ವಿಜಯ ಕರ್ನಾಟಕದ "ಸಾಧನೆ ವೇದನೆ"

ವಿಜಯ ಕರ್ನಾಟಕದ "ಸಾಧನೆ ವೇದನೆ"

Comments

ಬರಹ

ಯೆಡ್ಡ್ಯೂರಪ್ಪ ಸರಕಾರಕ್ಕೆ ಎರಡು ವರ್ಷ ತುಂಬಿದ ಈ ಸಂದರ್ಭದಲ್ಲಿ ನಮ್ಮ ಕರ್ಣಾಟಕದ ನಂ1 ಪತ್ರಿಕೆಯಾದ ವಿಜಯ ಕರ್ಣಾಟಕದಲ್ಲಿ ಸಾಧನೆ ವೇದನೆ ಎಂಬ ಅಸಮಂಜಸ ತಲೆಬರಹದಡಿ ಈ ಸರಕಾರದ ಸಚಿವರ ಕಾರ್ಯವೈಖರಿಯನ್ನು ಜನರ ದೃಷ್ಟಿಯಿಂದ ವಿಮರ್ಶಿಸಲಾಗಿದೆ ಎಂದು ಹೇಳಿಕೊಳ್ಳುತ್ತಾ ಪ್ರತಿ ಸಚಿವರ ಬಗ್ಗೆ ಬರೆಯಲಾಗಿದೆ. ಇದರಲ್ಲಿ ಎದ್ದು ಕಾಣುವ ಅಂಶವೆಂದರೆ ಎಲ್ಲಾ ಸಂದರ್ಭದಲ್ಲೂ ಗಣಿಧಣಿಗಳ ಮಾನ ಕಾಪಾಡುವ ರೀತಿಯಲ್ಲಿ ವರದಿ ಮಾಡಲಾಗಿರುವುದು.

 

ಈ ಹಿಂದೆ ಯಡ್ಡಿ ಸರಕಾರವನ್ನು ಇದೇ ಗಣಿಧಣಿಗಳು ನುಂಗಲು ಹೊರಟಾಗ ಸಹ ಇಂಥದೇ ಬರಹಗಳನ್ನು ಹರಿದುಬಂದಿದ್ದವು. ಎರಡು ಬಣಗಳಲ್ಲಿ ಯಾರ ಕೈ ಮೇಲಾಗುತ್ತದೆ ಎಂದು ಮೊದಲಿಗೆ ಕಾದು ನೋಡಿದ ಈ ಪತ್ರಿಕೆಯವರು ಯಾವಾಗ ರೆಡ್ಡಿ ಬಣದ ಮೇಲುಗೈಯಾಗುವುದು ಖಚಿತವಾಯಿತೋ ಆಗಿನಿಂದಲೇ ಯಡ್ಡಿಯವರನ್ನು ಸಾಧ್ಯವಾದಷ್ಟೂ ಟೀಕಿಸುತ್ತಾ, ರೆಡ್ಡಿಗಳನ್ನು ಹೊಗಳುತ್ತಾ ಬಂದಿದೆ. ಆದರೆ ಇಂದಿನ ಸಾಧನೆ ವೇದನೆ ನೋಡಿದ ಮೇಲಂತೂ ಈ ಪತ್ರಿಕೆಯ ಮೇಲೂ ಈ ಸಂಪಾದಕರ ಗೋಸುಂಬೆತನದ ಬಗ್ಗೆಯೂ ವಾಕರಿಕೆ ಬಂದಂತಾಯಿತು.

