ವಾಣಿ ವಿಲಾಸ ಸಾಗರ (ಮಾರಿ ಕಣಿವೆ)

ವಾಣಿ ವಿಲಾಸ ಸಾಗರ (ಮಾರಿ ಕಣಿವೆ)

ವಾಣಿ ವಿಲಾಸ ಸಾಗರ /ಮಾರಿಕಣಿವೆ ಬಗ್ಗೆ ಒಂದು ಕುಡಿನೋಟ ---

ಮಾರ್ಗ---ಚಿತ್ರದುರ್ಗ ಜಿಲ್ಲೆಯಿಂದ ೪೦ ಕಿ.ಮೀ.,

ಬೆಂಗಳೂರಿನಿಂದ-- ನಿಂದ  ಹೈವೆ ಮೂಲಕ ತುಮಕೂರು > ಸಿರ > ಹಿರಿಯೂರು ಅಲ್ಲಿ ಒಂದು ಆರ್ಚ್ ಇರುತ್ತೆ ವಾಣಿ ವಿಲಾಸ ಸಾಗರ ಅಲ್ಲಿ ಸ್ವಲ್ಪ ದೂರ ಮುಂದೆ ಹೋದ್ರೆ ಡ್ಯಾಮ್ ಸಿಗುತ್ತೆ.

 

 

 

 

ವಿವಿ ಸಾಗರ (ಮಾರಿ ಕಣಿವೆ)ಗೆ ನೀರಿನ ನೆಲೆ ವೇದಾವತಿ ನದಿ—-----

 

ಇದು ಭಾರತದ ಪ್ರಮುಖ ನದಿಗಳಲ್ಲಿ ಒಂದು. ಪೂರ್ವ ಸಹ್ಯಾದ್ರಿ ಘಟ್ಟಗಳಲ್ಲಿ  ವೇದ ಮತ್ತು ಅವತಿ ಎಂಬ ಎರೆಡು ನದಿಗಳು ಹುಟ್ಟುತ್ತವೆ ಮುಂದೆ ಪೂರ್ವ ಮುಖವಾಗಿ ಹರಿದು ಪುರ ಎಂಬ ಹತ್ತಿರ ವೇದವತಿಯಾಗಿ ಹರಿಯುತ್ತದೆ. ನಂತರ ಹಿರಿಯೂರಿನ ಕೂಡಲಹಳ್ಳಿ ಎಂಬಲ್ಲಿ ಸುವರ್ಣಮುಖಿ ಎಂಬ ಉಪನದಿ ವೇದವತಿಗೆ ಸೇರುತ್ತದೆ. ನಂತರ ಅದು ಹಿರಿಯೂರಿನ ಮೂಲಕ ಆಂದ್ರಪ್ರದೇಶದ ಕಡೆಗೆ ಹರಿದು ತುಂಗಾಭದ್ರಾ ನದಿ ಸೇರುತ್ತದೆ.

 

