ವರುಷಗಳು ಉರುಳುತ್ತವೆ…

ವರುಷಗಳು ಉರುಳುತ್ತವೆ…

ಕವನ

ವರುಷಗಳು ಉರುಳುತ್ತವೆ

ಹರುಷ ಇದೆಯಾ ಹೇಳಿ

ಜನ ಸಾಮಾನ್ಯರ ಬವಣೆ

ಕಡಿಮೆಯಾಗಿದೆಯಾ ಹೇಳಿ

 

ಪ್ರಜಾಪ್ರಭುತ್ವದ ಅಡಿಯಲ್ಲೆ

ನೆಲ ಜಲಕ್ಕಾಗಿ ಹಾರಾಟ ಹೋರಾಟ

ಕನ್ನಡದ ನೆಲದೊಳಗೆ

ಕನ್ನಡಕ್ಕಾಗಿ ಪರದಾಟ ಕಚ್ಚಾಟ

 

ವ್ಯಾಕರಣಾಂಶವು ಗೊತ್ತಿಲ್ಲದಿದ್ದರೂ

ಕವಿಯಾಗುವ ಹಂಬಲ

ಭಾಷಣ ಮಾಡಲು ಅರಿಯದವನಿಗೆ

ವೇದಿಕೆಯೇರಲು ಬೆಂಬಲ

 

ಮನೆ ಮನಗಳಲ್ಲೂ ಕೇಳಿ ಬರುವುದು

ಇಂಗ್ಲೀಷ್ ಪದಗಳು ಸುಂದರ

ಅಜ್ಜಿ ತಾತಂದಿರ ಕೇಳುವರು ಇಲ್ಲದಿರೆ

ಮೈಮುದುಡಿ ಆಗಿದೆ ಹಂದರ

 

ನನಗೆಲ್ಲವೂ ತಿಳಿದಿದೆ ಎನ್ನುವ ಮಕ್ಕಳ

ತಂದೆ ತಾಯಿಯು ಮೂಲೆಯಲಿ

ವರುಷದ ಕೊನೆಯಲಿ ಇರುವರು ಅವರು

ಗಾಂಜ  ಸಿಗರೇಟು ಎಣ್ಣೆಯಲಿ

 

ಹೀಗೆಯೇ ಸಾಗುತ ಅನುಭವಿಸುತ್ತಿದ್ದರೆ

ಅರ್ಥವು ಇದೆಯೇ ಹೊಸವರುಷ 

ಎಲ್ಲರು ಕೂಡಿ ಮನೆಯಲೆ ಕುಣಿಯಿರಿ

ಹಬ್ಬದ ರೀತಿಯೇ ನವ ಹರುಷ

-ಹಾ ಮ ಸತೀಶ ಬೆಂಗಳೂರು*

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್