ವಾಯುವಿಳಂಗ ಗಿಡದ ಬಗ್ಗೆ ಗೊತ್ತೇ?

ಸ್ವಲ್ಪ ಹುಳಿ ಸ್ವಲ್ಪ ಸಿಹಿಯಾದ ರುಚಿಯನ್ನು ಹೊಂದಿರುವ ಬಳ್ಳಿಯೂ ಅಲ್ಲದ ಕಂಟಿಯೂ ಅಲ್ಲದ ಆಡುಭಾಷೆಯಲ್ಲಿ ಅಪ್ಪ ಅಮ್ಮನ ಗಿಡ ಎಂದು ಕರೆಯಲು ಕಾರಣ ಇದರ ರುಚಿ ಇರಬಹುದು. ಈ ಗಿಡವನ್ನು ಹದವರಿತು ಬಳಸುವುದು ಒಳ್ಳೆಯದು. ಹೆಚ್ಚಾದಾಗ ದೊಡ್ಡ ಕರುಳಿನ ಊತ ಗುದದ್ವಾರದಿಂದ ಹೊರಬರುವ ಸಾಧ್ಯತೆ ಇದೆ. ಬೇರು, ಕಾಂಡ, ಬೀಜ ಇವುಗಳನ್ನು ಔಷಧಿಯಾಗಿ ಬಳಕೆ ಮಾಡುತ್ತಾರೆ.
1) ಒಣ ಕೆಮ್ಮಿನಲ್ಲಿ ಬೇರು ಕಫ ನೀರಾಗಿಸಲು ಉಪಯುಕ್ತ.
2) ಮೂರು ದಿನ ಒಂದು ಚಮಚದಷ್ಟು ಬೀಜವನ್ನು ಪುಡಿಮಾಡಿ ಸಂಜೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡು ಮೂರನೇ ದಿನ ಬೆಳಿಗ್ಗೆ ಬೇಧಿಗೆ ಹರಳೆಣ್ಣೆ ಕುಡಿದರೆ ಉದರದಲ್ಲಿನ ಕ್ರಿಮಿಗಳು ನಾಶವಾಗುತ್ತದೆ.
3) ಇದರ ಕಾಯಿ ಪುಡಿಯನ್ನು ಜೇನುತುಪ್ಪ ಸೇರಿಸಿ ನೆಕ್ಕುತ್ತಿದ್ದರೆ ಕೆಮ್ಮು ಮತ್ತು ದಮ್ಮು ನಿವಾರಣೆ ಆಗುತ್ತದೆ.
4) ಇದರ ಹಸಿ ಕಾಯಿಯ ಪೇಸ್ಟ್ ಗೆ ಇಂಗು ಸೇರಿಸಿ ಹಲ್ಲಿನಲ್ಲಿ ಇಟ್ಟು ಕಚ್ಚಿ ಹಿಡಿದರೆ ಹಲ್ಲುನೋವು ಹೋಗುತ್ತದೆ ಆದರೆ ರಸ ನುಂಗುವಂತಿಲ್ಲ.
5) ಜೀರಿಗೆ ದನಿಯಾ.... ಮತ್ತಿತರ ಸಾಮಗ್ರಿಗಳನ್ನು ಸೇರಿಸಿ ಮಾಡುವ ಕಷಾಯ ಪುಡಿ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಬೀಜ ವನ್ನು ಹುರಿದು ಸೇರಿಸಿದರೆ ಗ್ಯಾಸ್ಟ್ರಿಕ್ ಆಗುವುದಿಲ್ಲ. ನನ್ನ ಉತ್ಪಾದನೆಯ ಕಷಾಯ ಪುಡಿಯಲ್ಲಿ ಇದೂ ಇರುತ್ತದೆ.
-ಸುಮನಾ ಮಳಲಗದ್ದೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