ವಾಶಿಂಗ್ಟನ್ ನಗರ ಭೇಟಿ

ವಾಶಿಂಗ್ಟನ್ ನಗರ ಭೇಟಿ

ಬರಹ

 


’ವೈಟ್ ಹೌಸ್’ ಒಳಗೆ ಈಗ ’ಒಬಾಮ ಪರಿವಾರ’ ಇದೆಯಲ್ಲಾ. ಹಾ ಆಗ ಇನ್ನೂ ಅಮೆರಿಕನ್ ಅಧ್ಯಕ್ಷರ ಪದವಿಗೆ ಚುನಾವಣೆ ನಡೆಯುತ್ತಿತ್ತು. ಅಬ್ಬ ನಾವಿದ್ದಷ್ಟು ಹೊತ್ತೂ ’ಎಲೆಕ್ಷನ್ ಕ್ಯಾಂಪೇನ್’ ನೋಡಿ ಕೇಳಿ ತಲೆ ಚಿಟ್ಟು ಹಿಡಿದಿತ್ತು. ಆಗಲೆ ’ಚೈನಾ ಒಲಂಪಿಕ್ಸ್ ಆಟದ ಸಡಗರ’ ಬೇರೆ ! ನಮಗಂತೂ ಎಲ್ಲೋ ಕನಸಿನಲೋಕದಲ್ಲಿ ವಿಹರಿಸುತ್ತಿದ್ದೆವೆಯೋ ಅನ್ನಿಸಿತ್ತು. ಹೊಸ ಜಾಗ ಜನ, ಎಲ್ಲೆಲ್ಲೂ ಸ್ವಾಗತ, ಮತ್ತು ಅಲ್ಲಿನ ಜೀವನದ ಒಳನೋಟಗಳನ್ನು ಅರಿಯುವ ಕುತೂಹಲ, ಇತ್ಯಾದಿಗಳು ನಮ್ಮನ್ನು ಸದಾ ಹಿಡಿದು ನಿಲ್ಲಿಸಿದ್ದೆವು. ಮತ್ತೊಂದು ಅತಿ ಸಂತಸದ ವಿಷಯವೆಂದರೆ, ’ಅಕ್ಕಾ ವಿಶ್ವ ಕನ್ನಡ ಸಮ್ಮೇಳನ’ ದಲ್ಲಿ ಪಾಲ್ಗೊಂಡ ಅವಿಸ್ಮರಣೀಯ ಸನ್ನಿವೇಷ !
ನಾಲ್ಕು ಸಾವಿರ ಜನ ಕನ್ನಡಿಗರು ಒಂದೆಡೆ ಕಲೆತು, ಮಾತುಕತೆ, ಪರಸ್ಪರ ವಿಚಾರ ವಿನಿಮಯ, ಮನರಂಜನೆಯ ಕಾರ್ಯಕ್ರಮಗಳು, ಸಾಹಿತ್ಯ ಗೋಷ್ಟಿಗಳು, ನೃತ್ಯ, ಫ್ಯಾಷನ್ ಶೋಗಳು, ಯಕ್ಷಗಾನದ ಆಟ, ಅಶ್ವಥ್ ರವರ, ಹಾಡು, ಇತ್ಯಾದಿ ಇತ್ಯಾದಿ. ಊಟ ಮತ್ತು ತಿರುಪತಿ ಪ್ರಸಾದ, ಒಂದೇ ಎರಡೆ ಹೇಳಲು ?
ಕೊನೆಗೆ ’ವಾಶಿಂಗ್ ಟನ್ ನಗರ’ವನ್ನು ನನ್ನ ಇಬ್ಬರು ಮಕ್ಕಳು ಮಾಡಿದರು. ನಾವು ಹೋಗಲಾಗಲಿಲ್ಲ. ಚಳಿ ಇತ್ತಲ್ಲ !

-ಚಿತ್ರ ಪ್ರಕಾಶ್.