ವಿಜಯದಶಮಿ

ವಿಜಯದಶಮಿ

ಬರಹ

ಅಂದು
ಅಂದು ವಿಜಯದಶಮಿ
ಅಧರ್ಮವ ಹತ್ತಿಕ್ಕಿ ಧರ್ಮಕ್ಕೆ ಇಂಬು ಕೊಟ್ಟ ದಿನ
ಅದು ತ್ರೇತಾಯುಗ

ಶ್ರೀ ರಾಮ ಬಿಲ್ಲಿನ ಹುರಿಯೆಳದು
ರಾವಣನ ಸೊಲ್ಲು ತುಳಿದು
ವಿಭೀಷಣನ ಮೇಲೆಳೆದ ದಿನ

ಇಂದು
ಇಂದು ಕೂಡ ವಿಜಯದಶಮಿ
ಧರ್ಮದ ಸೊಲ್ಲಿಲ್ಲ, ಅಧರ್ಮದ ಹಾಹಾಕಾರ ಎಲ್ಲೆಲ್ಲು
ಇದು ಕಲಿಯುಗ

ಧರ್ಮಿಷ್ಠರ ಕಾಲೆಳೆದು
ದುಷ್ಟರ ಮೇಲೆಳೆದು
ನ್ಯಾಯ ನಿಷ್ಠುರತೆ, ಸತ್ಯ ಅಹಿಂಸೆಯ ತುಳಿವ ದಿನ.

ಧರ್ಮದ ಸೋಗು, ಅಧರ್ಮದ ಕೂಗು
ಸತ್ಯದ ಬೆನ್ನು ಬಾಗು, ಸುಳ್ಳಿಗೆ ಮೃಷ್ಟಾನ್ನದ ತೇಗು
ಅಹಿಂಸೆಯ ನೆಲ ಜವುಗು, ಹಿಂಸಾಚಾರದ ಜಿನುಗು

ತ್ರೇತಾಯುಗಕ್ಕೆ ತಾವಿಲ್ಲ, ಇದು ಕಲಿಯುಗ, ಹೋಗು ಹೊರಟ್ ಹೋಗು

ವಿಜಯಶಂಕರ ಮೇಟಿಕುರ್ಕೆ ( ೧೯೮೭ ರ ಆಶ್ವಯುಜ ಶುದ್ದ ದಶಮಿ)