ವಧುವಾಗಿ ಪ್ರಕೃತಿ...
ಕವನ
ಪ್ರಕೃತಿ ಮಾತೆಯೂ ವಧುವಾಗಿ ಕಂಗೊಳಿಸು ತಿಹಳು
ಹಚ್ಚಹಸಿರು ಸೀರೆಯುಟ್ಟು
ಅದಕ್ಕೊಪ್ಪುವ ಬಿಳಿ ಹೂಗಳ ಬಣ್ಣದ ರವಿಕೆ ತೊಟ್ಟು
ಮಲ್ಲಿಗೆ ಜಾಜಿ ಸಂಪಿಗೆಯ ಮುಡಿಗೇರಿಸಿ
ಸುಮ ಕುಸುಮಗಳ ಮಾಲೆಯ ಧರಿಸಿ
ಇಬ್ಬನಿಯ ಮೂಗುತಿಯನಿರಿಸಿ
ಸುಗಂಧ ರಾಜನ ಅತ್ತರು ಭರಿಸಿ
ನವ ವಧುವಾಗಿ ಸಿಂಗಾರಗೊಂಡು
ರವಿತೇಜನಿಗಾಗಿ ಕಾಯುತ್ತಿಹಳು
ಬಂದನು ದಿನಕರನು ಮೆಲ್ಲ ಮೆಲ್ಲನೆ ಮೇಲೇರುತ
ನಾಚಿ ಗೀಚಿದಳು ಹೂಗಳಲಿ ರಂಗೋಲಿಯನು
ಮೊಗ್ಗೆಲ್ಲಾ ಅರಳುತ ಅರಳುತ ಸ್ವಾಗತ
ಕೋರಿದವು ದಿನ ಬರುವ ದಿನಕರನಿಗೆ
ಪುಳಕಿತಳಾದಳು ಸೂರ್ಯನ ಹೊಂಗಿರಣಗಳ ಸ್ಪರ್ಶಕೆ
ನಾಚಿ ನೀರಾಗಿ ಸಂಭ್ರಮದ ಕಂಬನಿಯೊಂದುದುರಿತು
ಎಲೆಗಳ ಮೇಲೆ ಇಬ್ಬನಿಯಾಗಿ
ಧನ್ಯಳಾದಳು ಭೂದೇವಿಯು
ಬಲು ಮಾನ್ಯಳಾದಳು ವಸುಂಧರೆಯು
-ಎಸ್. ನಾಗರತ್ನ, ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
