ಲೇಖನಿಯ ಸಮರ

Submitted by rashmi_pai on Mon, 07/01/2013 - 16:13
ಬರಹ

ಒಮ್ಮೆ ಕೊಡವಿ

ಮತ್ತೊಮ್ಮೆ ಒತ್ತಿ

ಅಡ್ಡಾದಿಡ್ಡಿ ಗೀಚಿ

ಆಮೇಲೆ ಬರೆಯ ತೊಡಗಿದಾಗ

ಮುಷ್ಕರ ಹೂಡಿತ್ತು

ನನ್ನ ಹೊಸ ಲೇಖನಿ

 

ಸಿಟ್ಟಿನಿಂದ ಇನ್ನೂ ಜೋರಾಗಿ

ಕೆಡವಿದಾಗ ಚೆಲ್ಲಿದ ಆ

ಬಿಂದು ಶಾಯಿಯಲ್ಲಿ

ಕವಿ ಮನಸ್ಸಿನ ನೋವಿತ್ತು

 

ಖಾಲಿ ಹಾಳೆಯಲ್ಲಿ

ಬರೆಯಲೊಲ್ಲದೆ

ಬಿದ್ದ ಶಾಯಿಯ

ಪ್ರತಿಭಟನೆಯ ಕಿಚ್ಚು

ನನ್ನ ಕೆರಳಿಸಿದಾಗ

ಹಾಳೆಯನ್ನೇ

ಮುದ್ದೆ ಮಾಡಿ ಬಿಸಾಡಿದೆ

 

ಬರೆಯಲಿ ಹೇಗೆ?

ಮೌನ ಪ್ರತಿಭಟನೆ ನನ್ನದು

ಲೇಖನಿಯದ್ದೂ...

ಚಿತ್ರ್