ವಚನೇ ಕಾ ದರಿದ್ರತಾ?
ಕವನ
ಗಿಣಿರಾಮ ಮಂಗಳವ ತೋರಿಸುವ ಚೀಟಿಯನು
ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ
ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ
ನಿನ್ನ ಕಣಿಯಿಂದುಂಟುಮಾಡು ಆನಂದ [೧]
ಅನುದಿನವು ಬದುಕಿನಲಿ ಕಷ್ಟ ಸಂಕಟ ಮುಸುಕಿ
ಬಾಳು ಗೋಳಾಗುತ್ತಲಿರಲು ಮಾನವರು
ಸುಖದ ದಿನಗಳ ಕಾಂಬ ಒಂದೇ ಹಂಬಲದಲ್ಲಿ
ದಿವಸಗಳ ನೂಕುತ್ತ ಬಸವಳಿಯುತಿಹರು [೨]
ಸುಳ್ಳಿನಿಂದಲೆ ಜನರು ಸಂತೋಷಗೊಳುವಾಗ
ಪ್ರಿಯವಾಗದಂತೆ ಫಲ ನುಡಿವೆಯೇಕೆ?
ಎಲ್ಲೆಲ್ಲು ಕೊರತೆಯೇ ತುಂಬಿರುವ ಲೋಕದಲಿ
ಒಳ್ಳೆ ಮಾತಿಗು ಕೂಡ ಕೊರತೆ ಬೇಕೇ? [೩]
Comments
ಉ: ವಚನೇ ಕಾ ದರಿದ್ರತಾ?