ವಿ.ಆರ್.ಎಲ್ ನಲ್ಲಿ ಮಾಯವಾದ ಕನ್ನಡ

ವಿ.ಆರ್.ಎಲ್ ನಲ್ಲಿ ಮಾಯವಾದ ಕನ್ನಡ

ಬರಹ

ಗೆಳೆಯರೇ,

 

ವಿಜಯಾನಂದ್ ರೋಡ್ ಲೈನ್ಸ್ (VRL) ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿದಿರುವ ಸಂಸ್ಥೆ. ಕರ್ನಾಟಕದ ನೂರಾರು ಊರುಗಳಿಗೆ ಬಸ್ ಸಂಚಾರ ಕಲ್ಪಿಸಿರುವ ಹೆಮ್ಮೆಯ ಸಂಸ್ಥೆ ವಿಜಯಾನಂದ್ ರೋಡ್ ಲೈನ್ಸ್. ಸರ್ಕಾರಿ ಬಸ್ ಸೌಲಭ್ಯ ಇಲ್ಲದಿರುವ ಚಿಕ್ಕ ಪ್ರದೇಶಗಳಿಗೂ ಸಹ ವಿ.ಆರ್.ಎಲ್  ಬಸ್ ಗಳು ಇರುವುದು ಮೆಚ್ಚುಗೆಯ ಸಂಗತಿ. ಲಕ್ಷಾಂತರ ಕನ್ನಡಿಗರು ಪ್ರಯಾಣಿಸುವ ಕನ್ನಡಿಗರದ್ದೇ ಮಾಲಿಕತ್ವವಿರುವ  ಸಂಸ್ತೆಯ ಬಸ್ ಚೀಟಿಗಳಲ್ಲಿ ಕನ್ನಡ ಇರಲೆಂದು ಅಪೇಕ್ಷಿಸುವುದು ಸಹಜವಲ್ಲವೇ? ಇತ್ತೀಚಿಗೆ ಗೆಳೆಯ ವಸಂತ್ ವಿ.ಆರ್.ಎಲ್ ಬಸ್ಸಿನಲ್ಲಿ ಪ್ರವಾಸ ಹೋಗಿದ್ದ .ಕೆಳಗಿನ ಚಿತ್ರವನ್ನು ನೋಡಿ :

ಗದಗದಲ್ಲಿ ಸಂಕೇಶ್ವರ್ ಪ್ರಿಂಟರ್ಸ್ ಮೂಲಕ ಕನ್ನಡಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿರುವ ವಿ.ಆರ್.ಎಲ್ ಸಂಸ್ಥೆಯಿಂದಲೇ ಕೇವಲ ಇಂಗ್ಲಿಷ್ ಚೀಟಿ ಮುದ್ರಿಸುತ್ತಿರುವುದನ್ನು ನೋಡಿ ಬೇಸರವಾಯಿತು. 

ಕರ್ನಾಟಕದಲ್ಲಿ ಬೃಹದಾಕಾರವಾಗಿ ಬೆಳೆದಿರುವ ವಿ.ಆರ್.ಎಲ್ ಸಂಸ್ಥೆಯವರಿಗೆ ತಿಳಿ ಹೇಳೋಣ ಬನ್ನಿ. ಕರ್ನಾಟಕದಲ್ಲೇ ಬೀಡು ಬಿಟ್ಟಿರುವ, ಕನ್ನಡಿಗರೇ ಹೆಚ್ಚಾಗಿ ಬಳಸುವ, ಕನ್ನಡಿಗರದ್ದೇ ಮಾಲಿಕತ್ವವಿರುವ ವಿ.ಆರ್.ಎಲ್ ಸಂಸ್ತೆಯ ಚೀಟಿಗಳು ಕನ್ನಡದಲ್ಲಿ ಮುದ್ರಣವಾಗಬೇಕು. ಎಲ್ಲರು ಪತ್ರ ಬರೆದು ನಮ್ಮ ಬೇಡಿಕೆಯನ್ನು ತಿಳಿಸೋಣ.

ಮಿಂಚೆ ಬರೆಯಬೇಕಾದ ವಿಳಾಸಗಳು:- headoffice@vrllogistics.com,varurho@vrllogistics.com,sbcmo@vrllogistics.com