ವಧು ಇವಳು-ಮೃದು ಸ್ವಭಾವದವಳು...
ವಧು ಇವಳು-ನಮ್ಮ ಮನೆಮಗಳು,
ಧಾರೆಯೆರೆದು ನೀಡುವೆನು-ಕಂಬನಿ ಸುರಿಸದ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೋ ನಿಮ್ಮನ್ನು ಕೊನೆಯತನಕ ಕಾಪಾಡುವಳು,
ತಾಳಿ ಕಟ್ಟಿರುವ ಪತಿಯೇ ದೇವರೆಂದು ನಂಬಿರುವವಳು,
ಆ ದೇವರ ಗುಡಿಯಲ್ಲಿ ನಂದಾದೀಪದಂತೆ ಬೆಳಗಿ ಬೆಳಕು ನೀಡುವವಳು,
ಬದುಕಿನ ಕೊನೆಯವರೆಗೂ ಜೊತೆಯಾಗಿರುವವಳು..
ಮಧುರ ಮಾತಿನ ಸ್ವರ,
ಬಂದವರಿಗೆ ತೋರುವಳು ಆದರದ ಉಪಚಾರ,
ಆಚಾರ -ವಿಚಾರದಲ್ಲಿ ಅಪ್ಪಟ ಬಂಗಾರ,
ಸರಳತೆಯ ಸಂಪ್ರದಾಯದ ಅರಿಶಿಣ-ಕುಂಕುಮ,ಕೈಬಳೆ-ಕಾಲ್ಗೆಜ್ಜೆಯ,
ಮುಡಿಗೆ ಮಲ್ಲಿಗೆಯ,
ಜೊತೆಗೆ ಸೀರೆಯುಡುಗೆಯ ಮೊಗದಲ್ಲಿ ಲಜ್ಜೆಭರಿತ ಶೃಂಗಾರ,
ಮನೆಯ ಬೆಳಗುವ ಜ್ಯೋತಿ,
ಹೆಚ್ಚಿಸುವಳು ತನ್ನ ಗಂಡನ ಮನೆಯ ಕೀರ್ತಿ,
ತನ್ನದೇ ಕನಸುಗಳ ಬಿತ್ತಿ,
ಬಂಧು-ಬಾಂಧವರಿಗೆ ತೋರುವಳು ಪ್ರೀತಿ,
ಉಸಿರು ಇರುವತನಕ ಜೊತೆಯಾಗಿರುವಳು ಕಷ್ಟ-ಸುಖಕ್ಕೆ ಹೆಗಲಿಗೆ -ಹೆಗಲು ಒತ್ತಿ,
ಆದರ್ಶದ ಮಾದರಿಯ ಬದುಕಿಗೆ ನಮ್ಮ ವಧುವಿನ ಕಡೆ ಸಮಾಜ ಕೈ ಮಾಡಿ ತೋರುತೈತಿ,
ನಮ್ಮ ಮನೆಮಗಳು ಹಲವರ ಬದುಕಿಗೆ ತುಂಬುವಳು ಸ್ಪೂರ್ತಿ..
ಶಾಂತಾರಾಮ ಶಿರಸಿ, ಉತ್ತರ ಕನ್ನಡ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
