ವಂಶದ ಕುಡಿ (ಸಣ್ಕತೆ)

ವಂಶದ ಕುಡಿ (ಸಣ್ಕತೆ)

ಹೊಟ್ಟೆ ಬಟ್ಟೆ ಬಾಯಿ ಕಟ್ಟಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಸಾಕಿ ಬೆಳೆಸಿದ ಒಬ್ಬನೇ ಮಗ ಎಡಗಾಲಿನಲ್ಲಿ ಎದೆಗೊದ್ದು ಮನೆ ತೊರೆದ. ವಿಧವೆ ರಾಜಮ್ಮನಿಗೆ ಬದುಕು ಬೇಡವೆನಿಸಿತು. ತುತ್ತು ನೀಡಿದ ಹೆತ್ತಮ್ಮನಿಗಿಂತ ವಿಜಾತಿಯ ಮುತ್ತಿನೊಡತಿ ಹೆಚ್ಚಾದಳೆಂಬ ಮಗನ ಧೋರಣೆಯಿಂದ ನೊಂದಳು. ವರ್ಷದ ನಂತರ ಬೆಳಗಿನ ಜಾವ 'ಅಮ್ಮಾ'ಎಂಬ ಧ್ವನಿ ಕೇಳಿ ಹೊರಬಾಗಿಲಿಗೆ ಬಂದು ನೋಡಿದರೆ, ಮಗ ಸೊಸೆ ನಿಂತಿದ್ದಾರೆ, ವಂಶದ ಕುಡಿ ಬರುವ ಲಕ್ಷಣಹೊತ್ತು. ಸಿಟ್ಟೆಲ್ಲ ಜರ್ರನೆ ಇಳಿದು ಕಿತ್ತ ಬಾಂಧವ್ಯ ಮತ್ತೆ ಬೆಸೆಯಿತು.

-ರತ್ನಾ ಕೆ.ಭಟ್, ತಲಂಜೇರಿ