ವಾಣಿ ವಿಲಾಸ ಸಾಗರ (ಮಾರಿ ಕಣಿವೆ ಡ್ಯಾಮ್):--------------

ಈ ಮಾರಿಕಣಿವೆ ಡ್ಯಾoನ್ನು ವೇದವತಿ ನದಿಗೆ ಕಟ್ಟಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಅಣೆಕಟ್ಟನ್ನು ಸ್ಥಳೀಕರು ಮಾರಿಕಣಿವೆ ಎಂದು ಕರೆಯುತ್ತಾರೆ.ಈ ಜಲಾಶಯವು 30೦೦೦ ಎಕರೆ ಭೂಮಿಗೆ ನೀರು ಒದಗಿಸುತ್ತದೆ.ವೇದವತಿ ನದಿಗೆ ಅಡ್ಡಲಾಗಿ ಇದನ್ನು ಕಟ್ಟಲಾಗಿದೆ. ಇದು 150 ಅಡಿ ಅಗಲ, ಸುಮಾರು 1330 ಅಡಿ ಉದ್ದ,145 ಅಡಿ ಎತ್ತರವನ್ನು ಹೊಂದಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು 1897 ರಲ್ಲಿ, ಮೈಸೂರು ರಾಜ ಕೆ.ಶೇಷಾದ್ರಿ ಅಯ್ಯರ್ ದಿವಾನರಿಂದ ಅರಭಿಸಲ್ಪಟ್ಟಿತು. ಅವರು ವೈಯುಕ್ತಿಕವಾಗಿ ಜಿಲ್ಲೆಗೆ ಭೇಟಿಕೊಟ್ಟು ಬರ ಪೀಡಿತ ಪ್ರದೇಶದಲ್ಲಿ ನೆರವಾಗಲು ನೀರಿನ ಸಂಗ್ರಹಕಗಳಿಲ್ಲದ್ದನ್ನು ಗಮನಿಸಿದರು. ಅವರ ಅನುಮೋದನೆಯ ಮೇರೆಗೆ ಅಣೆಕಟ್ಟಿನ ನಿರ್ಮಾಣ ಕಾರ್ಯ ಆರಂಭವಾಯಿತು.ಸುಮಾರು ಒಂಭತ್ತು ವರ್ಷಗಳ ನಂತರ 1907 ರಲ್ಲಿ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತದೆ.1909 ಸ್ವತಂತ್ರ ಪೂರ್ವದಲ್ಲಿ ಶ್ರೀ ಕೃಷ್ಣ ರಾಜ ವಡೆಯರ್ 4 ,ಸರ್.ಎಮ್.ವಿಶ್ವೇಶ್ವರಯ್ಯ, ವಂದ್ ದಲಾಲ್ ರವರ ನೇತೃತ್ವದಲ್ಲಿ ಪೂರ್ಣಗೊಳ್ಳುತ್ತದೆ. ಮತ್ತು ಅಣೆಕಟ್ಟಿಗೆ ಕೃಷ್ಣರಾಜ ವಡೆಯರ್ ರ ತಾಯಿಯ ಹೆಸರನ್ನು ಇಡಲಾಯಿತು.

 

ಈಗ ಇದು ಸ್ಟೇಟ್ ಗವರ್ನಮೆಂಟ್ ಆಫ್ ಕರ್ನಾಟಕ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲುಕ ಅಡಿ ಬರುತ್ತದೆ. ವಾಣಿ ವಿಲಾಸ ಸಾಗರ ಜಲಾಶಯವು ಚಿತ್ರದುರ್ಗ ಐತಿಹಾಸಿಕ ಜಿಲ್ಲೆಯ ದೊಡ್ಡ ಜಲಾಶಯ, ಸಂಪೂರ್ಣವಾಗಿ ತುಂಬಿದ ಇತಿಹಾಸವೂ ಈ ಡ್ಯಾಮ್ಗೆ ಇಲ್ಲ ಎನ್ನುವುದು ಅಲ್ಲಿನ ಜನರ ಅಳಲು.ಅದಕ್ಕೆ ಕಾರಣ ಅಸಮರ್ಪಕ ಮಳೆ.  107  ವರ್ಷಗಳ ಹಿಂದೆ ನಿರ್ಮಿಸಿದ ಅಣೆಕಟ್ಟು. ಇದುವರೆಗೂ ಇದು ತುಂಬಿ ತುಳುಕಿದ ಇತಿಹಾಸವೇ ಇಲ್ಲ. ಇಲ್ಲಿವರೆಗೆ ಲೆಕ್ಕದ ಪ್ರಕಾರ ಮಾರಿಕಣಿವೆ , 30tmcft  ನೀರು ಇರುತ್ತದೆ. ಇದರ ಸಂಗ್ರಹ ಸಾಮರ್ಥ್ಯ 145 ಅಡಿ ಎತ್ತರದ ಅಣೆಕಟ್ಟು. 1933 ರಲ್ಲಿ ಮಾತ್ರ ತುಂಬಿತ್ತು ಎಂದು ಹೇಳಲಾಗುತ್ತದೆ.ಪ್ರಸ್ತುತ, ನೀರಿನ ಮಟ್ಟದ 70 ಅಡಿ ಗಿಂತಲೂ ಕಮ್ಮಿ ಇದೆ. ಅನೇಕ ಸಂದರ್ಭಗಳಲ್ಲಿ, ಮಟ್ಟದ 100 ಅಡಿ ತಲುಪಿದೆ, ಆದರೆ 145 ಅಡಿ ಗಡಿ ಎಂದೂ ದಾಟಿಲ್ಲ.

ವಾಣಿ ವಿಲಾಸ ಸಾಗರ ಅಣೆಕಟ್ಟು ಖಂಡಿತವಾಗಿಯೂ ಒಂದು ವಾಸ್ತುಶಿಲ್ಪ, ಇಲ್ಲಿ ಸಿಮೆಂಟ್ ಬಳಸದೆ ಬರಿ ಗಾರೆಯಲ್ಲಿ ಕಟ್ಟಲಾಗಿದೆ. ಆದ್ದರಿಂದ ಇದು ಒಂದು ಹಳೆಯ ಕಾಲದ ಎಂಜಿನಿಯರಿಂಗ್ ಕೌತುಕದ ಒಂದು ಸುಂದರ ಉದಾಹರಣೆ. ಜೊತೆಗೆ ಮುಖ್ಯವಾಗಿ ಕೇಂದ್ರ ಕರ್ನಾಟಕ ಡೆಕ್ಕನ್ ಪ್ರದೇಶದ ಒಣ ಭೂಮಿಯಗೆ ಮತ್ತು  ಇದು ಸುತ್ತಮುತ್ತಲ ನಗರಗಳಲ್ಲಿ, ಪಟ್ಟಣಗಳಲ್ಲಿ ಹಾಗೂ ಗ್ರಾಮಗಳಲ್ಲಿ ಬಹಳಷ್ಟು ಕುಡಿಯುವ ನೀರನ್ನು ಮತ್ತು ವ್ಯವಸಾಯಕ್ಕೆ ನೀರನ್ನು ಸರಬರಾಜು ಮಾಡುತ್ತದೆ.

 

ವಿವಿ ಸಾಗರ (ಮಾರಿ ಕಣಿವೆ) ಅಣೆಕಟ್ಟಿನ ಪ್ರಭಾವದ ಚಿತ್ರಣ :---------

ಈ ಮಾರಿಕಣಿವೆ ಆಣೆಕಟ್ಟು ಚಾಲನೆಗೆ ಬಂದ ನಂತರ ಸ್ಥಳೀಯರು ವ್ಯವಸಾಯದಲ್ಲಿ ಬದಲಾವಣೆ ಮಾಡಿಕೊಂಡರು. ನೀರಿನ ಸಮರ್ಪಕ ಬಳಕೆಯಿಂದ ತೆಂಗು, ಅಡಿಕೆ, ಕಬ್ಬು, ಭತ್ತ, ಬೆಳೆಗಳಿಗೆ ಪ್ರಾಮುಖ್ಯತೆ ಕೊಟ್ಟರು. ಭತ್ತದ ಬೆಳೆಯಿಂದಾಗಿ ಮಂಡಕ್ಕಿ ಮಿಲ್ಗಳು ತಲೆಯೆತ್ತುತ್ತವೆ. ಅವರು ಬೆಳೆಯುವ ಕಬ್ಬಿನ ಪ್ರಭಾವ  ಹೇಗಿತ್ತೆಂದರೆ ಆ ತಾಲ್ಲುಕಿನಲ್ಲಿ ಒಂದು ಸಕ್ಕರೆ ಕಾರ್ಖಾನೆಯೇ ಸ್ಥಾಪನೆಯಾಗುತ್ತದೆ. ಆದರೆ ಇದು ಕಡಿಮೆ ಸಮಯಕ್ಕೆ ಮಾತ್ರ ಸೀಮಿತವಾಯ್ತು ಅನ್ನುವುದು ಕೂಡ ಅಸ್ಟೆ ನಿಜ.

