ವಾಸ್ತು ಪ್ರಕಾರ...

ವಾಸ್ತು ಪ್ರಕಾರ...

ಕೆಲವರಿಗೆ ವಾಸ್ತು ಎಂದರೆ ಅಪಾರ ನಂಬಿಕೆ. ತಮ್ಮ ಮನೆಯಾ ಮುಖ್ಯ ಬಾಗಿಲಿನಿಂದ ಹಿಡಿದು ಅಡಿಗೆ ಮನೆಯವರೆಗೂ ಎಲ್ಲವೂ ವಾಸ್ತು ಪ್ರಕಾರವೇ ಇರಬೇಕೆಂದು ಹಠ. ಆದರೆ ಇನ್ನು ಕೆಲವರಿಗೆ ವಾಸ್ತು ಎಂದರೆ ವಾಸ್ತವವಲ್ಲ. ಬರೀ ಬೊಗಳೆ ಎಂಬ ನಂಬಿಕೆ. ಅವರವರ ನಂಬಿಕೆಗಳಿಗೆ ನಾವೇನೂ ಮಾಡುವಂತಿಲ್ಲ. ಆದರೂ ವಾಸ್ತು ಬಗ್ಗೆ ಆಸಕ್ತಿ ಹೊಂದಿರುವವರ ಗಮನಕ್ಕಾಗಿ ವಾಸ್ತು ಪ್ರಕಾರ ಸಾಮಾನ್ಯವಾಗಿ ತಿಳಿದುಕೊಂಡಿರಬೇಕಾದ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ. ವಾಸ್ತುವಿನಲ್ಲಿ ಆಸಕ್ತಿ ಇಲ್ಲದವರೂ ಒಮ್ಮೆ ಓದಿ ನೋಡಲಡ್ಡಿಯಿಲ್ಲ.

1. ಪೂರ್ವ ಮತ್ತು ಉತ್ತರ ದಿಕ್ಕಿಗೆ ನಿಂತುಕೊಂಡು ಅಡುಗೆ ಮಾಡಬೇಕು..

2. ದಕ್ಷಿಣ ದಿಕ್ಕಿಗೆ ಮುಖವಾಗಿ ಪಾತ್ರೆ ತೊಳೆಯಬೇಕು.

3. ಮಕ್ಕಳು ಮಲಗುವ ಕೋಣೆ ಉತ್ತರ ಪೂರ್ವಕ್ಕೆ ಇರಬೇಕು.

4. ಅಪ್ಪ ಅಮ್ಮ ಮಲಗುವ ಕೋಣೆ ದಕ್ಷಿಣ-ಪಶ್ಚಿಮ ದಿಕ್ಕಿಗೆ ಇರಬೇಕು.

5. ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು ಯಾಕೆಂದರೆ ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಮ್ಮ ಮುಖವನ್ನು ನಾವೇ ನೋಡಿಕೊಳ್ಳಬಾರದು.ಹಾಗೇನಾದರೂ ಕನ್ನಡಿ ಇದ್ದರೆ ಅದನ್ನು ಬಟ್ಟೆಯಿಂದ ಮುಚ್ಚಿಬಿಡಿ.

6. ಊಟದ ಕೋಣೆಯಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಆರೋಗ್ಯ ವೃದ್ಧಿಸುತ್ತದೆ.

7. ಊಟ ಮಾಡುವಾಗ ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಬೇಕು ಅಂದರೆ ಸೂರ್ಯ ಉದಯಿಸುವ ದಿಕ್ಕು.

8. ಅನ್ನ ಮಾಡಿದ ಪಾತ್ರೆ ಮತ್ತು ಅಡುಗೆಯನ್ನು ಮಾಡಲು ಬಳಸಿದ ಪಾತ್ರೆಗಳನ್ನು ತೊಳೆದ ನಂತರ ಮಗುಚಿ ಇಡಬಾರದು. ಅದೇ ರೀತಿ ಊಟ ಮಾಡಲು ಬಳಸುವ ತಟ್ಟೆ ಹಾಗೂ ಲೋಟಗಳನ್ನು ಮಗುಚಿ ಇಡಬಾರದು ಹೇಗೆ ಮಾಡಿದರೆ ಮನೆಗೆ ದರಿದ್ರ ಆವರಿಸುತ್ತದೆ ಅನ್ನಕ್ಕೆ ಕೊರತೆ ಉಂಟಾಗುತ್ತದೆ.

