಾ ಸುತ್ತಾಡಿದ್ದಾರೆ ಮತ್ತು ಕಥೆ ಓದುತ್ತಾ ಓದುತ್ತಾ ನಮ್ಮನ್ನೂ ಸುತ್ತಿಸುತ್ತಾರೆ. ಒಮ್ಮೆ ಓದಿ ನೋಡುವುದರಲ್ಲಿ ಯಾವ ಮೋಸವೂ ಇಲ್ಲ.