ಲೈಫ್ ಚುಟುಕಗಳು - ೩ - ಪುಟ್ಟಿಯ ರಿಕ್ವೆಸ್ಟು
“ಅಪ್ಪ ನನಗೆ ಸ್ವಲ್ಪ ದುಡ್ಡು ಬೇಕು, ಕೊಡಿ” ಎಂದು ಕೇಳಿದಳು ನಮ್ಮ ಮೂರುವರೆ ವರುಷದ ಪುಟ್ಟಿ.
“ನಿನಗೆ ಯಾಕಮ್ಮಾ ದುಡ್ಡು”?
“ಬೇಕು, ನಾನು ಕಾಫಿ ಡೇ ಗೆ ಹೋಗ್ಬೇಕು”
॑ಕಾಫಿ ಡೇ'ಗೆ ಹೋದರೆ ನಾವು ದುಡ್ಡು ಕೊಡೋದಿಲ್ಲ ಪುಟ್ಟಿ. ಇಗೋ ಇಲ್ಲಿ ಮೊಬೈಲ್ ಇದೆಯಲ್ಲಾ, ಅದರಲ್ಲಿರೋ ಆಪ್ ಬಳಸಿ ಡಿಜಿಟಲ್ ವ್ಯಾಲೆಟ್ ಮೂಲಕ ದುಡ್ಡು ಕೊಡುತ್ತೇವೆ”
“ಹಾಗಾದರೆ ನಿಮ್ಮ ಮೊಬೈಲ್ ಕೊಡಿ ನನಗೆ”