9. ಅಡುಗೆ ಕೋಣೆಯಲ್ಲಿ ದೇವರ ಚಿತ್ರಗಳನ್ನ ಇಡಬಾರದು ಹಾಗೂ ದೇವರ ಕೋಣೆಯ ಪಕ್ಕದಲ್ಲಿಯೇ ಅಡುಗೆ ಅಥವಾ ಸ್ನಾನ ಮತ್ತು ಶೌಚಾಲಯ ದ ಕೋಣೆಗಳು ಇರಬಾರದು. ಹೀಗೆ ಇದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿಗಿಂತ ಹೆಚ್ಚಾಗಿ ಋಣಾತ್ಮಕ ಶಕ್ತಿಯು ಅಧಿಕವಾಗಿ ಉಂಟಾಗುತ್ತದೆ.

10. ಯಾವುದೇ ಔಷಧಿಗಳೂ, ಮಾತ್ರೆಗಳನ್ನು ಆಡುಗೆ ಕೋಣೆಯಲ್ಲಿ ಇಡಬಾರದು.

**********

ತಿಜೋರಿ ದಿಕ್ಕು: ಗಿಡ ನೆಡಿ ವಾಸ್ತು ದೋಷ ದೂರಮಾಡಿ

ಮನೆಯ ಪಶ್ಚಿಮ ದಿಕ್ಕಿಗೆ ತೆಂಗು, ಉತ್ತರಕ್ಕೆ ಮಾವು, ದಕ್ಷಿಣಕ್ಕೆ ಅಡಿಕೆಮರ ಪೂರ್ವಕ್ಕೆ ಹಲಸಿನ ಮರವನ್ನು ಬೆಳೆಸಿದರೆ ಮನೆಯ ಮೇಲೆ ಯಾವ ಕುದೃಷ್ಟಿಯೂ ಬೀಳುವುದಿಲ್ಲ.

ಮನೆಯ ಪೂರ್ವದಲ್ಲಿ ಬಿಲ್ವವೃಕ್ಷವನ್ನು ನೆಟ್ಟು ಬೆಳೆಸಿ. ಸೋಮವಾರ ಹಾಗೂ ಶುಕ್ರವಾರ ಆ ಮರಕ್ಕೆ ಪ್ರದಕ್ಷಿಣೆ ಬಂದು ಪೂಜೆ ಸಲ್ಲಿಸಿ. ಬಿಲ್ವ ಪತ್ರೆಯಿಂದ ಲಕ್ಷ್ಮಿ ದೇವರ ಆರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷವಾಗುತ್ತದೆ. 

ಮನೆಯ ಮುಂಬದಿಯಲ್ಲಿರುವ ವೃಂದಾವನದೊಳಗೆ ನೆಲ್ಲಿ ಕೊನೆಯ ನೆಟ್ಟು ಬೆಳೆಸಿ. ಪ್ರತಿ ಮಂಗಳವಾರ ಹಾಗೂ ದ್ವಾದಶಿಯಂದು ನೆಲ್ಲಿ ಗಿಡವನ್ನು ಪೂಜಿಸಿದರೆ ಮನೆಯಲ್ಲಿ ಸುಖ, ಶಾಂತಿ ಉಂಟಾಗುತ್ತದೆ. 

ಮನೆಯ ಈಶಾನ್ಯ ದಿಕ್ಕಿನಲ್ಲಿ ಔದುಂಬರ ವೃಕ್ಷವನ್ನು ಬೆಳೆಸುವುದರಿಂದ ಗುರುವಿನ ಅನುಗ್ರಹವಾಗುತ್ತದೆ. ಗುರುವಿಗೆ ಸಂಬಂಧ ಪಟ್ಟ ದೋಷಗಳು ಪರಿಹಾರವಾಗುತ್ತವೆ. 

ಮನೆಯ ಹಿತ್ತಲಲ್ಲಿ ಬಿಳಿ ತುಂಬೆ ಹೂವಿನ ಗಿಡ ಬೆಳೆಸುವುದರಿಂದ ಉತ್ತಮ ಫಲ ಉಂಟಾಗುತ್ತದೆ. ವಾಸ್ತು ದೋಷವೂ ಪರಿಹಾರವಾಗುತ್ತದೆ. 

ತುಳಸಿಯನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ಭಾಗದಲ್ಲಿ ಬೆಳೆಸಬೇಕು. ತುಳಸಿಯನ್ನು ಮನೆಯ ಪ್ರವೇಶದ್ವಾರಕ್ಕೆ ಹೊಂದಿಕೊಳ್ಳುವಂತೆ ನೆಡಬಾರದು. ತುಳಸಿ ಗಿಡಗಳನ್ನು ಯಾವುದೇ ಕಾರಣಕ್ಕೂ ಸರಿ ಸಂಖ್ಯೆಯಲ್ಲಿ ನೆಡಬೇಕೇ ಹೊರತು, ಬೆಸ ಪ್ರಮಾಣದಲ್ಲಿ ಅಲ್ಲ.

*****

ನೆಮ್ಮದಿಯ ಜೀವನಕ್ಕೆ ವಾಸ್ತು

ನೇಮ್ ಪ್ಲೇಟ್ ಮನೆಯ ಮುಖ್ಯ ದ್ವಾರದ ಹೊರ ಬದಿಯಲ್ಲಿ ನೇಮ್ ಪ್ಲೇಟ್ ಇರಬೇಕು. ಇದರಿಂದ ಮನೆಗೆ ಪಾಸಿಟಿವ್ ಎನರ್ಜಿ ಮತ್ತು ಉತ್ತಮ ಅವಕಾಶಗಳು ಮಾಲೀಕರಿಗೆ ಲಭ್ಯವಾಗುತ್ತದೆ ಎಂದು ವಾಸ್ತು ನಿಯಮ ಹೇಳುತ್ತದೆ. 

ದೀಪ ಹಚ್ಚಿ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ, ಹಣತೆ ಮತ್ತು ಅಗರಬತ್ತಿ ಹಚ್ಚಬೇಕು. ಇದು ನೆಗೆಟಿವ್ ಎನರ್ಜಿಯನ್ನು ಮನೆಯಿಂದ ಹೊರ ದೂಡಲು ನೆರವು ನೀಡುತ್ತದೆ. 

ಅಡುಗೆ ಮನೆ ಮನೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ಇರಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ವಾಯುವ್ಯ ಭಾಗವನ್ನು ಆರಿಸಿಕೊಳ್ಳಬಹುದು. ಆದರೆ ಸ್ಟೌವ್ ಮಾತ್ರ ಆಗ್ನೇಯ ದಿಕ್ಕಿನಲ್ಲಿರಲಿ

ಲಿಂಬೆಯ ಶಕ್ತಿ: ಲಿಂಬೆ ಹಣ್ಣಿಗೆ ನೆಗೆಟಿವ್ ಎನರ್ಜಿಯನ್ನು ಓಡಿಸುವ ಶಕ್ತಿಯಿದೆ. ಹೀಗಾಗಿ ಯಾವಾಗಲೂ ಮನೆಯಲ್ಲಿ ಒಂದು ಗ್ಲಾಸ್ ನೀರಿನಲ್ಲಿ ಲಿಂಬೆಯನ್ನು ಹಾಕಿಟ್ಟು, ಪ್ರತಿ ಶನಿವಾರ ಅದನ್ನು ಬದಲಾಯಿಸಿ. 

ಔಷಧ ಸಾಮಗ್ರಿ: ಅಡುಗೆ ಮನೆಯಲ್ಲಿ ಔಷಧಗಳನ್ನು ಇಡಲೇ ಬಾರದು. ಯಾಕೆಂದರೆ ಔಷಧ ಕೂಡ ಕೆಟ್ಟ ದೃಷ್ಟಿಯ ಸಂಕೇತ. ಹೀಗಾಗಿ ಆರೋಗ್ಯಕರ ಜೀವನಕ್ಕೆ ಅಡುಗೆ ಮನೆಯಲ್ಲಿ ಇವುಗಳನ್ನು ಇಡಲೇ ಬಾರದು. 

