ವರ್ಷದ ಕೊನೆಯ ರವಿವಾರದಂದಾದರೂ ಕನ್ನಡದಲ್ಲಿ ಬರೆಯೋಣ ಅಂತ !

ವರ್ಷದ ಕೊನೆಯ ರವಿವಾರದಂದಾದರೂ ಕನ್ನಡದಲ್ಲಿ ಬರೆಯೋಣ ಅಂತ !

ಬರಹ

ವರ್ಷ, ೨೦೦೯ ನಿಧಾನವಾಗಿ ಉರುಳಿ ಹೋಗುತ್ತಿದೆ. ಅದು ತನ್ನ ಗತಿಯಿಂದ ಕಾಲಗರ್ಭದಲ್ಲಿ ಸೇರಿಕೊಂಡು, ೨೦೧೦ ಕ್ಕೆ ಆಮಂತ್ರಣ ನೀಡುತ್ತದೆ. ಹೊಸವರ್ಷದಲ್ಲಿ ನಾವು ಸ್ವಲ್ಪಬದಲಾಗೋಣ. ನಮ್ಮ ಕನ್ನಡವನ್ನು ಮಕ್ಕಳು ಮನೆಯಲ್ಲಿ ಮಾತಾಡುವ, ಕನ್ನಡದಲ್ಲಿ ಬರೆಯುವ, ಚರ್ಚಿಸುವ ವಾತಾವರಣವನ್ನು ಸೃಷ್ಟಿಸೋಣ. ಕನ್ನಡದಲ್ಲಿ ಪತ್ರವ್ಯವಹಾರ ಮಾಡೋಣ !

ನಾವು ಸುಮಾರು ೧೦ ವರ್ಷಗಳಿಂದೀಚೆಗೆ, ಹೆಚ್ಚುಕಡಿಮೆ,  ಕನ್ನಡದ ಸುಂದರ ಅಕ್ಷರಗಳಲ್ಲಿ ಬರೆಯುವುದನ್ನು, ಪತ್ರವ್ಯವಹಾರ ಮಾಡುವುದನ್ನು, ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ ಅವಶ್ಯಕತೆಇಲ್ಲವೇನೋ ಎಂದು ನಾವೇ ಅಂದುಕೊಂಡು ನಮ್ಮ ತಾಯ್ನುಡಿಯನ್ನು ಕಡೆಗಾಣಿಸಿ ಬದುಕಲು ಸಾಧ್ಯವೇ. ಅದನ್ನು ಉಳಿಸಿ-ಬೆಳಸಿ ನಮ್ಮ ಮುಂದಿನ ಪೀಳಿಗೆಗೆ ಸ್ಥಾನಾಂತರಿಸುವ ಗುರುತರ ಜವಾಬ್ದಾರಿ ನಮ್ಮಮೇಲಿಲ್ಲವೇ ?

ಒಂದುಕಡೆ, ’ಶೈನಾ ಕನ್ನಡ ಕೈಬರಹದ ಪತ್ರಿಕೆ,’ ಜನ್ಮತಾಳಿ, ಹಲವಾರು ಕನ್ನಡ-ಪ್ರೇಮಿಗಳ ಮನಪಸಂದ್ ಕನ್ನಡ ಅಕ್ಷರಗಳಲ್ಲಿ, ಲೇಖನಗಳು ಬರುತ್ತಿವೆ. ಸಾವಿರಾರು ಜನ ಕನ್ನಡಿಗರು, ತಮ್ಮ ಮಾತೃ-ಭಾಷೆಯಲ್ಲಿ ಪತ್ರವ್ಯವಹಾರಮಾಡಲು ಹಾತೊರಿಯುತ್ತಿರುವುದು ಕಾಣಬರುತ್ತಿದೆ ! ಇದು ಒಂದು ಧನಾತ್ಮಕ ಬೆಳವಣಿಗೆಗಳಲ್ಲೊಂದು !

ಕನ್ನಡದಲ್ಲಿ ಬರೆಯಲು ಕುಳಿತಾಗ ಏನಾದರೂ ಹೊಸದೊಂದನ್ನು ಕೊಡುವ ಯೋಚನೆ ಬರುತ್ತಿತ್ತು. ಆದರೆ, ಅದನ್ನು ಓದುವ ಹವ್ಯಾಸ ವಿರುವವರು, ಸಂಪದದಲ್ಲಿ ಕಾಣಿಸುತ್ತಿಲ್ಲವೋ ಅಥವಾ ಇದ್ರಿಂದ ಪ್ರಯೋಜನ ಆದೃ ಏನು ಎನ್ನುವ ಮನೋಭಾವವೂ ಆವರಿಸಿರುವಂತೆ ತೋರುತ್ತಿದೆ. ಕೊನೆಯ ಪಕ್ಷ ಮನೆಪೂರ್ತಿಯಾದರೂ ಸ್ವಲ್ಪ ಪತ್ಗ್ರವ್ಯವಹಾರ, ವರ್ಷಕ್ಕೊಮ್ಮೆ ಕಳಿಸುವ ಹೊಸವರ್ಷ, ಯುಗಾದಿ, ದೀಪಾವಳಿ ಹಬ್ಬದ ಶುಭಾಷಯಗಳನ್ನಾದರೂ ಚಿಕ್ಕದಾಗಿ ಚೊಕ್ಕಕನ್ನಡದ ಅಕ್ಷರಗಳಲ್ಲಿ ಬರೆಯಬಾರದೇಕೆ ?

ಶೈನಾಪತ್ರಿಕೆ ಹೊಸದನ್ನೇನೂ ಹೇಳುತ್ತಿಲ್ಲ. ಮರೆತಮಾತನ್ನು ನೆನಪಿಗೆ ತರುತ್ತಿದೆ. ಆದರೆ  ಅದು ಮಾಡುತ್ತಿರುವ ಕೆಲಸ ಅನನ್ಯ !

ಮೊದಲಿಗೆ, ಚಿಕ್ಕ ನಗೆ-ಹನಿಗಳನ್ನು ಓದೋಣ. ತಾವೆಲ್ಲಾ ಇದರಲ್ಲಿ ಭಾಗವಹಿಸುವುರೆಂದು, ನಂಬುತ್ತೇನೆ.