ಲೆಕ್ಕವಿಡುವ೦ಥದ್ದು ಕೇವಲ ಸೋಲುಗಳನ್ನಷ್ಟೇ...!

Submitted by ksraghavendranavada on Sat, 01/17/2015 - 19:00
ಬರಹ

ಕಣ್ಣುಮುಚ್ಚಿದರೇ ಸರಸರನೆ ಚಿತ್ರಗಳ೦ತೆ

ಹಾದು  ಹೋಗುವ ಭವಿಷ್ಯದ ಚಿ೦ತೆಗಳಿಗೆ

ಜನ್ಮವಿಡೀ ಸಾಕಾಗದೇನೋ ಎ೦ಬುವ ಮತ್ತೊ೦ದು

ಚಿ೦ತೆಯ ಕೂಡಿಕೆ!

 

ಅಬ್ಬ ಹಾಗಿದ್ದೆ ನಾನು! ಎನ್ನುತ್ತಲೇ

ದುತ್ತನೆ೦ದು ಕಾಡುವ ವರ್ತಮಾನದ

ಪೀಕಲಾಟಗಳು ಮನಸ್ಸಿನ ಉತ್ಸಾಹಕ್ಕೆ

ಎರಚಿದ ತಣ್ಣೀರು ಹನಿಹನಿಯಾಗಿ ಕೆಳಗುದುರುವಷ್ಟರಲ್ಲಿಯೇ

ಮತ್ತೊ೦ದು ಉಲ್ಲಸಿತ ಕ್ಷಣದ ಆಗಮನದಿ೦ದ

ತಾತ್ಕಾಲಿಕ ಉಪಶಮನ! 

 

ಆ ಕ್ಷಣದ ಸತ್ಯವಷ್ಟೇ... ದೂರದಲ್ಲೆಲ್ಲೋ

ಕೇಳಿಬರುವ ಟೇಪ್ ರೆಕಾರ್ಡರ್ ನ ಸ೦ಗೀತವು

ಅತ್ತಲೇ ಇಟ್ಟ ಹೆಜ್ಜೆಯ ಲೆಕ್ಕ ಎರಡಾದರೆ ಸಾಕು

ಟಪ್ಪನೇ ನಿ೦ತೇ ಹೋಗಿರುತ್ತದೆ!

ಮೂಗಿಗೆ ತುಪ್ಪ ಸವರಿದ೦ತೆ!

ಸ೦ಪೂರ್ಣ ಅನುಭವಿಸುವ ಮೊದಲೇ

ಶಕ್ತಿ ಕಳೆದುಕೊ೦ಡ ನಿಸ್ತೇಜನ೦ತೆ!

ಅಪರೂಪಕ್ಕೊ೦ದು ನಲಿವಷ್ಟೇ..

ಲೆಕ್ಕವಿಡುವ೦ಥದ್ದು ಕೇವಲ ಸೋಲುಗಳನ್ನಷ್ಟೇ...!

    

 

Comments