ವಾರದ ಹಿಂದೆ ನಡೆದ ಒಂದು ಘಟನೆ

ವಾರದ ಹಿಂದೆ ನಡೆದ ಒಂದು ಘಟನೆ

ವಾರದ ಹಿಂದೆ ನಡೆದ ಒಂದು ಘಟನೆ....

ವಾರದ ಹಿಂದೆ ಹಣ ವರ್ಗಾವಣೆ ಮಾಡಲೆಂದು ನಮ್ಮೂರಿಗೆ ಸಮೀಪದ ಬ್ಯಾಂಕಿಗೆ ಹೋಗಿದ್ದೆ.ನಾನು ಸ್ಲಿಪ್ ತುಂಬಬೇಕಾದರೆ ಇಳಿವಯಸ್ಸಿನ ಅಜ್ಜಿಯೊಬ್ಬರು ಕೈಯಲ್ಲಿ ಹಿಡಿದುಕೊಂಡಿದ್ದ ವಿಡ್ರಾವಲ್ ಸ್ಲಿಪ್ ತೋರಿಸಿ ಅದನ್ನು ತುಂಬಿಕೊಡುವಂತೆ ಕೇಳಿಕೊಂಡರು.ನಿಮಗೆ ಗೊತ್ತಿರಬಹುದು, ಈ ಬ್ಯಾಂಕುಗಳಲ್ಲಿ 'ಮೆ ಐ ಹೆಲ್ಪ್ ಯು'ಅಂತ ಬೋರ್ಡ್ ಹಾಕಿಕೊಂಡ ಹೆಲ್ಪ್ ಡೆಸ್ಕ್ ಇರುತ್ತದೆ.ದುರಂತವೆಂದರೆ ಇವರು ಮಾಡುವ ಹೆಲ್ಪ್ ಮಾತ್ರ ಲಕ್ಷ ಲಕ್ಷ ಡೆಪಾಸಿಟ್ ಮಾಡಿದವನಿಗೆ ಮಾತ್ರ ಮೀಸಲಿರುತ್ತದೆ.ಅಂಕಿ-ಅಕ್ಷರ ಗೊತ್ತಿಲ್ಲದವರನ್ನು ಇವರು ಒಂದು ರೀತಿಯಲ್ಲಿ ಅಸ್ಪೃಶ್ಯರಂತೆ ಕಾಣುತ್ತಾರೆ.ಬ್ಯಾಂಕುಗಳಲ್ಲಿ ಅಲ್ಲಿನ ಉದ್ಯೋಗಿಗಳು ತಮ್ಮ ಗ್ರಾಹಕರಿಗೆ ಮಾಡುವ ಸಹಾಯಕ್ಕಿಂತ ಹೆಚ್ಚಿನ ಸಹಾಯವನ್ನು ಅಲ್ಲಿಗೆ ಬಂದ ಬೇರೊಬ್ಬ ಗ್ರಾಹಕ ಮಾಡುತ್ತಾನೆ ಎಂಬುದು ವಾಸ್ತವ ಸತ್ಯ.ಅಜ್ಜಿ ಅವರ ಪಾಸ್ಬುಕ್ ಕೊಟ್ಟು ಸಾವಿರ ರೂಪಾಯಿ ಬಿಡಿಸಿಕೊಡು ಎಂದರು.. ಮತ್ತೆ ಏನೋ ನೆನಪಾದವರಂತೆ,ಇಲ್ಲ...ನನಗೆ ಒಂದುವರೆ ಸಾವಿರ ಬೇಕಿತ್ತು ಎಂದರು.ನಾನು ಅಷ್ಟೋತ್ತಿಗಾಗಲೆ ಸ್ಲಿಪ್ ತುಂಬಿಸಿಯಾಗಿತ್ತು.ಮತ್ತೆ ಹೊಸ ಸ್ಲಿಪ್ ತಗೊಂಡರಾಯಿತು ಅಂದುಕೊಂಡು ಹಳೆ ಸ್ಲಿಪನ್ನು ಬಿಸಾಡಲು ಕಸದಬುಟ್ಟಿಗಾಗಿ ಕಣ್ಣಿಗೆ ಕಾಣಿಸಿದ ಎಲ್ಲಾ ಮೂಲೆಯಲ್ಲೂ ಹುಡುಕಾಡಿದೆ.