ವಿಜ್ಞಾನಿ ಮತ್ತು ಸೌಂದರ್ಯ : ರಿಚರ್ಡ್ ಫೆಯ್ನ್ ಮನ್ ಚಿಂತನೆ

ವಿಜ್ಞಾನಿ ಮತ್ತು ಸೌಂದರ್ಯ : ರಿಚರ್ಡ್ ಫೆಯ್ನ್ ಮನ್ ಚಿಂತನೆ

ಬರಹ
ರಿಚರ್ಡ್ ಫೆಯ್ನ್ ಮನ್  ಒಬ್ಬ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಮತ್ತು ನಾವೆಲ್ಲಾ ಕಂಡ ಉತ್ತಮ ದಾರ್ಶನಿಕರಲ್ಲಿ ಒಬ್ಬ. ಬೂಟಾಟಿಕೆ ಮತ್ತು ಡಂಭಾಚಾರವನ್ನು ವಿರೋಧಿಸುತ್ತಿದ್ದ ಫೆಯ್ನ್ ಮನ್ ತಮ್ಮ ನೇರ ನಡೆ ನುಡಿಗಳಿಂದ, ನಿಷ್ಟುರತೆಯಿಂದ ಬಹಳ ಪ್ರಸಿದ್ಧ. (ನಮ್ಮ ಕಾರಂತಜ್ಜ ಇದ್ದ ಹಾಗೆ). ಕೊನೆಯ ದಿನಗಳ ವರೆಗೂ ಕುತೂಹಲ ಮತ್ತು ವ್ಯವಸ್ಥೆಯ ವಿರುಧ್ಧ ಸಿಟ್ಟನ್ನು ಉಳಿಸಿಕೊಂಡು ಬಂದಿದ್ದ ಫೆಯ್ನ್ ಮನ್ ರ ಜೀವನವನ್ನು ತಿಳಿಯಲು Surely you are joking Mr. Feynmann ಎಂಬ ಬಹಳ ಹಾಸ್ಯಭರಿತ ಮತ್ತು ಮನಮುಟ್ಟುವ ಪುಸ್ತಕವನ್ನು ಆಸಕ್ತಿ ಇರುವವರು ಓದಬಹುದು. ವಿಕಿಪೀಡಿಯಾ ಪೇಜಿನ ಕೆಳಗೆ ಮತ್ತು ಯೂಟ್ಯೂಬಿನಲ್ಲಿ ಅನೇಕ ವೀಡಿಯೋಗಳು ಕೂಡ ಲಭ್ಯ ಫೆಯ್ನ್ ಮನ್ ಬಗ್ಗೆ.
ಫೆಯ್ನ್ ಮನ್ ರವರ ಕೆಲವು ವಿಚಾರಗಳನ್ನು ಭಾಷಾಂತರ ಮಾಡೋಣ ಎನಿಸಿತು. ಇದರಲ್ಲಿ ಮೊದಲ ಪ್ರಯತ್ನ ಇಲ್ಲಿದೆ. ಯಾರಿಗಾದರೂ ಇದು ಉಪಯುಕ್ತ ಎನಿಸದರೆ ಮುಂದುವರೆಸುವ ವಿಚಾರವಿದೆ.  What do you care what other people think? ಪುಸ್ತಕದಿಂದ ಆಯ್ದ ಕೆಲವು ಪ್ಯಾರಗಳ ಅನುವಾದ ಇಲ್ಲಿದೆ. ಮೂಲ ಪಾಠ ಅಮೆಜಾನ್ ಪುಸ್ತಕ preview ನಲ್ಲಿ ನೋಡಬಹುದು. ಪುಸ್ತಕದ ಮೊದಲ ಪುಟದಲ್ಲೇ ಈ ಪ್ಯಾರಗಳುಇವೆ.

[ಅನುವಾದ ಪ್ರಾರಂಭ]

ನನಗೆ ಒಬ್ಬ ಕಲಾಕಾರ ಗೆಳೆಯನಿದ್ದಾನೆ. ಒಮ್ಮೊಮ್ಮೆ ನಾನು ಅವನು ಹೇಳಿದ್ದನ್ನು ಒಪ್ಪುವುದಿಲ್ಲ. ಉದಾಹರಣೆಗೆ ಒಂದು ಹೂವನ್ನು ತೋರಿಸಿ "ನೋಡು ಎಷ್ಟು ಚೆನ್ನಾಗಿ ಇದೆ ಅಲ್ಲವೇ ಎನ್ನುವನು". ನಾನು ಒಪ್ಪುವೆ. ಆದರೆ ಮುಂದೆ ಆಟ ಹೇಳುವುದು "ಕಲಾವಿದನಾಗಿ ನಾನು ಈ ಹೂವು ಎಷ್ಟು ಸುಂದರ ಎಂದು ನೋಡಲು ಸಾಧ್ಯ, ನೀವು ವಿಜ್ಞಾನಿಗಳು ಅದನ್ನು ನೋಡಲು ಸಾಧ್ಯವಿಲ್ಲ. ಅದನ್ನು ಅಗೆದು-ಬಗೆದು ಅದರ ಅಂದವನ್ನು ನಾಶ ಮಾಡುತ್ತೀರಾ" ಎಂದು. ನನಗೆ ಅನಿಸುವ ಮಟ್ಟಿಗೆ ಆವನು ಸ್ವಲ್ಪ ತಿಕ್ಕಲ!

 

ಮೊದಲನೆಯದಾಗಿ ಅವನಿಗೆ ಕಾಣುವ ಸೌಂದರ್ಯ ನನಗೂ ಸೇರಿ ಎಲ್ಲರಿಗೂ ಲಭ್ಯ ಎಂದು ನಾನು ನಂಬುತ್ತೇನೆ. ನನ್ನ ಸೌಂದರ್ಯ ಪ್ರಜ್ಞೆ ಅವನಷ್ಟು ಉನ್ನತವಾಗಿ ಇಲ್ಲದಿರಬಹುದಾದರೂ, ಆ ಸೌಂದರ್ಯವನ್ನು ನಾನು ಆಸ್ವಾದಿಸುವುದಂತೂ ಹೌದು. ಆದರೆ, ಅದರ ಜೊತೆ ಹೂವಿನಲ್ಲಿ ಆತ ಕಾಣುವುದಕ್ಕಿಂತ ಹೆಚ್ಚಿನದನ್ನು ನಾನು ಕಾಣುತ್ತೇನೆ. ನಾನು ಹೂವಿನ ಜೀವಕೋಶಗಳನ್ನು ಕಲ್ಪಿಸಿಕೊಳ್ಳಬಲ್ಲೆ. ಆ ಜೀವಕೋಶಗಳಲ್ಲಿ ಕೂಡ ಸೌಂದರ್ಯ ಇದೆ. ಹೂವಿನಲ್ಲಿ ಸೌಂದರ್ಯ ಸೆಂಟಿ ಮೀಟರುಗಳ ಗಾತ್ರದಲ್ಲಿ ಮಾತ್ರವಲ್ಲ, ಅದಕ್ಕಿಂತ ಸಣ್ಣ ಗಾತ್ರದಲ್ಲೂ ಇದೆ.

ಜೀವಕೋಶಗಳಲ್ಲಿ ಸಂಕೀರ್ಣ ಚಟುವಟಿಕೆಗಳು ನಡೆಯುತ್ತಾ ಇರುತ್ತವೆ. ಹೂವಿನ ಬಣ್ಣಗಳು ಕೀಟಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಮಾಡಿಸಿಕೊಳ್ಳಲು ವಿಕಾಸವಾದವು ಅನ್ನುವುದು ಆಸಕ್ತಿಕರ. ಹಾಗೆ ಹೇಳಿದಾಗ ಕೀಟಗಳಿಗೂ ಬಣ್ಣಗಳು ಕಾಣುತ್ತವೆ ಎಂದಾಯಿತಲ್ಲ? ಅದರಿಂದ
ಬರುವ ಮುಂದಿನ ಪ್ರಶ್ನೆ ಹಾಗಾದರೆ ನಮಗೆ ಇರುವಂತೆಯೇ ಸೌಂದರ್ಯ ಪ್ರಜ್ಞೆ ಕೀಟಗಳಿಗೂ ಇದೆಯೇ?

 

ಹೀಗೆ ನಮಗೆ ಇರುವ ವಿಜ್ಞಾನದ ತಿಳುವಳಿಕೆಯಿಂದ ಅನೇಕ ಆಸಕ್ತಿಕರ ಪ್ರಶ್ನೆಗಳು ಮತ್ತು ವಿಷಯಗಳು ಹೊರಹೊಮ್ಮುತ್ತವೆ. ವಿಜ್ಞಾನದ ತಿಳಿವು ಪ್ರಪಂಚದ ಬಗ್ಗೆ ನಮಗೆ ಇರುವ ಉತ್ಸಾಹ ಮತ್ತು ಗೂಢತೆಯ ಅನುಭವವನ್ನು ಹೆಚ್ಚಿಸುತ್ತದೆ ಹೊರತು ಕಮ್ಮಿ ಮಾಡುವುದಿಲ್ಲ. It only
adds. I dont know how it subtracts.