ಧ್ಯಾನಕ್ಕೆ ಒತ್ತು: ಮೈ ಮನಸ್ಸನ್ನು ಶುದ್ಧಗೊಳಿಸುವ ಸಾಮರ್ಥ್ಯ ಧ್ಯಾನಕ್ಕೆ ಇದೆ. ಹೀಗಾಗಿ ಪ್ರತಿ ದಿನ 15ರಿಂದ 20 ನಿಮಿಷ ಧ್ಯಾನ ಮಾಡಿ. ಇದು ಮನಸ್ಸನ್ನು ಹಗುರಗೊಳಿಸುತ್ತದೆ. ಸುತ್ತಲು ಪಾಸೆಟಿವ್ ಎನರ್ಜಿಯನ್ನು ತುಂಬಲು ನೆರವಾಗುತ್ತದೆ. 

ಕನ್ನಡಿ ಬಳಕೆ: ಬೆಡ್ ರೂಂನಲ್ಲಿ ಕನ್ನಡಿ ಇರಬಾರದು. ಒಂದು ವೇಳೆ ಈಗಾಗಲೇ ಡ್ರೆಸ್ಸಿಂಗ್ ಟೇಬಲ್ ಅಥವಾ ಕಪಾಟಿನಲ್ಲಿ ಕನ್ನಡಿ ಇದ್ದರೆ ಅದನ್ನು ಮಲಗುವ ಸಮಯದಲ್ಲಿ ಬಟ್ಟೆಯಿಂದ ಮುಚ್ಚಬೇಕು. 

ಪವಿತ್ರ ತೀರ್ಥ: ಮನೆಯ ಬಳಕೆ ಮಾಡದ ಮೂಲೆಯಲ್ಲಿ ಯಾವಾಗಲೂ ಗಂಗಾ ಜಲ ಇಡಬೇಕು. ಇದನ್ನು ಪ್ರತಿ ವಾರ ಬದಲಾಯಿಸಬೇಕು. ಇದು ಪಾಸಿಟಿವ್ ಎನರ್ಜಿ ಮನೆಯಲ್ಲಿ ತುಂಬಲು ಸಹಾಯ ಮಾಡುತ್ತದೆ. 

ಸ್ವಸ್ತಿಕ್ ಇರಲಿ: ಸ್ವಸ್ತಿಕ ಚಿನ್ಹೆಯು ಸಂಪತ್ತು ಮತ್ತು ಶ್ರೇಯಸ್ಸಿನ ಸಂಕೇತ. ಆದ್ದರಿಂದ ಮನೆಯಲ್ಲಿ ಸ್ವಸ್ತಿಕ ಚಿನ್ಹೆಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರ. ಯಾವಾಗಲೂ ಮನೆಯ ಹೊರ ಬಾಗಿಲ ಹೊರಗಡೆ ಇದನ್ನು ಅಳವಡಿಸಿ. 

ಕಿರು ಗಂಟೆಗೆ ಆದ್ಯತೆ: ಮನೆಯಲ್ಲಿ ಕಿರು ಗಂಟೆಗಳನ್ನು ಅಲ್ಲಲ್ಲಿ ತೂಗು ಹಾಕಿ. ಅದರಲ್ಲೂ ದೇವರ ಕೋಣೆಯ ಬಾಗಿಲಿಗೆ ಹಾಕಿದರೆ ಉತ್ತಮ. ಇದರ ನಾದದಿಂದ ನೆಗೆಟಿವ್ ಎನರ್ಜಿ ಮನೆಯಿಂದ ಹೊರಗೆ ಹೋಗುತ್ತದೆ. 

ಉಪ್ಪಿನ ಬಳಕೆ: ಉಪ್ಪು ನೆಗೆಟಿವ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮನೆಯ ಮೂಲೆಗಳಲ್ಲಿ ಚಿಕ್ಕ ಪಾತ್ರೆಗಳಲ್ಲಿ ಉಪ್ಪು ಹಾಕಿಡಬೇಕು.

********

ಆರೋಗ್ಯಕ್ಕೆ ವಾಸ್ತು ನಿಯಮ:

ಮುಖ್ಯ ದ್ವಾರವನ್ನು ವಾಸ್ತು ನಿಯಮದ ಪ್ರಕಾರ ಸಿದ್ಧ ಪಡಿಸಬೇಕು. ಇದು ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು. ಬಾಗಿಲಿಗೆ ತೇಗದ ಮರಕ್ಕೆ ಆದ್ಯತೆ ನೀಡಿ. 

