ವರನಟನಿಗೆ ನಮನ....

ವರನಟನಿಗೆ ನಮನ....

ಬರಹ

ಇಂದು ವರನಟ ಡಾ||ರಾಜಾಣ್ಣ ಹುಟ್ಟಿದ ದಿನ.... ಸರಿಯಾಗಿ 80 ವರ್ಷ ಇಂದು ಅವರಿಗೆ... ( ಅವರು ಎಂದೆಂದಿಗೂ ಅಮರ ಕನ್ನಡಿಗರಿಗೆ). ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಏರಿದ ಎತ್ತರ... ಹುಂ... ಯಾರು ಮುಟ್ಟಲು ಸಾದ್ಯವಿಲ್ಲ...

ಒಟ್ಟು 205 ಚಿತ್ರದಲ್ಲಿ ನಟಿಸಿದರೂ, ಎಲ್ಲಾ ಪಾತ್ರವರ್ಗದಲ್ಲಿ ಅವರು ತೋರಿಸುತ್ತಿದ್ದ ತನ್ಮಯತೆ... ಸಾಟಿಇಲ್ಲದ ನಟನೆ.... ಆಯ್ದುಕೊಂಡ ಪಾತ್ರಗಳು... ಎಲ್ಲವು ಶ್ರೇಷ್ಟ... ಇಂದಿಗು ಅವರ ಸಮನಾಗಿ ನಟಿಸುವ ನಟ ಹುಟ್ಟಿಯೇ ಬಂದಿಲ್ಲವೆನೋ ಎಂಬ ಭಾವನೆ ಮೂಡಿ ಬರದೆ ಇರದು. ಗೋಕಾಕ ಚಳುವಳಿಯಲ್ಲಿ ಅವರು ತೋರಿದ ನಾಡ ಪ್ರೇಮ, ಮುಂದಾಳುತನ... ನಾಡಿನ ಚಳುವಳಿಗಳಲ್ಲಿ ಸುವರ್ಣ ಅಕ್ಷರದಲ್ಲಿ ಬರೆಡಿದಬೇಕಾದವು....

ಅವರ ಚಿತ್ರದಲ್ಲಿ ತೋರುತ್ತಿದ್ದ ಸಾಮಾಜಿಕ ಕಳಕಳಿ, ಪಾತ್ರವನ್ನು ಅಯ್ದುಕೊಂಡ ಬಗೆ - ಎಲ್ಲವು ಮಾದರಿ. "ಬಂಗಾರದ ಮನುಷ್ಯ" ದ ರಾಜೀವನೇ ಇದಕ್ಕೆ ಸಾಕ್ಷಿ.... ಈ ಒಂದು ಪಾತ್ರವೇ ಅಂದು ಎಷ್ಟು ಪೇಟೆಯ ವಿದ್ಯಾವಂತ ಜನರನ್ನ ಮರಳಿ ರೈತರನ್ನಾಗಿ ಊರಿಗೆ ತರಳುವಂತೆ ಉತ್ಸಾಹಿಸಿದ್ದವು.

ಎಷ್ಟು ಸಾಲು ಬರೆದರೂ ಸಾಲದು "ಅಣ್ಣ" ನ ಬಗ್ಗೆ ... ಅದರೂ ಈ ಒಂದು ಚಿಕ್ಕ ನುಡಿ ನಮನದ ಮೂಲಕ ಇಂದು ಅವರ ಹುಟ್ಟುಹಬ್ಬದ ಸವಿ ನೆನಪು ಮಾಡಿಕೊಳ್ಳೋಣ...