ವಿಜ್ಞಾನಿಗಳೊಡನೆ ರಸನಿಮಿಷಗಳು !

ವಿಜ್ಞಾನಿಗಳೊಡನೆ ರಸನಿಮಿಷಗಳು !

ಬರಹ

ಈ ಶೀರ್ಷಿಕೆಯಲ್ಲಿ ಬರೆದ ಲೇಖನ ಚೆನ್ನಾಗಿದೆ. ನಾನು ಸಂಪದೀಯರಿಗೆ ಮತ್ತೊಬ್ಬ ಪ್ರಖ್ಯಾತ ಅಂತರರಾಷ್ಟ್ರೀಯಮಟ್ಟದ ಭೌತಶಾಸ್ತ್ರದ ವಿಜ್ಞಾನಿ, ಆಂಗ್ಲಭಾಷೆಯಲ್ಲಿ, ಕನ್ನಡದಲ್ಲಿ ಸಮರ್ಥವಾಗಿಯೂ, ನಿರರ್ಗಳವಾಗಿಯೂ ಮಾತಾಡಬಲ್ಲ, ಅತ್ಯಂತ ನಿಖರವಾಗಿ ಬರೆಯಬಲ್ಲ, ಕನ್ನಡಭಾಷೆಯಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿರುವ, ಮೇಲಾಗಿ ನಮ್ಮ ತಾಯಿನು ಡಿಯನ್ನು ಅಂತಾರಾಷ್ಟ್ರಿಯ ಮಟ್ಟದಲ್ಲಿ ಜನಪ್ರಿಯಮಾಡುತ್ತಿರುವ, ಇತ್ತೀಚಿನದಿನಗಳಲ್ಲಿ ಕರ್ನಾಟದ ಪ್ರಮುಖನಗರಗಳಲ್ಲಿ ತಮ್ಮ ಸ್ವಂತಖರ್ಚಿನಿಂದ ಸುತ್ತಿ, ನಮ್ಮ ಪರಂಪರೆ, ನಮ್ಮ ಸಂಸ್ಕೃತಿಯನ್ನು ಜನರಿಗೆ ಸಾರಿಹೇಳುತ್ತಿರುವ, "ಕರ್ಣಾಟಕ ಭಾಗವತ " ದ ಸಂಪಾದಕ, ಡಾ. ಎಚ್. ಆರ್. ಚಂದ್ರಶೇಖರ್ ರವರನ್ನು ಪರಿಚಯಿಸಿರೆಂದು, ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ. ಈಗ ಅವರು ಸುದ್ದಿಯಲ್ಲಿದ್ದಾರೆ. ಅಪಾರಶ್ರದ್ಧೆ, ಆಳವಾದ ಅಧ್ಯಯನ, ತಾಳ್ಮೆ, ಪರಿಶ್ರಮಗಳಿಗೆ ಮೂರ್ತವೆತ್ತಂತಿರುವ ಪ್ರೊ. ಚಂದ್ರಶೇಖರ್ ಅತಿವಿನಯವಂತರೂ, ಸ್ವದೇಶಪ್ರೇಮಿಗಳೂ ಹೌದು. ಸ್ಪೂರ್ತಿಯ ಚಿಲುಮೆಯಂತಿರುವ ಅವರಮಾತುಗಳು ಅತ್ಯಂತಸ್ಪೂರ್ತಿದಾಯಕ. ಈ ತಿಂಗಳ, ೧೧/೧೨, ತಾರೀಖಿನ ರ ’ದಟ್ಸ್ ಕನ್ನಡ’ ಇ-ಪತ್ರಿಕೆ ನೋಡಿ ನಾನು ಪ್ರಭಾವಿತನಾಗಿದ್ದೇನೆ. ಅವರ ಮಾತುಗಳನ್ನು ಕೇಳಲು ಆತುರನಾಗಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet