ವಿಜಯ ದಶಮಿಯ ಹಾರೈಕೆ

ವಿಜಯ ದಶಮಿಯ ಹಾರೈಕೆ

ಕವನ

ವಿಜಯ ದಶಮಿಯ ಹಾರೈಕೆ

ಹೋಗಲಿ ಸೋಲಿನ ಕಹಿ ನೆನಪುಗಳು
ಜಾಗವ ತುಂಬಲಿ ಗೆಲುವು  ||
ಬೇಗನೆ ಸಾಗಲಿ ಇನ್ನೀ ಪಥದೊಳು
ವೇಗಕೆ ವಿಜಯವು ಬಲವು ||

ತೊಳಲಾಟಕೆ ಕೊನೆಯಾಗಲಿ ಇಂದು
ಗೆಲುವಿನ ನಗೆ ಹೊರಬಂದು |
ಚೆಲುವಿನ ಅರಳಿದ ಸಿರಿ ಸಂಪದಗಳು
ಹೊಳೆಯಾಗಲಿ ಇಳೆಯೊಳಗಿಂದು    ||


                                   - ಸದಾನಂದ