ವರಮಹಾಲಕ್ಷ್ಮೀಯೆ…

ವರಮಹಾಲಕ್ಷ್ಮೀಯೆ…

ಕವನ

ವರಮಹಾಲಕ್ಷ್ಮೀಯೆ 

ಬೇಡುವೆ ನಿನ್ನನು

ಕಾಪಾಡು ಎಮ್ಮನು

ಜೀವನದೊಳಗೆ ಸರಿದಾರಿಯನು

ತೋರಿಸೋ ಎಮಗೆ ಲಕ್ಷ್ಮೀಯೆ

ನವಕೋಟಿ ವಂದನೆ

 

ಕರುಣೆಯ ಇಡುತಲಿ

ಸದ್ಭುದ್ದಿಯ ನೀಡೊ

ಅನವರತ ನಮ್ಮಲಿ

ಮೋಹಪಾಶಗಳ ದೂರಕೆ ಎಸೆಯುತ

ನೆಮ್ಮದಿ ನೀಡೆಮಗೆ ಲಕ್ಷ್ಮೀಯೆ

ನವಕೋಟಿ ವಂದನೆ

 

ಧನ ಕನಕಗಳ ಜೊತೆಯಲೆ ಅಕ್ಕರ

ಮೂಡಿಸುತ ಸಾಗೆ

ಬಾಳ ಬಂಧನವು

ತೀರಲು ಭವದೊಳು

ಸೇರ್ವೆವು ನಿನ್ನೊಡಲೊಳಗೆ ಲಕ್ಷ್ಮೀಯೆ

ನವ ಕೋಟಿ ವಂದನೆ

 

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್