 

ಅಲ್ಲಿಯೂ ಸಮಸ್ಯೆಗಳು ಪ್ರಾರಂಭವಾಗುತ್ತವೆ. ನಂತರದ ದಿನಗಳಲ್ಲಿ ಜಲಾಶಯಕ್ಕೆ ಬೇಕಾದ ಮಳೆ ಬರಲಿಲ್ಲ. ನೀರು ಖಾಲಿಯಾದ ಪ್ರದೇಶಗಳಲ್ಲಿ ಅತಿಯಾದ ಮರಳು ಗಣಿಗಾರಿಕೆ ಮತ್ತು ನೀರು ಖಾಲಿಯಾದ ಪ್ರದೇಶದ ಒತ್ತುವರಿ, ನೀರಿನ ಒಳಹರಿವು ಕಡಿಮೆಯಾಗಲು ಕಾರಣವಾಯಿತು. ಕಬ್ಬು ಬೆಳೆ ಕಡಿಮೆಯಾಗಿ ಸಕ್ಕರೆ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ಬಂತು. ನಂತರ ರೈತರು ಬೇರೆ ರೀತಿಯ ಬೆಳೆ ಬೆಳೆಯಲಾರಂಭಿಸಿದರು. ನೀರಿನ ಪ್ರಮಾಣ ಇನ್ನು ಕಡಿಮೆಯಾದರೆ ಮುಂದೆ  ಇದು ಬರಿ ಪಳುವಳಿಕೆಯ ಡ್ಯಾಮ್ ರೀತಿ  ಪ್ರವಾಸೀ ತಾಣ ಅಸ್ಟೆ .

 

ಆಕರ್ಷಣೆಯ ಯಾತ್ರಾ ಸ್ಥಳವಾಗಿ ಮಾರಿಕಣಿವೆ -----

ವಿವಿ ಸಾಗರ ಆಣೆಕಟ್ಟು ಒಂದು ಶತಮಾನದಿಂದ ಒಂದು ಆಕರ್ಷಣೆಯ ಯಾತ್ರಾ ಸ್ಥಳವಾಗಿ ಮುಂದುವರೆದಿದೆ. ಇಲ್ಲಿ ಪ್ರಾಚೀನ ಭಾರತೀಯ ಔಷಧೀಯ ಸಸ್ಯಗಳ ಉದ್ಯಾನ ವನ್ನು ಇಲ್ಲಿ ಮಾಡಲಾಗಿದೆ. ಅರಣ್ಯ ಇಲಾಖೆಯು ಕೈಗೊಂಡ ಕಾಡು ವರ್ಧನೆಯ ಕೆಲಸಕ್ಕೆ ಪಂಚವಟಿ ಉದ್ಯಾನವನ ಗಳನ್ನು ತೆರೆದಿರುವುದು. ನೆರೆ ಅರಣ್ಯದ ಪುನರುತ್ತಾನಕ್ಕೆ ಆಧ್ಯತೆ, ವಾರಾಂತ್ಯದಲ್ಲಿ ಗೇಟ್ ವೇ ಸ್ಥಳ. ಪಂಚವಟಿ ಗಾರ್ಡನ್ ಔಷಧೀಯ ಸಸ್ಯಗಳು. ಸಾಂಸ್ಕೃತಿಕ ವಿಷಯಗಳನ್ನು ಪ್ರತಿಬಿಂಬಿಸುವ ಕಣಿವೆ ಮಾರಮ್ಮ ಗುಡಿ, ಮತ್ತು ಅದರ ಉತ್ಸವ. ಇಲ್ಲಿಗೆ ಭೇಟಿ ನೀಡಿರುವವರ ಸಂಖ್ಯೆಯನ್ನು ಹೆಚ್ಚಿಸಿವೆ.

 

ಕಣಿವೆ ಮಾರಮ್ಮ ದೇವಸ್ತಾನ ;------------

ಈ ಐತಿಹಾಸಿಕ ಗುಡಿಯು 14-15 ಶತಮಾನದ ವಿಜಯನಗರ ಆಳ್ವಿಕೆಯ ಕಾಲದಲ್ಲಿ ಆಗಿದ್ದು ಎಂದು ಹೇಳಲಾಗುತ್ತದೆ. ಈ ಗುಡಿಯ  ಪ್ರಭಾವದಿಂದಲೇ ಇರಬೇಕು, ಹೆಸರು ವಾಣಿ ವಿಲಾಸ ಸಾಗರ ಆದರೂ ಅಲ್ಲಿನ ಜನ ಮಾರಿಕಣಿವೆ ಎಂದೇ ಹೇಳುತ್ತಾರೆ. ಇಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಕಣಿವೆ ಮಾರಮ್ಮ ದೇವಿಯನ್ನು ನೋಡಬಹುದು, ಅಕ್ಕ ಪಕ್ಕದಲ್ಲಿ ಆಕೆಯ ತಂಗಿಯಂದಿರು ಇದ್ದು ಅವುಗಳನ್ನು ಪೂಜಿಸಲಾಗುತ್ತದೆ. ಇವಲ್ಲದೆ ಅಲ್ಲಿ ಇನ್ನು ಕೆಲವು ದೇವರುಗಳನ್ನು ಕಾಣಬಹುದು.ಉದಾ-ಈಶ್ವರ, ಹನುಮಂತ, ನಾಗಪ್ಪ, ಹಲವು. ದಿನದಲ್ಲಿ ಬೆಳಿಗ್ಗೆ ,ಮದ್ಯಾನ್ನ ,ಸಾಯಂಕಾಲ,ರಾತ್ರಿ ಹೀಗೆ ನಾಲ್ಕು ಬಾರಿ ಪೂಜೆ ನಡೆಯುತ್ತದೆ.ನವರಾತ್ರಿ ಪೂಜೆ ಯನ್ನು ತುಂಬಾ ವಿಶಿಸ್ತವಾಗಿ ಆಚರಿಸುತ್ತಾರೆ. ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ರಥೋತ್ಸವ ನಡೆಯುತ್ತದೆ. ಕರ್ನಾಟಕ ಜನ ಮತ್ತು ಅಂದ್ರ ಪ್ರದೇಶದ ಕೆಲವು ಭಾಗಗಳ ಜನರು ಈ ಜಾತ್ರೆಯಲ್ಲಿ ಸೇರುತ್ತಾರೆ. ಕೆಲವು ಕುಟುಂಬಗಳಿಗೆ ಈ ಕಣಿವೆ ಮಾರಮ್ಮ ಕುಲ ದೇವತೆಯು ಹೌದು. ಈ ಕುಟುಂಬಗಳ ಜನರು ಪಕ್ಕದಲ್ಲೇ ಇರುವ ವೇದಾವತಿ ನದಿಗೆ ವರ್ಷಕ್ಕೊಮ್ಮೆಯಾದರೂ ಇಲ್ಲಿ ಗಂಗಮ್ಮ ಪೂಜೆ ಮಾಡುತ್ತಾರೆ .ಇಲ್ಲವೇ ವಿಶೇಷ ಸಂದರ್ಭಗಳಲ್ಲಿ, ಮದುವೆ, ಮುಂಜಿ, ಮೈ ನೆರೆದ ಹೆಣ್ಣುಮಕ್ಕಳಿಗೆ ಸೂತಕ ತೆಗೆಯಲು, ಹಬ್ಬ-ಹರಿದಿನಗಳಲ್ಲಿ ,ಮದುವೆಯಾದ ನವ ದಂಪತಿಗಳು ಮೊದಲ ಭೇಟಿಯಲ್ಲಿ ಇಲ್ಲಿ ಗಂಗಮ್ಮ ಪೂಜೆ ಮಾಡುತ್ತಾರೆ.

 

  

 

Comments

Submitted by kavinagaraj Tue, 03/15/2016 - 15:24

ಉತ್ತಮ ಪರಿಚಯ ಲೇಖನಕ್ಕಾಗಿ ವಂದನೆಗಳು, ಸುನಿತಾರವರೇ. ಜಲಮೂಲಗಳನ್ನು ನಾಶ ಮಾಡುತ್ತಿರುವ ಮಾನವನೇ ಈ ಜಲಾಶಯ ಭರ್ತಿಯಾಗದಿರುವುದಕ್ಕೆ ದೊಡ್ಡ ಅಡ್ಡಿಯಾಗಿದ್ದಾನೆ. ನಾನು ಚಿತ್ರದುರ್ಗದ ಮುನಿಸಿಪಲ್ ಹೈಸ್ಕೂಲಿನಲ್ಲಿ (1964-67 ಇರಬಹುದು) ವ್ಯಾಸಂಗ ಮಾಡಿದ್ದೆ.