ನನಗೆ ಅಲ್ಲೆಲ್ಲ ಕಸ ಕಾಣಿಸಿತೇ ಹೊರತು ಬುಟ್ಟಿ ಮಾತ್ರ ಕಾಣಿಸಲಿಲ್ಲ.ಮ್ಯಾನೆಜರ್ ಗೆ ದೂರು ಕೊಡೋಣವೆಂದು ಅವರ ಕ್ಯಾಬಿನ್ ಕಡೆ ನೋಡಿದೆ ಅಲ್ಲಿ ಅವರ ನೇಮ್ ಬೋರ್ಡ್ ಇತ್ತು ಅವರಿರಲಿಲ್ಲ.ಅಲ್ಲೇ ಯಾವುದೋ ಫೈಲಿನ ಹಾಳೆ ತಿರುವಿ ಹಾಕುತ್ತಿದ್ದ ಪಿಯೋನರನ್ನು ಕುರಿತು,' ಸ್ವಾಮಿ,ಇಷ್ಟು ದೊಡ್ಡ ಬ್ಯಾಂಕಿನಲ್ಲಿ ಒಂದು ಕಸದಬುಟ್ಟಿಗೆ ಬರವೇ'ಎಂದು ಕೇಳಿದೆ.ಅದಕ್ಕವರು,'ಮೊದಮೊದಲು ನಾವೂ ಕಸದಬುಟ್ಟಿ ಇಡುತ್ತಿದ್ದೆವು.ಆದರೆ ಗ್ರಾಹಕರು ಬುಟ್ಟಿಯೊಂದನ್ನು ಬಿಟ್ಟು ಬೇರೆಲ್ಲ ಕಡೆ ಕಸಹಾಕುತ್ತಿದ್ದರು, ಇನ್ನು ಕೆಲವರು ತಾವು ಬಾಯಿಗೆ ಹಾಕಿಕೊಂಡು ಬಂದ ತಂಬಾಕು ಗುಟ್ಕಾ ಎಲೆಅಡಿಕೆಯ ರಸವನ್ನು ಅದಕ್ಕೆ ಉಗಿಯುತ್ತಿದ್ದರು,ಮತ್ತೆ ಕೆಲವರು ತಮ್ಮ ಮಕ್ಕಳು ತಿಂದು ಮುಗಿಸಿದ ಚಾಕಲೇಟ್ ಲೇಸ್ ಕುರ್ಕುರೆಯ ಪ್ಲಾಸ್ಟಿಕ್ ಕವರ್ ಗಳನ್ನು ಹಾಕುತ್ತಿದ್ದರು.ಇದನ್ನು ಗಮನಿಸಿದ ನಮ್ಮ ಮ್ಯಾನೆಜರ್ ಗ್ರಾಹಕರು ಮಾಡುವ ತೀರ ವೈಯಕ್ತಿಕ ಕಸಗಳಿಗೆ ನಮ್ಮ ಬ್ಯಾಂಕ್ ಯಾಕೆ ಬುಟ್ಟಿಯಾಗಬೇಕೆಂದು ಭಾವಿಸಿ ಅದನ್ನು ತೆರವುಗೊಳಿಸಿದ್ದಾರೆ ಎಂದು ಸಮರ್ಥನಿಯವಾದ ಉತ್ತರ ಕೊಟ್ಟರು.ನನ್ನ ಬಳಿ ಅವರ ಉತ್ತರಕ್ಕೆ ಮರುಪ್ರಶ್ನೆಯಿರಲಿಲ್ಲ.ಪಿಯೋನರ ಮಾತು ಕೇಳಿದ ನಂತರ ನನಗನ್ನಿಸಿದ್ದು, ಭಾರತ ಮೊದಲು ಕಾಗದ ಮತ್ತು ಪ್ಲಾಸ್ಟಿಕ್ ಮುಕ್ತ ಆಗಬೇಕು.ಆಗ ಮಾತ್ರ ಕಸಮುಕ್ತ ಸ್ವಚ್ಛ ಭಾರತ ಸಾಧ್ಯವೆಂಬುದು.

