ವರಮಹಾಲಕ್ಷ್ಮಿ ಹಬ್ಬದ ಮುಕ್ತಕಗಳು

ವರಮಹಾಲಕ್ಷ್ಮಿ ಹಬ್ಬದ ಮುಕ್ತಕಗಳು

ಕವನ

ಮುಕ್ತಕ ೧

ಹಬ್ಬದಾ ದಿನವೆಂದು ಲಕ್ಷ್ಮಿಯನು ಪೂಜಿಸಲು

ಅಬ್ಬರದ ಸಿದ್ಧತೆಯ ಜನ ಮಾಡುತಿಹರು

ಒಬ್ಬರದೊ ರಂಗೋಲಿ ಬಿಟ್ಟಿಹರು ಎದುರಲ್ಲಿ

ಮಬ್ಬಿನಲಿ ತಾನೆದ್ದು- ಶಂಭು ತನಯ

***

ಮುಕ್ತಕ ೨

ಅಂಗಳದಿ ನೀ ನೋಡು ಬಾಗಿಲಿನ ಎದರಲ್ಲಿ

ರಂಗೋಲಿ ಇರಿಸಿಹರು ಮನಸೆಳೆಯುವಂತೆ

ಶೃಂಗಾರಕಾಗಿದುವು ಎಣಿಸುವುದು ತರವಲ್ಲ

ಮಂಗಳವ ಕೋರುವುದು - ಶಂಭು ತನಯ

***

ಮುಕ್ತಕ ೩

ಅತ್ತಿತ್ತ ಓಡಾಡಿ ರಂಗೋಲಿ ಅಳಿಸದಿರು

ಕುತ್ತನ್ನು ತಾರದಿರು ಶುಭದ ಸಂಕೇತ

ಚಿತ್ತದಲಿ ಬೇಡದಿಹ ವಿಷಯವನು ಯೋಚಿಸುತ

ಮತ್ತದನು ಕೆಡಿಸದಿರು -ಶಂಭು ತನಯ.

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್