ಲೈಫು ಇಷ್ಟೇನೇ.....

ಲೈಫು ಇಷ್ಟೇನೇ.....

ಬರಹ


ಲೈಫು ಇಷ್ಟೇನೇ
ಎನ್ನುವವರು ಎಷ್ಟು
ಲೈಫುಗಳ ಫೈಲುಗಳನ್ನು
ಫೈನಲ್ಲಾಗಿ  

ನೋಡಿರುವರು!?
ಲೈಫು ಇಷ್ಟವಾದವರಿಗೆ ಇಷ್ಟ
ಕಷ್ಟ ಎನಿಸಿದವರಿಗೆ ಕಷ್ಟ
ಕನಿಷ್ಟ ಅನಿಸಿದವರಿಗೆ ಕನಿಷ್ಟ
ಅನಿಷ್ಟ ಅನಿಸಿದವರಿಗೆ ಅನಿಷ್ಟ
ಲೈಫು ವ್ಯಾಸ್ಟು
ಎನಿಸಿದವರಿಗೆ ಅದು ವ್ಯಾಸ್ಟು
ಇನ್ನೂ ಕೆಲವರಿಗೆ ಅದು ಎ೦ದಿಗೂ ವೇಸ್ಟು
ಅರ್ಥಮಾಡಿಕೊ೦ಡವರಿಗೆ ಅದು ಬೆಸ್ಟು
ಅನೇಕರು ಲೈಫಿನಲ್ಲಿ ಬೀಳುತ್ತಾರೆ ಬೇಸ್ತು

ಲೈಫಿನಲ್ಲಿ ಫೈನಲ್ಲಾಗಿ ಫೇಲ್ ಆದವರೂ ಇದ್ದಾರೆ
ಫ಼ೈನೆಸ್ಟ್ ಆಗಿ ಫ಼ೇಮ್ ಆದವರೂ ಇದ್ದಾರೆ
ಲೈಫ್ ಒಬ್ಬರಿಗೆ ಒಗಟು
ಕೆಲವರಿಗೆ ಒರಟು
ಕೆಲವರಿಗೆ ಕಮಟು
ಲೈಫು ಹಲವರಿಗೆ ಅದು ಸ್ಪೋರ್ಟು
ಹಲವರಿಗೆ ಅದು ಸ್ಮಾರ್ಟು..
ಲೈಫು ಹೀಗೇ ಅ೦ಥ ಹೇಳಿದ ಎಲ್ಲರೂ
ಹಾಗೇ ಉಫ್ ಉಫ್ ಆಗಿದ್ದಾರೆ. ...

 

ಲೈಫಿನ ವ್ಯಾಖ್ಯಾನ
ಇಲ್ಲಿಗೇ ಇ೦ದಿಗೇ ಮುಗಿಯಲಾರದು.
ಲೈಫು ಇರುವವರೆಗೂ
ಲೈಫಿನ ಬಗ್ಗೆ ಫಿಲಾಸಫಿ
ಸಫಿಶಿಯ೦ಟಾಗಿ
ಸೃಷ್ಟಿಯಾಗುತ್ತಲೇ ಇರುವುದು
ಹೌದು ಲೈಫು ಅ೦ದ್ರೆ ಇಷ್ಟೇ ಅಲ್ಲ
ಇನ್ನೂ ಇನ್ನೂ....

 

********