-@ಯೆಸ್ಕೆ

Comments

Submitted by venkatb83 Wed, 11/12/2014 - 17:19

"ಗ್ರಾಹಕರು ಬುಟ್ಟಿಯೊಂದನ್ನು ಬಿಟ್ಟು ಬೇರೆಲ್ಲ ಕಡೆ ಕಸಹಾಕುತ್ತಿದ್ದರು, ಇನ್ನು ಕೆಲವರು ತಾವು ಬಾಯಿಗೆ ಹಾಕಿಕೊಂಡು ಬಂದ ತಂಬಾಕು ಗುಟ್ಕಾ ಎಲೆಅಡಿಕೆಯ ರಸವನ್ನು ಅದಕ್ಕೆ ಉಗಿಯುತ್ತಿದ್ದರು,ಮತ್ತೆ ಕೆಲವರು ತಮ್ಮ ಮಕ್ಕಳು ತಿಂದು ಮುಗಿಸಿದ ಚಾಕಲೇಟ್ ಲೇಸ್ ಕುರ್ಕುರೆಯ ಪ್ಲಾಸ್ಟಿಕ್ ಕವರ್ ಗಳನ್ನು ಹಾಕುತ್ತಿದ್ದರು.ಇದನ್ನು ಗಮನಿಸಿದ ನಮ್ಮ ಮ್ಯಾನೆಜರ್ ಗ್ರಾಹಕರು ಮಾಡುವ ತೀರ ವೈಯಕ್ತಿಕ ಕಸಗಳಿಗೆ ನಮ್ಮ ಬ್ಯಾಂಕ್ ಯಾಕೆ ಬುಟ್ಟಿಯಾಗಬೇಕೆಂದು ಭಾವಿಸಿ ಅದನ್ನು ತೆರವುಗೊಳಿಸಿದ್ದಾರೆ ಎಂದು ಸಮರ್ಥನಿಯವಾದ ಉತ್ತರ ಕೊಟ್ಟರು"

:(((

ಮೊದಲಿಗೆ ನನಗೆ ಬ್ಯಾಕುಗಳ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ಭಾವನೆ ಬಗ್ಗೆ ಹೇಳುವೆ...!!!

ಈ ಜಗದಲ್ಲಿ ಬ್ಯಾಂಕುಗಳತ್ತ ತಲೆ ಹಾಕದ -ಅವುಗಳ ಕಾರ್ಯ ವೈಕರಿ ಬಗ್ಗೆ ಜಿಗುಪ್ಸೆ ಹತಾಶೆ ಸಿಟ್ಟು ತಾತ್ಸಾರ ಇರುವ ಜನರೂ ಇದ್ದೇ ಇರುವರು, ಅವರಲ್ಲಿ ನಾನೂ ಒಬ್ಬ ..!! ಬಹುತೇಕ ಜನ ವಯಸ್ಕರಾಗುತ್ತಿದ್ದಂತೆ ಇಲ್ಲವೇ ಅವರ ಪಾಲಕರು ಮಕ್ಕಳ ಹೆಸರಲ್ಲಿ ಬ್ಯಾಂಕು ಖಾತೆ ತೆರೆವರು... ಆದರೆ ಯಾವತ್ತೋ ಒಮ್ಮೆ ಬ್ಯಾಂಕಿಗೆ ಒಂದು ಖಾತೆ ಮಾಡಿಸಲು ಹೋಗಿ ಸಾಮಾನ್ಯ ಜನ್ತೆಯ ಬಗೆಗಿನ ಅಲ್ಲಿನ ಅಧಿಕಾರಿಗಳ ಜವಾನರ ತಾತ್ಸಾರ ಭಾವನೆ ಕಂಡು ಹಲವು ಬ್ಯಾಂಕುಗಳಲ್ಲಿ ಇದೇ ಅನುಭವ ಆಗಿ ಬ್ಯಾಂಕ್ ಖಾತೆ ಸಹವಾಸವೇ ಬೇಡ ಅಂದು ಸುಮ್ಮನಿದ್ದೆ. ಈಗ್ಗೆ 3 ವರ್ಷಗಳ ಹಿಂದೆ ದೊಡ್ಡ ಸಹೋದರನ ಒತ್ತಾಯದ ಕಾರಣ ಮತ್ತು ಅವನು ಮೊದಲೇ ಖಾತೆ ಅಲ್ಲಿ ಹೊಂದಿದ್ದ ಕಾರಣ ಒಂದು ಖಾತೆ ಮಾಡಿಸಿಕೊಂಡೆ-ಆದರೆ ಪಾಸು ಬುಕ್ ಕೊಡಲು 3 ವಾರ ,ಡೆಬಿಟ್ ಕಾರ್ಡ್ಗೆ 3 ವರೆ ತಿಂಗಳು ತೆಗೆದುಕೊಂಡರು....:(((
ಇನ್ನೂ ಪಾಸ್ ಬುಕ್ಗೆ ಎಂಟ್ರಿ ಮಾಡಿಸಲು ಇಲ್ಲವೇ ಹಣ ಹಾಕಲು ಬ್ಯಾಂಕಿಗೆ ಹೋದರೆ ಇರುವುದು 2-3 ಕೌಂಟರು-ವಿಪರೀತ ಗ್ರಾಹಕರ ಸಂಖ್ಯೆ...:((
ಕೆಲವೊಮ್ಮೆ ಸೆರ್ವರ್ ಪ್ರಾಬ್ಲಂ ಇತ್ಯಾದಿ...!!
ಇನ್ನೂ ಪಾಸ್ ಬುಕ್ಗೆ 3 ವರ್ಷಗಳಿಂದ ಎಂಟ್ರಿ ಆಗಿಲ್ಲ...!!
ಎಸ್ ಎಂ ಎಸ್ ಆಲರ್ಟ್ -ನಾಮಿನೇಷನ್ ಫಾರ್ಮ್ ತುಂಬಿ ಕೊಟ್ಟರೆ ಆ ಬಗ್ಗೆ ಮಾಹಿತಿ ಇಲ್ಲ...!!
ನನ್ನದು ಸಾಮಾನ್ಯ ಉಳಿತಾಯ ಖಾತೆ ಆಗಿದ್ದು ಬರೀ ಉಳಿತಾಯ ಇರುವುದರಿಂದ ಬ್ಯಾಂಕಿಗೆ ಹೋಗುವ ಜರೂರತ್ತು ಬರೀ ಹಣ ಹಾಕಲು ಮಾತ್ರ -ಹಾಗಾಗಿ ಅಸ್ತು ಸಮಸ್ಯೆ ಇಲ್ಲ ,,ಆದರೆ ಬ್ಯಾಂಕಿನವರ ಆಸೆಗೆ ಮಿತಿ ಇಲ್ಲ ಅನ್ಸುತ್ತೆ-ಆಗಾಗೇ ಹೆಚ್ಚಿನ ಸಂಬಳ ಸವಲತ್ತು ಅಂತೆಲ್ಲ ಹರತಾಳ (ಇವತ್ತೂ ಬ್ಯಾಂಕುಗಳ ಬಂದ್ ಇದೆ .>!!) -ವರ್ಷದಲ್ಲಿ ಬರುವ ನೂರೆಂಟು ಸರ್ಕಾರಿ ರಜೆಗಳು ಮಧ್ಯದಲ್ಲಿ ಇವರ ಸ್ವಘೋಷಿತ ಬಂದ್ಗಳು ..:(((

