ವಾಕ್ಪಟುಗಳ ಯೋಜನೆ / ಸಮಾಲೋಚನೆಗಳಿಗೆ ನಡೆದ ಮೀಟಿಂಗ್ (೧೩ ಫೆಬ್ರುವರಿ ೨೦೧೧)

ವಾಕ್ಪಟುಗಳ ಯೋಜನೆ / ಸಮಾಲೋಚನೆಗಳಿಗೆ ನಡೆದ ಮೀಟಿಂಗ್ (೧೩ ಫೆಬ್ರುವರಿ ೨೦೧೧)


ಸುನಿಲ್ ಅವರ ಸಲಹೆಯ ಮೇರೆಗೆ ನೆನ್ನೆ ರಾತ್ರಿ "ವಾಕ್ಪಟುಗಳು : ಮೊದಲ ಹೆಜ್ಜೆಗಳು" ಈ ಚರ್ಚೆಯ ಕೊನೆಗೆ ಸೇರಿಸಿದ್ದ ವರದಿಯನ್ನು ಪ್ರತ್ಯೇಕವಾಗಿ ಹಾಕುತ್ತಿದ್ದೇನೆ.  ಇದು ವರದಿ ಅಷ್ಟೆ. ಇದರಲ್ಲಿನ ವಿಶಯಗಳ ಮೇಲೆ ಬೇಕಾದರೆ ಚರ್ಚೆ ಪ್ರತ್ಯೇಕವಾಗಿ ಮಾಡಬಹುದು. ಚರ್ಚೆಯಲ್ಲಿ ಭಾಗವಹಿಸಿದರೆ ಗೋಷ್ಠಿಯಲ್ಲೂ ಪಾಲ್ಗೊಳ್ಳುತ್ತೀರಿ ಎಂದು ಆಶಿಸಬಹುದೇ? :-) 


ಭೇಟಿಯಾದವರು: ಮಂಜುನಾಥ್, ಗೋಪಿನಾಥ್ ರಾವ್, ರಘು, ಸುನಿಲ್, ಪ್ರಭು


‘ವಾಕ್ಪಟುಗಳು’ ಗೋಷ್ಠಿಯ ಕಲಾಪದ ಕಿರುಪರಿಚಯವಾದ ನಂತರ ಸಮ್ಮತಿಸಿದ ಮುಖ್ಯಾಂಶಗಳು.


೧. ತಿಂಗಳಿಗೆ ಒಮ್ಮೆ ಭಾನುವಾರ ಬೆಳಗ್ಗೆ ೧೦ ರಿಂದ ೧೨ ಗೋಷ್ಠಿಯನ್ನು ನಡೆಸೋಣ.


(ಒಂದು ನಿಗದಿತ ಭಾನುವಾರ, ಉದಾ: ತಿಂಗಳ ಎರಡನೆಯ ಭಾನುವಾರ, ಎಂದು ಇಟ್ಟುಕೊಳ್ಳುವುದು ಸೂಕ್ತ ಎಂಬದು ವ್ಯಕ್ತವಾಯ್ತು.)


೨. ಸ್ಥಳ : ಒಂದು ಸ್ಥಳ ನಿಗದಿತವಾಗುವವರೆಗೂ, ಪ್ರತಿ ಗೋಷ್ಠಿಯ ಅಧ್ಯಕ್ಷರು ನಿರ್ಧರಿಸುವ ಸ್ಥಳದಲ್ಲಿ ಗೋಷ್ಠಿಯನ್ನು ನಡೆಸೋಣ.


೩. ನಾಮಕರಣ : ಈ ಸಂಘಕ್ಕೆ ಸ್ವಂತ ಹೆಸರು ಇಡೋಣ. ‘ವಾಕ್ಪಟುಗಳು’ ಈಗಾಗಲೇ ನೋಂದಾಯಿಸಲ್ಪಟ್ಟ ಹೆಸರು. ಆದ್ದರಿಂದ ‘ವಾಕ್’ಇಂದ ಶುರುವಾಗುವ ಹೆಸರು ಇಡೋಣ. ಒಂದು ಸೂಕ್ತ ಹೆಸರನ್ನು ಸೂಚಿಸಲು ಬುಧವಾರ, ೧೬ರ ವರೆಗೆ ಅವಕಾಶವಿದೆ. ಇದಕ್ಕೆ ಪ್ರತ್ಯೇಕವಾದ ಚರ್ಚೆ ಮಾಡೋಣ.


(*ಮಾತಿನ ಮಲ್ಲರು* ಬೇಡ ಎನಿಸುತ್ತದೆ. ಇದರ ಬಳಕೆಯಲ್ಲಿ ವ್ಯಕ್ತವಾಗುವ ನಕಾರಾತ್ಮಕವಾದ ಅರ್ಥ ನಮ್ಮ ಒಟ್ಟಾರೆ ಆಶಯಕ್ಕೆ ಪೂರಕವಾಗಿಲ್ಲ.)


೪. ನಾಮಕರಣವಾಗುವವರೆಗೂ navu.vakpatugalu@gmail.com ಅನ್ನು ಬಳಸೋಣ.


೫. ಇನ್ನೂ ಹೆಚ್ಚು ಆಸಕ್ತರನ್ನು ಒಗ್ಗೂಡಿಸಿ ಗೋಷ್ಠಿಯನ್ನೂ ಸಂಘವನ್ನೂ ಬೆಳೆಸೋಣ.


೬. ಹಲವು ಗೋಷ್ಠಿಗಳನ್ನು ನಡೆಸಿ ಲಭಿಸಿದ ಅನುಭವದ ಮೇಲೆ ಒಂದು ದೊಡ್ಡ ಕಾರ್ಯಕ್ರಮದ ಯೋಜನೆ/ಯೋಜನೆ ಮಾಡೋಣ


೭. ಮೊದಲ ಗೋಷ್ಠಿ : ಮಾರ್ಚ್ ೬, ಭಾನುವಾರ ನಡೆಸೋಣ.


(ಮುಂದಿನ ಗೋಷ್ಠಿಗಳನ್ನು ತಿಂಗಳ ಎರಡನೆಯ ಭಾನುವಾರ ಎಂದು ಇಟ್ಟುಕೊಳ್ಳುವುದು)


ಯಾವುದಾದರೂ ಮುಖ್ಯಾಂಶ ತಪ್ಪಿಹೊಗಿದ್ದರೆ ಹಾಜರಿದ್ದವರು ದಯವಿಟ್ಟು ತಿಳಿಸಿ. ಮೊದಲ ಗೋಷ್ಠಿಯ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸುತ್ತೇನೆ. ಸಧ್ಯಕ್ಕೆ ಗೋಷ್ಠಿಯಲ್ಲಿರುವ ಪಾತ್ರಗಳಷ್ಟು ಸದಸ್ಯರು ಇಲ್ಲ. ಹಾಗಾಗಿ ಕೆಲವರು ಒಂದಕ್ಕಿಂತ ಹೆಚ್ಚು ಪಾತ್ರಗಳನ್ನು ನಿರ್ವಹಿಸಬೇಕಾಗುವುದು.


ಪ್ರಭು


 

Comments