ವಿದುರ ಹೇಳಿದ್ದು..

ವಿದುರ ಹೇಳಿದ್ದು..

ಬರಹ

ಸುಲಭದಿ ಸಿಗುವರೆಲ್ಲೆಡೆ ಪ್ರಿಯನುಡಿವ ಜನ


ರಾಜನ ಕಂಡೊಡನೆ ಮಾಡುವರು ಭಜನ I


ಅಪ್ರೀಯ ದಿಟ ನುಡಿವವರು ಸಿಗರು


ನುಡಿದರೂ ಆಲಿಪರು ವಿರಳವಾಗಿಹರು II


 


ಸಂಸ್ಕೃತ ಮೂಲ


ಸುಲಭಾ: ಪುರುಷಾ: ರಾಜನ್ ಸತತಂ ಪ್ರಿಯವಾದಿನ:I


ಅಪ್ರೀಯಸ್ಯ ಚ ಪಥ್ಯಸ್ಯ ವಕ್ತ ಶ್ರೋತಾ ಚ ದುರ್ಲಭ: II


 


ಮೇಲಿನ ಮಾತನ್ನು ಮಹಾಮಂತ್ರಿ ವಿದುರನು ಧರ್ಮರಾಜನಿಗೆ ಹೇಳಿದ್ದು..


------------------------------------------------------------------


ತುಂಬಿದ ಕೊಡ ತುಳುಕಲ್ಲ..


 


ತುಂಬಿದ ಕೊಡವದು ಇರುವುದು ಸ್ಥಬ್ದ


ಅರ್ಧವಾದುದೇ ಮಾಡುವುದು ಶಬ್ದ I


ಶಾಂತವಿಹರು ವಿದ್ವಾನರು ಅರಿತು ಸರ್ವ


ಮೂಢರಂತೆ ಮಾತನಾಡಿ ತೋರರು ಗರ್ವ II


 


ಸಂಸ್ಕೃತ ಮೂಲ


ಸಂಪೂರ್ಣ ಕುಂಭೋ ನಕರೋತಿ ಶಬ್ದಂ ಅರ್ಧೋಘಟೋ ಘೋಷ ಮುಪೈತಿ ನೂನಂ I


ವಿದ್ವಾನ್ ಕುಲಿನೋ ನಾ ಕರೋತಿ ಗರ್ವಂ ಗುಣೈರ್ವಿಹೀನಾ ಬಹು ಜಲ್ಪಯಂತಿ II


 


**ಈ ರೀತಿ ಅನುವಾದಿಸುವ ಮೊದಲ ಪ್ರಯತ್ನ