ಇನ್ನೂ ಯಾವುದೇ ಸಾಲದ ಬಗ್ಗೆ ವಿಚಾರಿಸಲು ಹೋದರೆ ....!! ನಿರಾಶೆ ಖಚಿತ...
ಅದೇನಿದ್ದರೂ ಸರಕಾರಿ ನೌಕರರು -ಖಾಸಗಿ ಹೆಸರಾಂತ ಕಂಪನಿಗಳ ಉನ್ನತ ಅಧಿಕಾರಿಗಳಿಗೆ ಲಭ್ಯ ಅಸ್ಟೇ...
ಆಯಾಯ ರಾಜ್ಯಗಳಲ್ಲಿ ಆಂಗ್ಲ ಸಹಿತ ಸ್ಥಳೀಯ ಭಾಷೆಯ ಸ್ಲಿಪ್ ಇರಬೇಕು ಆದರೆ ಬಹುತೇಕ ಕಡೆ ಆಂಗ್ಲ ಹಿಂದಿ ಮಾತ್ರ ಲಭ್ಯ..!!
ಪ್ರಧಾನ ಮಂತ್ರಿ ಜನ ಧನ ಯೋಜನೆಯ ಹೇಳಿಕೆ ಪ್ರಕಾರ ಯಾವುದೇ ವ್ಯಕ್ತಿ ಹೊಸತಾಗಿ ಖಾತೆ ತೆರೆಯಬಹುದು-ವಾಸ ವಿಳಾಸ ದಾಖಲೆ ಒಂದು ವರ್ಷದ ಒಳಗೆ ಕೊಟ್ಟರೆ ಆಯ್ತು (ಆಧಾರ ಕಾರ್ಡ್ ಮತದಾನ ಚೀಟಿ ಇತ್ಯಾದಿ) ಆದರೆ ಬ್ಯಾಂಕಿನವರು ಹೇಳುವುದು ಈಗಲೇ ಆಧಾರ್ ಮತದಾನ ಚೀಟಿ ತನ್ನಿ ....!!
ಇನ್ನೂ ಹಲವು ಬ್ಯಾಂಕುಗಳಲ್ಲಿ ಊಟದಾ ಸಮಯದವರೆಗೆ ನಿಧಾನ ವ್ಯವಹಾರ..ಊಟದ ಸಮಯಕ್ಕೆ ಮಿಂಚಿನ ಸಂಚಾರ -ನಂತರ ಕಿಂಡಿ ಕ್ಲೋಜ್,ಮತ್ತೆ ಅರ್ಧ ಒಂದು ಘಂಟೆ ಕಾಯಬೇಕು (ಬ್ಯಾಂಕ್ ಸಮಯ 10:30-1:30-2;00-4 ಅಥವಾ 5 ಸಂಜೆ ..ಕೆಲವೆಡೆ ಆಯಾಯ ವ್ಯವಹಾರಕ್ಕೆ (ಡಿ ಡಿ ಚೆಕ್ಕು -ಹಣ ಹಾಕಲು ತೆಗೆಯಲು ಒಂದೊಂದು ಆಯ್ದ ಸಮಯ ನಿಗದಿ)ಸೀಮಿತ ಅವಧಿ ಮಾತ್ರ ನಂತರ ಬಂದವ್ರು ಮಾರನೇ ದಿನ ಬಂದು ಮತ್ತೆ ನಿಲ್ಲಬೇಕು..
ಪೊಲೀಸರು ಎ ಟಿ ಎಂ ರಕ್ಷಣೆಗೆ ಗಾರ್ಡ್ ನೇಮಿಸಿ ಎಂದರು-ತಗೊಳ್ಳಿ ಬಿಟ್ಟು ನಮಗೆ (ಗ್ರಾಹಕರಿಗೆ) ಫೈನು...ಎ ಟಿ ಎಂ ಸೀಮಿತ ಬಳಕೆ -ನಂತರದ ಒಂದೊಂದು ವ್ಯವಹಾರಕ್ಕೆ 20 ರೂಪಾಯೀ ಶುಲ್ಕ ...:(((
ಆರ್ ಬಿ ಐ ಗೆ ಕರುಣೆಯೇ ಇಲ್ಲವೇ? ಇವರು ಏನು ಹೇಳಿದರೂ ತಲೆ ಅಲ್ಲಾಡಿಸುವುದ?
ಎಲ್ಲಿ ಏನೇನೋ ಬದಲಾವಣೆ ತರುತ್ತಿರುವ ಮೋದಿ ಸರಕಾರ ಮೊದಲು ಈ ಬ್ಯಾಂಕಿಂಗ್ ಕ್ಷೇತ್ರವನ್ನು ಗ್ರಾಹಕ ಸ್ನೇಹಿ ಆಗಿಸಬೇಕು..ಸಾಮಾನ್ಯ ಜನತೆಗೂ-ಹಳ್ಳಿ ಹಳ್ಳಿಯಲ್ಲಿ ಕಟ್ಟಾ ಕಡೆಯ ಜನತೆಗೆ ಬ್ಯಾಂಕ್ ಖಾತೆ ದೊರೆಯುವ ಹಾಗೆ ಮಾಡಬೇಕು ...ಈ ಬಗ್ಗೆ ಮೋದಿ ಅವರಿಗೆ ನಾವೆಲ್ಲ http://mygov.in/ ನಲ್ಲಿ ಮನವಿ ಸಲ್ಲಿಸಬೇಕು ..
ನಿಮ್ಮದು ಸಕಾಲಿಕ ಲೇಖನ. ನಿಮ್ಮ ಪುಟ್ಟ ಬರಹಕ್ಕಿಂತ ನನ್ನ ಪ್ರತಿಕ್ರಿಯೆಯೇ ದೀರ್ಘವಾಯ್ತು..!!
ನನ್ನಿ
ಶುಭವಾಗಲಿ

\|/

Submitted by venkatb83 Wed, 11/12/2014 - 17:23

In reply to by venkatb83

ಬ್ಯಾಂಕುಗಳ ಸುಧಾರಣೆ ಬಗ್ಗೆ ಮೋದಿ ಅವರಿಗೆ mygov.in ನಲಿ ಮನವಿ ಸಲ್ಲಿಸಿದರೆ ಏನಾದರೂ ಪರಿಹಾರ ಸಿಗಬಹುದೆ?
ನಿಮ್ದು ಸಕಾಲಿಕ ಬರಹ
ನನ್ನಿ
ಶುಭವಾಗಲಿ

\|/