ವಿಚಕ್ಷಣಾ ಆಯೋಗದ ವಿಲಕ್ಷಣ ಕನ್ನಡ!
’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ ಮುದ್ರಿತವಾಗಿರುವ ಕೆಲವು ಕನ್ನಡ ಪದಗಳು ಇಂತಿವೆ:
’ಬ್ರಷ್ಟಾಚಾರ, ಬೃಷ್ಟಾಚಾರ, ಆಂದೊಲನ, ಅಂದೊಲನ, ವಿಳಸ, ಗೊತ್ತುವಿಳಿ, ಜಾಗೃತೆ, ಜಾಗೃತಾ ಸಪ್ತಾಹ, ಜಾಗೃತ ಸಪ್ತಾಯ, ಆಭಿವೃದ್ಧಿ, ಸ್ಪೂರ್ತಿ, ನಿರಕ್ಷಿಸುತ್ತದೆ, ಅವದಿ, ಹೊರಾಟ, ಆಗತ್ಯವಾಗಿದೆ, ಪ್ರಚೊದಿಸುವದರ, ಹೊರಾಡುವಂತೆ, ತಿಳುವಳಿಕೆ, ಫೊಸ್ಟರ್‌ಗಳು, ಉಪಯೊಗಿಸುವ, ಆಡಳಿತೆ, ಸಾರ್ಮಥ್ಯ, ಆವಕಾಶ, ಅಗತ್ಯತೆ, ಆಯೊಗ, ಸುತ್ರಗಳನ್ನು.......’. ಹೀಗೆ ಸೂತ್ರವಿಲ್ಲದ ಗಾಳಿಪಟವಾಗಿ ವಿಚಕ್ಷಣಾ ಆಯೋಗದ ಕನ್ನಡ ವಿಜೃಂಭಿಸಿದೆ!
ಇನ್ನು, ಜಾಹಿರಾತಿನ ನಿರೂಪ ಮತ್ತು ವ್ಯಾಕರಣ ಇವು ದೇವರಿಗೇ ಪ್ರೀತಿ! (ಜಾಗೃತ ಸಪ್ತಾಯದಂಥ) ’ಘಟನೆಗಳನ್ನು ಆಚರಿಸುವುದು’ ಎಂದು ಒಂದು ಕಡೆ ಹೇಳಲಾಗಿದೆ! ಇದರ ಅರ್ಥವನ್ನು ವಿಚಕ್ಷಣರಿಂದ ತುಂಬಿರುವ ವಿಚಕ್ಷಣಾ ಆಯೋಗವೇ ವಿವರಿಸಬೇಕು.
ಕನ್ನಡವೆಂದರೆ ಈ ಜನರಿಗೆ ಅಷ್ಟು ತಾತ್ಸಾರವೇ? ಜಾಹಿರಾತನ್ನು ಕನ್ನಡದಲ್ಲಿ ಕೊರೆದವಗೆ ಇ ಸಲದ ಖನ್ನಡ ರಜ್ಯೊಸ್ತವ ಪೃಸಶ್ತಿ ಮತ್ತು ಘಣರಜ್ಯೊಸ್ತವ ಸಂರ್ದಬದಲ್ಲಿ ’ಪದ್ಮಭೀಷಣ’ ಬಿದುರು ಕೋಡಬೆಕಲ್ಲವೆ?