"ಲೋಕತಾರಕ ಬಾಪೂ," ಎಂಬ ಅಪರೂಪದ ಖಾದ್ಯ !

"ಲೋಕತಾರಕ ಬಾಪೂ," ಎಂಬ ಅಪರೂಪದ ಖಾದ್ಯ !

ಬರಹ

ಆಕ್ಟೋಬರ್ ತಿಂಗಳ, 'ಮಯೂರ,' ಮಾಸಪತ್ರಿಕೆಯಲ್ಲಿ " ವಿಹಾರಿ" ಯವರು ಬರೆದ ಲೇಖನ, ಇಂದಿಗೆ ಬಹುಪ್ರಸ್ತುತವಾದ ಲೇಖನ. [ಪುಟ- ೧೨೨.] ಓದುಗರ ಗಮನಕ್ಕಾಗಿ, ಅದನ್ನು ಮತ್ತೆ ಪ್ರಸ್ತುತ ಪಡಿಸುತ್ತಿದ್ದೇನೆ.

ಕೆಳಗಿನ ವಿಶಿಷ್ಟ ಕವನವನ್ನು ಬರೆದವರು, ನಮ್ಮ ಪ್ರಖ್ಯಾತ ನಾಟಕಕಾರರಾದ ಕೈಲಾಸಂರವರು. ನಾಟಕಗಳನ್ನೇ ಅತಿಯಾಗಿ ಬರೆದ ಅವರು, ಕವನವನ್ನು ಬರೆದಿರುವುದು ಅಪರೂಪ. ಅದನ್ನು ಹೆಚ್ಚಾಗಿ ಯಾರೂ ಗಮನಿಸಿಲ್ಲ. ಆದರೆ, 'ವಿಹಾರಿ' ಯವರ ಕಣ್ಣಿನಿಂದ ಅದು ತಪ್ಪಿಸಿಕೊಂಡುಹೋಗಿಲ್ಲ. ನಮ್ಮಲ್ಲಿ ಕೆಲವರು, ಭಗವಾನ್ ನೆ, 'ಪುರ್ಸತ್ ಮೆ ಬನಾಯ,' ಎನ್ನುವ ಮಾತನ್ನು ನಾವೆಲ್ಲಾ ಕೇಳಿದ್ದೇವೆ.

ವಯಸ್ಸಾದ ಬಾಪೂ, ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ, ದೇಶಕ್ಕಾಗಿ ದುಡಿದ ದಿನಗಳು ದಾಖಲಿಸಲು ಯೋಗ್ಯವಾಗಿವೆ. ’ಕಡ್ಡಿಕಾಲು” ಎಂದು ಕರೆಯುವಷ್ಟು ಅತಿ ಬಡಕಲು ಶರೀರ, ಕನ್ನಡಕ, ಅರ್ಧಬೆತ್ತಲೆ ಶರೀರ, ಅಗಲವಾದ ಕಿವಿಗಳು; ಆದರೆ ಮುಖದಲ್ಲೋ ತಾಯ್ಯನ್ನು ಅಪ್ಪಿ ಆಸರೆಪಡೆಯುತ್ತಾ, ಮುಗುಳ್ನಗುವ ಮಗುವಿನ ತರಹದ ಆಹ್ಲಾದ ! ಅವರ ಮುಂದೆ ನಿಂತಾಗ ಕಷ್ಟ -ಕೋಟಲೆಗಳಿಗೆಲ್ಲಾ ಪರಿಹಾರ ದೊರೆತಂತೆ ಭಾಸವಾಗುತ್ತಿತ್ತು. ಅದಕ್ಕೇ ಅವರನ್ನು ಕೈಲಾಸಂ, "ಲೋಕತಾರಕ," ಎಂದು ಸಂಬೋಧಿಸಿದ್ದಾರೆ.

ಇದು ನಮ್ಮೆಲ್ಲರ ಕಣ್ಣು ತೆರೆಸುವ ಅತ್ಯಂತ ಅಪರೂಪದ ಕವಿತೆ. ಅಪರೂಪದ ವ್ಯಕ್ತಿಯಾದ ಗಾಂಧಿಯವರಿಗೆ ಸಲ್ಲುತ್ತದೆ. ಇಂತಹ ಕೃತಿರಚನೆ ಕನ್ನಡದಲ್ಲಿ ಮಾತ್ರ ಲಭ್ಯವೆಂದು, ಕೆಲವರ ಅಂಬೋಣ.

 

The Recipe :

Into a bare handful of lones and skin Pour just an ounce or so flesh and blood;

Put in a heart love-full as SEA in flood; Likewise a mind sea-deep and free from sin;

Fix on two jumboo ears...two goo goo eyes' Paint on a smile of babe at mother's breast;

Inclose a soul that caps Himvat's crest And speaks with tongue which honey's sweet defies !

The "Stuffing" ? : Goat's milk, soya beans and dates Now,

cover to brim with suff'ring human's tears And take this dish in gool for one score years;

Take out and 'garnish' it with pariah mates ;

wrap up in rag, prop up with like bamboo And serve;

The world Redeemen ; our Baapoo !

 

ನಮ್ಮ ಬಾಪೂ ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ ;

ಅದಕೆ ಸುರಿ ಮೂರು ನಾಲ್ಕೋ ಚಮಚ ರಕ್ತ ಮಾಂಸ ;

ಜೊತೆಗಿರಿಸು ಪಾಪಮಂ ನೆರೆತೊರೆದ ಕಡಲಿನಾಳದ ಮನಸ,

ನೆರೆಬಂದ ಕಡಲಿನೊಲ್ ಪ್ರೇಮಮಂ ತುಂಬಿದೆದೆಯ ;

ಹಚ್ಚು- ಮೊರಕಿವಿಯೆರಡ, ಎರಡು ಪಿಳಿ-ಪಿಳಿ ಕಣ್ಣ;

ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ ಒಳಗಿರಿಸು ಜೇನು ನಗುವ ಒಲಿನಿಯ ನಾಲಗೆಯ,

ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ ಪೂರಣವೋ ಸೋಯಬೀನ್ಸ್, ಖರ್ಜೂರ,

ಮೇಕೆಹಾಲು ! ಮೇಲಿನಂಚಿನವರೆಗು ದುಖಃಗಳ ಕಣ್ಣೀರು ತುಂಬಿ ಪಕ್ವ ಮಾಡೀ

ಇದನು ಸೆರೆಮನೆಯೊಳಿಂದಿನಿತು ವರುಷ ಹೊರಗೆ ತೆಗೆ ಪರಯ ಪರಿವಾರದಿಂ ಗಮಗಮಿಸಗೊಳಿಸಿ,

ಚಿಂದಿಯಂ ಸುತ್ತಿ, ಸೆಳೆಬೊಂಬಿನಾಲಂಬವನ್ನಿತ್ತು ಬಡಿಸು ತಾ !

ಅವನ್ ಕಾಣ್ ! ಲೋಕ ತಾರಕ ! ನಮ್ಮ ಬಾಪೂ !

 

-ಟಿ. ಪಿ. ಕೈಲಾಸಂ. ಅನುವಾದ : ಜಿ. ಪಿ. ರಾಜರತ್ನಂ.