ವಚನಕಾರರು - ೨

ವಚನಕಾರರು - ೨

ಬರಹ

ಬಸವಣ್ಣಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು.

ಗಹನವಾದ ವಿಷಯಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದರು. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂಥಹ ಕಾರ್ಯವು ಕನ್ನಡಿಗರಾದ ಇವರಿಂದ ನಡೆಯಿತು.

ಬಾಗೇವಾಡಿಯಲ್ಲಿ ಜನಿಸಿದರು ಬಸವಣ್ಣನವರು. ಬಿಜ್ಜಳನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡರು. ಜೊತೆಗೆ ಶಿವಶರಣರ ಸೇವೆಯನ್ನು ಮಾಡುತ್ತಾ, ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಸಂಗಮೇಶ್ವರನ ಭಕ್ತರಾಗಿ "ಕೂಡಲಸಂಗಮದೇವ" ಎಂಬ ಅಂಕಿತದೊಡನೆ ಅನೇಕ ವಚನಗಳನ್ನು ರಚಿಸಿದರು.

ಇಂದಿಗೂ ಅಣ್ಣ ಬಸವಣ್ಣನವರ ವಚನಗಳು ತುಂಬಾ ಪ್ರಸಿದ್ಧವಾಗಿವೆ.

ವಚನ: ಮಾಡಿ ಮಾಡಿ ಕೆಟ್ಟರು.

||ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ|
||ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ||
||ಮಾಡುವ ನೀಡುವ ನಿಜಗುಣವುಳ್ಳರಾ|
||ಕೂಡಿಕೊಂಡಿರ್ಪ ಕೂಡಲ ಸಂಗಮದೇವಾ||

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