ವಸಂತ ಕಾಲ - ಒಂದು ಗಝಲ್

ವಸಂತ ಕಾಲ - ಒಂದು ಗಝಲ್

ಕವನ

ವಸಂತನ ಒಲವಿಗೆ ಕೋಗಿಲೆ ಕೂಗಿತೆ ಹೀಗೆ

ಮಾಸದ ನೆನಪಿಗೆ ಜೀವನ ಸಾಗಿತೆ ಹೀಗೆ

 

ಹರುಷಕೆ ಮನ ಪುಳಕಿತ ಆಯಿತೆ ನೋಡು

ವಿಶ್ವಾಸದ ನುಡಿಗೆ ಹೃದಯ ಹಾಡಿತೆ ಹೀಗೆ

 

ಬೆಳದಿಂಗಳು ಮದವ ಉಕ್ಕಿಸಿತೆ ಇಂದು

ಮೌನದಲ್ಲು ಸವಿಯೇ ಚಿಮ್ಮಿ ಹಾರಿತೆ ಹೀಗೆ

 

ಕಣ್ಣಿನ ರಶ್ಮಿಗೆ ಪ್ರಣಯ ಚೆಲುವಾಯ್ತೆ ಹೇಳು

ಅಯಸ್ಕಾಂತ ಸೆಳೆದ ರೀತಿಗೆ ಬಂದಿತೆ ಹೀಗೆ

 

ಪ್ರಿಯಕರ ಆಗಿ ಹತ್ತಿರ ಬಂದನೇ ಈಶ

ಪ್ರೀತಿಸುವ ದೇಹಗಳೆರಡು ಹತ್ತಿರ ನಿಂತಿತೆ ಹೀಗೆ

 

-ಹಾ ಮ ಸತೀಶ

 

ಚಿತ್ರ್