- ಪ್ರವೇಶ ದ್ವಾರದಲ್ಲಿ ಯಾವುದೇ ಆಡತಡೆ ಇಲ್ಲದಂತೆ ನೋಡಿಕೊಳ್ಳಿ. ಮುಖ್ಯ ದ್ವಾರದ ಸುತ್ತಮುತ್ತ ಪಾದರಕ್ಷೆ ಬಿಡಬಾರದು. ಇಲ್ಲವಾದರೆ ಪಾಸಿಟಿವ್ ಎನರ್ಜಿಗೆ ತಡೆಯಾಗುತ್ತದೆ. 

- ಬೆಡ್ ರೂಂ ಯಾವಾಗಲೂ ತುಂಬಾ ಶುಚಿಯಾಗಿರಬೇಕು. ಕನಿಷ್ಟವೆಂದರೂ ದಿನಕ್ಕೆ 20 ನಿಮಿಷ ಬೆಡ್ ರೂಂ ಕಿಟಕಿ ಬಾಗಿಲು ತೆರೆದಿಡಬೇಕು. ಈ ಮೂಲಕ ಸರಿಯಾಗಿ ಗಾಳಿಯಾಡುವಂತೆ ಮಾಡಿ. 

- ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಮನೆಯೊಳಗೆ ಬಂದು ಪಾಸಿಟಿವ್ ಎನರ್ಜಿ ತುಂಬುತ್ತದೆ. ಯಾವಾಗಲೂ ದಕ್ಷಿಣಕ್ಕೆ ತಲೆ ಮಾಡಿಯೇ ಮಲಬೇಕು. ಇದರಿಂದ ಸಂಪತ್ತು ವೃದ್ಧಿಸುತ್ತದೆ. 

- ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಶ್ರೇಯಸ್ಸಾಗುತ್ತದೆ. ಮನೆ ಮಂದಿಗೆ ಅದೃಷ್ಟವನ್ನು ಇದು ತರುತ್ತದೆ. ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ಇಡಬೇಕು. 

- ಮೀನುಗಳು ನೋಡಲು ಸುಂದರ ಮಾತ್ರವಲ್ಲ ಹಣಕಾಸು ಲಾಭವನ್ನು ಕೂಡ ತರುತ್ತವೆ. ಹೀಗಾಗಿ ಮನೆಯಲ್ಲಿ ಅಕ್ವೇರಿಯಂ ಇದ್ದರೆ ಅದು ಹಣಕಾಸು ಸ್ಥಿರತೆಯ ಜೊತೆಗೆ ನೆಮ್ಮದಿಯನ್ನೂ ನೀಡುತ್ತದೆ. 

- ವಾಸ್ತು ಪ್ರಕಾರ ಗಡಿಯಾರ ಎನರ್ಜಿ ಹರಿದು ಬರುವಂತೆ ಮಾಡುತ್ತದೆ. ಹೀಗಾಗಿ ಮನೆಯಲ್ಲಿರುವ ಎಲ್ಲಾ ಗಡಿಯಾರಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದು ಇರಲಿ. 

- ಹಕ್ಕಿಗಳು ಸಾಮರಸ್ಯ, ಸಂಪತ್ತು ಮತ್ತು ಸಂತೋಷದ ಪ್ರತೀಕ. ಇವು ಸಂಪತ್ತು ಮತ್ತು ಎನರ್ಜಿಯನ್ನು ಕೂಡ ಆಕರ್ಷಿಸುತ್ತವೆ. ಹೀಗಾಗಿ ಬಾಲ್ಕನಿಯಲ್ಲಿ ಹಕ್ಕಿಗಳಿಗಾಗಿ ನೀರು ಮತ್ತು ಕಾಳು ಇಡಬೇಕು. 

- ವಾಸ್ತು ನಿಯಮದ ಪ್ರಕಾರ ನೇರಳೆ ಬಣ್ಣ ಸಂಪತ್ತಿನ ಸಂಕೇತ. ಹೀಗಾಗಿ ಆರ್ಕಿಡ್ನಂತಹ ನೇರಳೆ ಬಣ್ಣದ ಗಿಡಗಳನ್ನು ಮನೆಯೊಳಗೆ ಇಟ್ಟುಕೊಂಡರೆ ಶ್ರೇಯಸ್ಸಾಗುತ್ತದೆ.

 

(ಸಾಮಾಜಿಕ ಜಾಲತಾಣದಿಂದ ಸಂಗ್ರಹಿತ)