ವಿಚ್ಛೇದನ ಒಂದು ಸಮಸ್ಯೆ

ವಿಚ್ಛೇದನ ಒಂದು ಸಮಸ್ಯೆ

ಬರಹ

ಇತ್ತೀಚಿನ ದಿನಗಳಲ್ಲಿ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೂರಕವಾಗಿ ನಮ್ಮ ಸರ್ವೋಚ್ಛ ನ್ಯಾಯಾಲಯವೂ ಕೂಡ ಹಿಂದೂ ವೈವಾಹಿಕ ಪದ್ದತಿಯಲ್ಲಿನ ನ್ಯೂನತೆಗಳನ್ನು ಬೊಟ್ಟು ಮಾಡಿ ತೋರಿಸುತ್ತಿದೆ.
ಇಲ್ಲಿ ತಪ್ಪು ಯಾರದು ಎನ್ನುವ ಜಿಜ್ಙಾಸೆಗಿಂತ ಇದರಿಂದ ವಿಚ್ಚೇದಿತ ದಂಪತಿಗಳ ಮಕ್ಕಳ ಮೇಲಾಗುವ ಪರಿಣಾಮಗಳು ನಿಜಕ್ಕೂ ಆಘಾತಕಾರಿ.
ದೈಹಿಕ ಮತ್ತು ಮಾನಸಿಕ ನ್ಯೂನತೆಗಳಿಂದಾಗುತ್ತಿರುವ ಮತ್ತು ವರದಕ್ಷಿಣೆ ಕಿರುಕುಳಗಳಿಂದಾಗುತ್ತಿರುವ ವಿಚ್ಛೇದನಗಳು ಇಲ್ಲಿ ನಗಣ್ಯ. ಅದು ನ್ಯಾಯ ಸಮ್ಮತವೂ ಕೂಡ.

ಈ ವಿಚ್ಚೇದನಗಳಿಗೆ ಕಾರಣವೇನಿರಬಹುದು?

ಅತಿಯಾದ ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಕಾರಣವಿರಬಹುದೆ?
ಅಥವ ಅತಿಯಾದ ಸ್ವಾತಂತ್ರ್ಯ (ಗಂಡು ಹೆಣ್ಣು ಇಬ್ಬರಿಗೂ) ಕಾರಣವಿರಬಹುದೆ?
ವಿದ್ಯಾವಂತರಲ್ಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ಸಮಸ್ಯೆಗೆ ಪರಿಹಾರವಿಲ್ಲವೆ?
ವಿಚ್ಚೇದನಕ್ಕೆ ಒಳಗಾಗುವ ದಂಪತಿಗಳ ಪೋಷಕರ ಜವಾಬ್ದಾರಿ ಏನು?
ಅಥವ ಲಿಂಗ ಅನುಪಾತದಲ್ಲಾಗುತ್ತಿರುವ ಏರುಪೇರು ಇದಕ್ಕೆ ಕುಮ್ಮಕ್ಕು ನೀಡುತ್ತಿದೆಯೆ?
ಅಥವ ಪ್ರತಿ ಪ್ರಕರಣಕ್ಕೂ ಅದರದ್ದೇ ಆದ ಬೇರೆಯಾದ ಆಯಾಮವಿದೆಯೆ?
ಭಾರತೀಯರಲ್ಲಿ ಸಹನೆ ಕಡಿಮೆಯಾಗುತ್ತಿರುವುದರ ಧ್ಯೋತಕವೆ?
ವಿಷಯ ಸಂಕೀರ್ಣ ಮತ್ತು ಗಂಭೀರ. ಪರಿಹಾರವೇನು? ಸಮಾಜವೇ ಹುಡುಕಬೇಕಾಗಿದೆ.
ಇದಕ್ಕೊಂದು ಅರ್ಥ ಪೂರ್ಣ ಚರ್ಚೆಯಾಗಬೇಕಿದೆ. ಸಂಪದದಂತಹ ಸಂಪನ್ನ ವೇದಿಕೆಯಲ್ಲಿ ಚರ್ಚೆಯಾಗಿ ಅದಕ್ಕೊಂದು ಪರಿಹಾರ ದೊರೆತರೆ..................

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet