ವಿಚ್ಛೇದನ
ಕವನ
ವಿಚ್ಛೇದನ
ನೂರು ಸ್ಕಲನವಾದರೂ
ಪ್ರೇಮದ ರಸ ಹುಟ್ಟದ ಈ ಸಂಬಂಧ
ಬೇರೆಯಾಗದೆ ನರಳಿ ಹೆಣಗುತ್ತಿದೆ ಎಂದರೆ
ಅದು ಬರೀ ಒಂದು ಒಪ್ಪಂದ.
ಸತ್ತ ನಗು, ಸುಡುವ ಬಿಗು,
ಕುದಿಯುವ ನಿರಾಶೆ, ವಿಷಾದ,
ಸಾಕು ಸಾಕು ಈ ಸೆಣಸಾಟ.
ಇನ್ನೂ ಓಡುವುದರಲಿ ಅರ್ಥವಿದೆಯೇ
ಈ ಜೊತೆಯಿಲ್ಲದ ಓಟ.
ಇಬ್ಬರಿಗೂ ಬೇಕು ಈಗ ನಿಶ್ಚಿಂತೆಯ ನಿದಿರೆ
ಆದರೆ ಬೇರೆ ಬೇರೆ ಮಂಚದಲ್ಲಿ !
ಹೂವಿನ ಮುಖವಾಡ ಹೊತ್ತು,
ಇನ್ನೂ ಎಷ್ಟು ದಿನ ಇರಬೇಕು
ಈ ಮನ ಚುಚ್ಚುವ ಮುಳ್ಳಿನಲ್ಲಿ.
ರಾಜೇಂದ್ರಕುಮಾರ್ ರಾಯಕೋಡಿ
Copyright©
Comments
ಉ: ವಿಚ್ಛೇದನ
In reply to ಉ: ವಿಚ್ಛೇದನ by Soumya Bhat
ಉ: ವಿಚ್ಛೇದನ
In reply to ಉ: ವಿಚ್ಛೇದನ by Rajendra Kumar…
ಉ: ವಿಚ್ಛೇದನ
In reply to ಉ: ವಿಚ್ಛೇದನ by S.NAGARAJ
ಉ: ವಿಚ್ಛೇದನ