ವಿಚಿತ್ರದವಳು..

ವಿಚಿತ್ರದವಳು..

ಬರಹ

ಕರೆಯಲ್ಲಿದ್ದಾಗಲೆಲ್ಲ..
ನೀ ಸಿಗಲೇ ಇಲ್ಲಾ..
ನಿನ್ನ ನೋಡಿ ಅದೆಷ್ಟು,
ದಿನಗಳಾದವು ಎಂದೆಲ್ಲಾ,..
ಕೊರೆವವಳು..
ಎದುರು ಬಂದು ನಿಂತಾಗ..
ಇದೇಕೆ, ಹೀಗೆ
ಮಾತು ಮರೆತವಳಂತೆ,
ಮೌನವಾದಳು ??

ಪತ್ರಗಳಲೆಲ್ಲ.. ತನ್ನ
ಪದ-ಪಾಂಡಿತ್ಯವ.. ಮೆರೆದವಳು,
ಇದೇಕೆ ಹೀಗೆ..
ನಾ ಎದುರು ಬಂದಾಗ..
ಪದಗಳಿಗೆ ಬರವಿದ್ದಂತೆ,
ಪರದಾಡುವಳು ??

ಇವಳೇನಾ ಅವಳು.??
ಎಂದೆಲ್ಲಾ ಅನಿಸುವವಳು.,
ಮಾತಿಲ್ಲದಿದ್ದರೇನಂತೆ..
ಕ್ಷಣದಲ್ಲಿ..ಬರೀ..
ಕಣ್ಣಲ್ಲೇ..ಎಲ್ಲವನೂ,
ಹೇಳಬಲ್ಲವಳು..
ಈ ನನ್ನ, ವಿಚಿತ್ರದವಳು..