ವಸುಂ ಧರೆ

ವಸುಂ ಧರೆ

ಕವನ

ಮೋಡ  ಕವಿದು  , ಹನಿಉದುರಿ,

ನೆಲ  ನೆರೆದು,  ಚಿಗಿರೊಡೆದು  , ಹಸಿರಾಗಿ

ವಧು ಶೃಂಗಾರದಲ್ಲಿ , ದುಂಬಿಗಳಿಗೆ

ರಸದೌತಣ  ನೀಡುವ  ವಸುಂಧರೇ

ನಿನ್ನೊಡಲಲ್ಲಿ  ಶಾಂತನಾಗಿ  , ನನ್ನ  ನಿನ್ನ

ಪ್ರಭುವಿಗೆ  ನೆನೆಯುವಾಸೆ   ನನಗೆ.

 

ನಿನ್ನ  ಸಿರಿಯ ರುಚಿಯನ್ನು   ಸ್ವಾದಿಸುತ್ತ 

ಉದರದ  ಆಸೆ  ಶಮನ ಗೊಳಿಸುತ್ತ,

ಹರಿಯುವ  ತೊರೆ  ತಾಣಗಳಲ್ಲಿ  ಮಿಂದು,ಆನಂದಿಸುತ್ತ

  ಕ್ಷಣ  ಕ್ಷಣದ,ಜ್ನಾನದ  ಬೆಳಕಲ್ಲಿ   ಅಂಧಕಾರದಿಂದ

  ಮುಕ್ತಿ ಹೊಂದಿ,  ನಿನ್ನ   ಮಡಿಲಿನಲ್ಲಿ,  ನನ್ನ  ನಿನ್ನ

ಪ್ರಭುವಿನ  ಧ್ಯಾನದಲ್ಲಿ  ಲೀನವಾಗುವ   ಆಸೆ  ನನಗೆ .

 

ನಿನ್ನಂಗಳದಲ್ಲಿ  ಬೀಸುವ  ಗಾಳಿ  ತಂಗಾಳಿಗೆ

ಮೈಯೊಡ್ಡಿ  ಮನದಾಳದ   ಅಳಲನ್ನು  ಮರೆತು

ಚಿಂತನೆಗಳ    ಅಲೆ  ಅಬ್ಬರಗಳಿಗೆ  ತಡೆಯೊಡ್ಡಿ

ಜ್ನಾನದ  ಪರಿಮಳ  ಬೀಸಿ  ತಂಪೆರುಚುವ

ಮಾನವತೆಯ   ಹೂದೋಟದ ಮಣ್ಣಲ್ಲಿ

  ಶಾಂತನಾಗಿ  ಮಣ್ಣಾಗುವ   ಆಸೆ  ನನಗೆ.

 

ಹೇ  ವಸುಂಧರೇ  ವಸಹಾತು ಆಗದಿರು ನೀನು

ಕ್ರೌರ್ಯ  ವೈಶಮ್ಯ, ವಿದ್ರೋಹದ  ವಿಶಬೆರೆಸುವ  ಅಧಿಕಾರಕ್ಕೆ,

ವಿನಂತಿಸಿಕೋ  ಆ  ನನ್ನ   ನಿನ್ನ  ಪ್ರಭುವಿನಲ್ಲಿ

ಸದಾ   ನಿನ್ನೊಡಲು  ಸತ್ಯ  ಶಾಂತಿ  ವಾತ್ಸಲ್ಯದ

ಕರುಣಾಲಯ  ವಾಗಿರಲಿ,  ನನ್ನ  ನಿನ್ನ  ಪ್ರಭುವಿನ

ಭಕ್ತರ   ಸದ್ನುಡಿಗಳ  ತಾಣ  ವಾಗಿರಲಿ.ಎಂದು.