 

ಕರ್ಣಾಟಕವು ಕಂಡ ಅತ್ಯಂತ ಅನುಪಯುಕ್ತ ಕಂದಾಯ ಸಚಿವ ಕರುಣಾಕರ ರೆಡ್ಡಿ "ವಿಧಾನಸೌಧದ ಕಡೆ ಬರುವುದು ಅಪರೂಪವಾದರೂ ಕುಳಿತಲ್ಲೇ ಇಡೀ ಇಲಾಖೆಯನ್ನು ಆಪರೇಟ್ ಮಾಡು"ತ್ತಾರಂತೆ.. ಕಂದಾಯ ಇಲಾಖೆಯನ್ನು ನೋಡಿಕೊಳ್ಳುವುದೆಂದರೆ ಯಾವುದೋ ಸಣ್ಣಪುಟ್ಟ ನಗರಪಾಲಿಕೆಯನ್ನು ನಿರ್ವಹಿಸಿದಷ್ಟು ಸುಲಭ ಎಂಬ ಭಾವನೆ ಈ ವಾಕ್ಯ ನೋಡಿ ಅನಿಸುವುದಿಲ್ಲವೇ.. ಇನ್ನು ಉಳಿದ ವಿವರಗಳನ್ನು ನೋಡಿದಲ್ಲಿ ಹೇಸಿಗೆಯಾಗುತ್ತದೆ.

 

ಆರೋಗ್ಯ ಸಚಿವ ಶ್ರೀರಾಮುಲು ಕನ್ನಡಿಗರಿಗೆ ಆರೋಗ್ಯ ಕವಚ ಕೊಟ್ಟು ಭಾರೀ ಸಾಧನೆ ಮಾಡಿದ್ದಾರಂತೆ. ಯಾರ ಕಣ್ಣಿಗೆ ಮಣ್ಣು ಹಾಕುತ್ತೀರಿ ಸ್ವಾಮಿ ನೀವು? ಆರೋಗ್ಯ ಕವಚದ ವ್ಯಾನುಗಳನ್ನು ಯಾರು ಓಡಿಸುತ್ತಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ವಂಚಕ ಸತ್ಯಂ ರಾಮಲಿಂಗಾರಾಜುವಿನ ಮಗನಾದ ತೇಜರಾಜು ಒಡೆತನದ ಮೇತಾಸ್ (MAYTAS, reverse of SATYAM) ಕಂಪೆನಿಯು ನೋಡಿಕೊಳ್ಳುತ್ತದೆ ಈ ವ್ಯಾನುಗಳ ವ್ಯವಸ್ಥೆಯನ್ನು. ಇದರಲ್ಲಿ ಏನೇನು ವ್ಯವಹಾರಗಳಾಗಿವೆಯೋ ಯಾರು ಬಲ್ಲರು?

 

 

ಇನ್ನು ಗಾಲಿ ಜನಾರ್ಧನ ರೆಡ್ಡಿಗಾರು "ನಂಬಿದವರಿಗೆ ಸಹಾಯಹಸ್ತ ಚಾಚುವ, ತಿರುಗಿ ಬಿದ್ದವರ ವಿರುದ್ಧ ಸಮರ ಸಾರುವ ಗುಣ"ದವನಂತೆ, ಪ್ರವಾಸೋದ್ಯಮ ಇಲಾಖೆಗೆ ಸಾವಿರಾರು ಕೋಟಿ ಹಣ ಹರಿದುಬರುತ್ತಿದೆಯಂತೆ, ಹೆಲಿಟೂರಿಸಂ ಬರ್ತಾ ಇದೆಯಂತೆ (ಬಹುಶಃ ಬಳ್ಳಾರಿಗೆ ಹೋಗಲು ಇದೇ ಅತ್ಯುತ್ತಮ ಮಾರ್ಗವಿರಬಹುದೆಂಬ ಕಾರಣಕ್ಕೆ ಇರಬಹುದು)...

 

 

ಇದು ನಮ್ಮ ನಂ1 ಪತ್ರಿಕೆ ರೆಡ್ಡಿಗಳ ಗಣಿಮನಿಗೆ ಮಣಿದಿರುವ ರೀತಿ.. ಅದೇ ಒಂದು ಮಾತಿದೆಯಲ್ಲ.. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಅಂತಾ ಹಾಗಾಯ್ತು ಇದು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet