ವಾಗ್ವಾದ
ದೇಹದ ಬಾಣಲೆಯೊಳಗೆ ಬಿಸಿ ರಕ್ತ ಕುದಿಯುತಿರೆ, ಬಂದ ಭಾವನೆಗಳನು ಬೇಯಿಸ ಬೇಡ ಎಂದರೆ ಹೇಗೆ ? ಹಾಡು ಹಗಲೇ ಕಳ್ಳ ಗುಡುಗಿಗೆ ಹೆದರಿ, ಮನೆ ಸೇರಿದರೆ ಮಳೆಯ ಮಧುರ ಮೌನದ ಸಿಂಚನವಾಗುವುದು ಹೇಗೆ? ಮೆತ್ತಗೆ ಹೆಜ್ಜೆ ಇಟ್ಟು ಜಿಂಕೆಯ ಹಿಡಿದ ಮಾತ್ರಕ್ಕೆ ಹುಲಿಯನು, ನರಿಯೆಂದು ಕರೆಯುವುದು ಹೇಗೆ ? ಬದುಕಿನ ಬೆಂಕಿಯ ಕೆನ್ನಾಲಿಗೆಯ ಪಕ್ಕದಲಿ ಕುಳಿತು, ಸುಡಬೇಡ ನನ್ನ, ಪೊರೆ ಎಂದರೆ ಹೇಗೆ ? ದಿನ ನಡೆವ ಮಾಟದೊಳಗೆ, ಕೈ ಎತ್ತಿ, ಹೂ ಕಿತ್ತು, ದೇಶವನು ಹರಾಜಿಗಿಟ್ಟು, ಮುಗುಳ್ನಕ್ಕರೆ ಹೇಗೆ ? ಬೇಸಿಗೆಯ ಮಳೆಯಲ್ಲಿ ಭೂಮಿ ಪರಿಮಳಿಸಿದಂತೆ ನೋವಿಲ್ಲದ ಸಾವಿಲ್ಲದ ಸ್ಥಳ ಬೇಕೆಂದರೆ ಹೇಗೆ ? ದೈತ್ಯ ಮೂರ್ತಿಯ ಎದುರಲ್ಲಿ, ಸಾವಿರ ಮಂತ್ರ ಜಪಿಸಿ ಮನವೆಲ್ಲವನು ಮೋಹದ ಅಬ್ದಿಯೊಳಗೆ ಅದ್ದಿಟ್ಟರೆ ಹೇಗೆ? ಮೇರು ಪರ್ವತವನು, ದೂರದಿಂದಾ ಕಂಡು, ಹತ್ತುವ ದಾವಂತದಲಿ, ದಾರಿ ಮರೆತರೆ ಹೇಗೆ ?
Comments
ಉ: ವಾಗ್ವಾದ
ಇದು ವಾಗ್ವಾದವಲ್ಲ, ಒಳತೋಟಿ! ಮುಂದುವರೆಯಲಿ.
In reply to ಉ: ವಾಗ್ವಾದ by kavinagaraj
ಉ: ವಾಗ್ವಾದ
ಕವಿಗಳೇ, ಆಗಾಗ ಸ್ಪೋಟಿಸುವ ಪ್ರಶ್ನೆಗಳು,,, ನೀವು ಹೇಳಿದಂತೆ ಒಳತೊಟಿಯೆ ಇರಬೇಕು, ನನ್ನನೊಳಗಿನ ವಾಗ್ವಾದ ಎಂದು ನಾನೆಣಿಸಿದೆ,,,, ನಿಮ್ಮ ಪ್ರೀತಿಯ ಸೆಲೆಗೆ ಋಣಿ ಕವಿಗಳೇ,,,,,
ಉ: ವಾಗ್ವಾದ
ನವೀನರೆ, ನಮಸ್ಕಾರ. ಪ್ರಶ್ನೆಯೂ ನಿಮ್ಮದೆ, ಉತ್ತರವೂ ನಿಮ್ಮದೆ ಆಗಿರುವುದರಿಂದ ' ಸಂವಾದ ' ಅಂತಲೂ ಹೇಳಬಹುದೇನೊ? :-)
ನನಗಂತು ಕೆಲವೊಮ್ಮೆ ಒಳಗಿನ ಮಾತುಗಳು ಯುದ್ಧದ ಹಾಗೆ ಅನಿಸಿ 'ವಾಗ್ಯುದ್ಧ' ಅಂದುಕೊಂಡಿದ್ದು ಉಂಟು ! ವಾದವೊ, ಯುದ್ಧವೊ, ವೈರುದ್ಧ್ಯಗಳ ವೈವಿಧ್ಯವೊ - ಸಮೃದ್ಧವಾಗಿದೆಯಲ್ಲ ಅಷ್ಟು ಸಾಕು ಬಿಡಿ :-)
In reply to ಉ: ವಾಗ್ವಾದ by nageshamysore
ಉ: ವಾಗ್ವಾದ
ಸಮೃದ್ಧತೆಯನ್ನು ಕಂಡು ಹರಸಿದ್ದೀರಿ, ನೀವು ಹೇಳಿದಂತೇ ಸಂವಾದವೂ ಆಗಬಹುದು, ಆಗಾಗ ಮನದ ಮದ್ದು ಗುಂಡುಗಳ ಜೊತೆ ನಡೆಯುವ ವಾಗ್ಯುದ್ದ ಎಂದುದು ಸರಿಯೇ, ಪ್ರತಿಕ್ರಿಯೆ ಮೆರುಗನ್ನು ನೀಡಿದೆ ನಾಗೇಶರೆ, ಧನ್ಯವಾದಗಳು,
ಉ: ವಾಗ್ವಾದ
ದೇಹದ ಬಾಣಲೆಯೊಳಗೆ ಬಿಸಿ ರಕ್ತ ಕುದಿಯುತಿರೆ,
ಬಂದ ಭಾವನೆಗಳನು ಬೇಯಿಸ ಬೇಡ ಎಂದರೆ ಹೇಗೆ ?
ಹಾಡು ಹಗಲೇ ಕಳ್ಳ ಗುಡುಗಿಗೆ ಹೆದರಿ, ಮನೆ ಸೇರಿದರೆ
ಮಳೆಯ ಮಧುರ ಮೌನದ ಸಿಂಚನವಾಗುವುದು ಹೇಗೆ?
ಮೆತ್ತಗೆ ಹೆಜ್ಜೆ ಇಟ್ಟು ಜಿಂಕೆಯ ಹಿಡಿದ ಮಾತ್ರಕ್ಕೆ
ಹುಲಿಯನು, ನರಿಯೆಂದು ಕರೆಯುವುದು ಹೇಗೆ ?
ಬದುಕಿನ ಬೆಂಕಿಯ ಕೆನ್ನಾಲಿಗೆಯ ಪಕ್ಕದಲಿ ಕುಳಿತು,
ಸುಡಬೇಡ ನನ್ನ, ಪೊರೆ ಎಂದರೆ ಹೇಗೆ ?
ದಿನ ನಡೆವ ಮಾಟದೊಳಗೆ, ಕೈ ಎತ್ತಿ, ಹೂ ಕಿತ್ತು,
ದೇಶವನು ಹರಾಜಿಗಿಟ್ಟು, ಮುಗುಳ್ನಕ್ಕರೆ ಹೇಗೆ ?
ಬೇಸಿಗೆಯ ಮಳೆಯಲ್ಲಿ ಭೂಮಿ ಪರಿಮಳಿಸಿದಂತೆ
ನೋವಿಲ್ಲದ ಸಾವಿಲ್ಲದ ಸ್ಥಳ ಬೇಕೆಂದರೆ ಹೇಗೆ ?
ದೈತ್ಯ ಮೂರ್ತಿಯ ಎದುರಲ್ಲಿ, ಸಾವಿರ ಮಂತ್ರ ಜಪಿಸಿ
ಮನವೆಲ್ಲವನು ಮೋಹದ ಅಬ್ದಿಯೊಳಗೆ ಅದ್ದಿಟ್ಟರೆ ಹೇಗೆ?
ಮೇರು ಪರ್ವತವನು, ದೂರದಿಂದಾ ಕಂಡು,
ಹತ್ತುವ ದಾವಂತದಲಿ, ದಾರಿ ಮರೆತರೆ ಹೇಗೆ ?
...ನವೀನರೆ, ಕವನ ಸೂಪರ್.
In reply to ಉ: ವಾಗ್ವಾದ by ಗಣೇಶ
ಉ: ವಾಗ್ವಾದ
ಗಣೇಶರೆ ನೈಜ ರೂಪದಲ್ಲಿ ಓದುವಂತೆ ಮಾಡಿದಿರಿ, ಧನ್ಯವಾದಗಳು