ವಿಂಡೋಸ್ ೯೮ ರಲ್ಲಿ ಕನ್ನಡ
ಬರಹ
ಹರಿಪ್ರಸಾದ್ ರವರು ಸೂಚಿಸಿದಂತೆ, ವೆಂಡೋಸ್ ೯೮ರಲ್ಲಿ ನಾನು ಯುನಿಕೋಡ್ ಸೌಲಭ್ಯವನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರ ಬಗ್ಗೆ ಬರೆಯುತ್ತಿದ್ದೇನೆ.
೧.ಮೊದಲಿಗೆ ನನ್ನ ಪಿಸಿಯಲ್ಲಿದ್ದ ಇಂಟರ್ನೆಟ್ ಎಕ್ಸ್ಪ್ಲೋರರನ್ನು IE 6 ಗೆ ಅಪ್ಡೇಟ್ ಮಾಡಿಕೊಂಡೆ.
೨.ನಂತರ ಕಂಟ್ರೋಲ್ ಪ್ಯಾನಲ್ ನ ಆಡ್-ರಿಮೂವ್ ಪ್ರೋಗ್ರಾಂಸ್ ಮೂಲಕ ಅರೇಬಿಕ್ ಸಪೋರ್ಟ್ ಆಡ್ ಮಾಡಿಕೊಂಡೆ. (ಇಂಟರ್ನೆಟ್ ಎಕ್ಸ್ಪ್ಲೋರರ್ ನ ಅರೇಬಿಕ್ ಸಪೋರ್ಟ್ ಆಡ್ ಮಾಡಬೇಕು)
೩. [:http://www.alphawor…] ತಾಣದಿಂದ ಕನ್ನಡ ಬೆರಳಚ್ಚು ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಂಡು ನನ್ನ ಸಿಸ್ಟಂನಲ್ಲಿ ಇನ್ಸ್ಟಾಲ್ ಮಾಡಿಕೊಂಡೆ. ಗಮನಿಸಿ ಇದಕ್ಕೆ ಐಬಿಎಂನವರ ಸೈಟ್ನಲ್ಲಿ ನೊಂದಾಯಿಸಿಕೊಳ್ಳಬೇಕು. ನೊಂದಾವಣೆ ಉಚಿತ.
೪.ತುಂಗ ಫಾಂಟನ್ನು ಫಾಂಟ್ಸ್ ಫೋಲ್ಡರಿಗೆ ಕಾಪಿ ಮಾಡಿಕೊಂಡೆ. ಇದೀಗ ಯುನಿಕೋಡ್ನಲ್ಲಿರುವ ಬರಹಗಳನ್ನ ಸರಾಗವಾಗಿ ಓದಲು ಸಾಧ್ಯವಾಗಿದೆ.
ರೋಹಿತ್.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